ಮತದಾರರ ಗುರುತಿನ ಚೀಟಿ ಪ್ರತಿ ಕೊಡಲು ನಕಾರ

KannadaprabhaNewsNetwork |  
Published : Jun 25, 2025, 01:18 AM IST
7 | Kannada Prabha

ಸಾರಾಂಶ

ಕೊಠಡಿಯಲ್ಲಿ ಪಟ್ಟಾಗಿ ಕುಳಿತು ಪ್ರತಿ ಪಡೆದ ಹರೀಶ್ ಗೌಡ, ಡೆಲಿಗೇಟ್ಸ್ ವೃಷಬೇಂದ್ರಪ್ಪ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರೊಬ್ಬರಿಗೆ ಗುರುತಿನ ಚೀಟಿ ಪ್ರತಿ ನೀಡಲು ಕುಂಟು ನೆಪವೊಡ್ಡಿದ ಪ್ರಭಾರ ಮುಖ್ಯ ಕಾರ್ಯ‌ನಿರ್ವಹಣಾಧಿಕಾರಿನ್ನು ಶಾಸಕ ಜಿ.ಡಿ.ಹರೀಶ್ ಗೌಡ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆಯಿತು.

ಚಾಮರಾಜನಗರ ತಾಲೂಕು ಕ್ಷೇತ್ರದ ಪುಣಜನೂರು ಪ್ರಾಥಮಿಕ‌ಕೃಷಿ ಪತ್ತಿನ ಸಹಕಾರ ಸಂಘದ ಮತದಾರರಾದ ಗುರುನಾಯಕ ಅವರು ತಮ್ಮಸಂಘದ ಪ್ರತಿನಿಧಿ ಅಥವಾ ಡೆಲಿಗೇಟ್ ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದರು.ಹಾಗಾಗಿ, ಅದರ ಪ್ರತಿ ಕೊಡುವಂತೆ ಜೂ.19 ರಂದು ಅರ್ಜಿ ಸಲ್ಲಿಸಿದ್ದರು. ಆದರೆ,ನಾಲ್ಕು ದಿನಗಳಿಂದ ಯಾವುದೇ ಪ್ರಕ್ರಿಯೆ ಕೈಗೆತ್ತಿಕೊಳ್ಳದೆ ಮಂಗಳವಾರ ಮತದಾರರ ಗುರುತಿನ ಚೀಟಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದರು.‌ಈ ಕ್ರಮವನ್ನು ಪ್ರಶ್ನಿಸಿ ಚಾಮರಾಜನಗರ ತಾಲೂಕು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೃಷಬೇಂದ್ರಪ್ಪ ಅವರು ಎಂಸಿಡಿಸಿಸಿ ಬ್ಯಾಂಕ್ ಗೆ ಆಗಮಿಸಿ ಮುಖ್ಯ ಕಾರ್ಯ‌ನಿರ್ವಹಣಾ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಸಮರ್ಪಕವಾದ ಉತ್ತರ ನೀಡದೆ ನಮ್ಮಲ್ಲಿ ಮತದಾರರ ಪಟ್ಟಿ ಇಲ್ಲ. ನೀವು ಚುನಾವಣಾ ಅಧಿಕಾರಿಗಳ ಬಳಿ ಹೋಗಿ ಕೇಳಬಹುದು ಎಂದರು. ‌ನಂತರ, ಚುನಾವಣಾ ಅಧಿಕಾರಿಗಳ ಕಚೇರಿಗೆ ದೌಡಾಯಿಸಿ ವಿಚಾರಿಸಿದರು. ಆದರೆ, ಉಪ ವಿಭಾಗಾಧಿಕಾರಿಗಳೂ ಆದ ರಿಟರ್ನಿಂಗ್ ಅಧಿಕಾರಿ ಆಶಪ್ಪ ಅವರು ಬ್ಯಾಂಕ್ ನಲ್ಲಿ ಒಂದು ಪ್ರತಿ ಇರುವ ಕಾರಣ ಅಲ್ಲಿಯೇ ಪಡೆಯಬಹುದೆಂದು ಹೇಳಿದ್ದರಿಂದಾಗಿ ಮತ್ತೆ ಅನಿವಾರ್ಯವಾಗಿ ಬ್ಯಾಂಕ್ ಗೆ ಹಿಂತಿರುಗಿ ಗುರುತಿನ ಚೀಟಿ ಕೊಡುವಂತೆ ಕೋರಿದರು. ಆದರೆ, ನಮ್ಮಲ್ಲಿ ಮತದಾರರ ಪಟ್ಟಿ ಇಲ್ಲ ಎನ್ನುತ್ತಲೇ ಗುರುತಿನ‌ಚೀಟಿ ಪ್ರತಿ ಕೊಡಲು ನಿರಾಕರಿಸಿದರು.‌

ಈ ವಿಚಾರ ತಿಳಿದ ಶಾಸಕರೂ ಆದ ಬ್ಯಾಂಕ್ ಮಾಜಿ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರು ಆಗಮಿಸಿ ಮುಖ್ಯ ಕಾರ್ಯ‌ನಿರ್ವಹಣಾಧಿಕಾರಿಗಳ ಕೊಠಡಿಯಲ್ಲಿ ಕುಳಿತು ಬ್ಯಾಂಕಿನ ಮತದಾರರು ಮತ್ತು ಡೆಲಿಗೇಟ್ಸ್,ಕಾರ್ಯದರ್ಶಿ ನೇರವಾಗಿ ಆಗಮಿಸಿ‌ಅರ್ಜಿ ಹಾಕಿದ ಮೇಲೆ ಕೊಡಬೇಕು. ನೀವು ಕೊಡಲು ಆಗುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು ನೇರವಾಗಿ ಹೇಳಿಬಿಡಿ. ಬ್ಯಾಂಕಿನ ಅಧ್ಯಕ್ಷ ಕಾರ್ಯದರ್ಶಿ ಅವರೇ ಬಂದು ಹೇಳಿದರೂ‌‌ಗುರುತಿನ ಚೀಟಿ‌‌ಕೊಡುವುದಿಲ್ಲ ಅಂದರೆ ಮತದಾರರ ಹಕ್ಕನ್ನು ಕಸಿಯಬೇಕು ಎನ್ನುವ ಉದ್ದೇಶ ಹೊಂದಿದ್ದೀರಾ.ನಿಮಗೆ ಏನಾದರೂ ಒತ್ತಡ ಇದೆಯೇ,ಸಂವಿಧಾನದಲ್ಲಿ ಕೊಟ್ಟ ಅವಕಾಶವನ್ನು ಕಸಿದುಕೊಳ್ಳಬಾರದು ಎಂದು ತರಾಟೆಗೆ ತೆಗೆದುಕೊಂಡರು. ‌ಈ ವೇಳೆ ಪರಿಶೀಲನೆ ನಡೆಸುತ್ತೇವೆ. ಮೂರು ಗುರುತಿನ‌ಚೀಟಿಗಳಲ್ಲಿ ಒಂದು ಚುನಾವಣಾ ಶಾಖೆ,ಮತದಾರರ ಪಟ್ಟಿ,ಮತ್ತೊಂದನ್ನು ಮತದಾರರಿಗೆ ವಿತರಿಸಲಾಗಿತ್ತು. ಹಾಗಾಗಿ, ಪೊಲೀಸ್ ದೂರು ಕೊಟ್ಟು ಬಂದರೆ ಪರಿಶೀಲನೆ ನಡೆಸಿ ಕೊಡುತ್ತೇವೆ ಎಂದಿದ್ದೆ.ಈಗ ದೂರು‌ಕೊಟ್ಟಿರುವ ಕಾರಣ ಮತ್ತೊಮ್ಮೆ ಪರಿಶೀಲನೆ ನಡೆಸುವೆ ಎಂದು ಸಮಜಾಯಿಸಿ‌ನೀಡಿದರು.‌ಇದನ್ನು ಒಪ್ಪದ ಜಿ.ಡಿ.ಹರೀಶ್ ಗೌಡ ಅವರು ನೀವು ಸಣ್ಣ ವಿಚಾರವನ್ನು ದೊಡ್ಡದಾದ ವಿಚಾರ ಮಾಡುವುದು ಬೇಡ. ನಿಮಗೆ ಸಾಕಷ್ಟು ಒತ್ತಡ ಇದೆ ಎಂಬುದು ಗೊತ್ತಿದೆ. ನೀವು ಕಾನೂನಿನ ಪ್ರಕಾರ ಕಾರ್ಯ ನಿರ್ವಹಿಸಬೇಕು.‌ಒತ್ತಡದಿಂದ ಕಾರ್ಯ ನಿರ್ವಹಿಸಿ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಬೇಡ. ಎಂದು ಕಿಡಿಕಾರಿದರು. ಒಂದು ಗುರುತಿನ ಚೀಟಿ‌ಕೊಡಲು ಇಷ್ಟು ಕಾರಣಗಳನ್ನು ನೀಡಿದರೆ, ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಹೇಗೆ ಸಾಧ್ಯ ಎಂದು ಖಾರವಾಗಿ ನುಡಿದರು. ಈ ವೇಳೆ ವಾದ ಪ್ರತಿವಾದ ನಡೆಯಿತು.

ನಂತರ, ತಕ್ಷಣವೇ ಗಂಭೀರವಾಗಿ ಪರಿಗಣಿಸಿದ ಸಿಇ ಆರ್.ಜೆ.ಕಾಂತರಾಜ್ ,ದಾಖಲೆಗಳನ್ನು ಮತ್ತೊಮ್ಮೆ ಪಡೆದುಕೊಂಡು ರಿಟರ್ನಿಂಗ್ ಅಧಿಕಾರಿಗಳ ಅವರಲ್ಲಿದ್ದ ಮತ್ತೊಂದು ಪ್ರತಿಯಲ್ಲಿ ಜೆರಾಕ್ಸ್ ಮಾಡಿಕೊಂಡು ತರಲು ಕಳುಹಿಸಿ ಅರ್ಥ ಗಂಟೆ ಸಮಯವನ್ನು ಕೇಳಿದರು. ಆದರೆ,ಇದನ್ನು ಒಪ್ಪದ ಹರೀಶ್ ಗೌಡ ಮತ್ತು ವೃಷಬೇಂದ್ರಪ್ಪ ಅವರು ‌ನಮಗೆ ಗುರುತಿನ ಚೀಟಿ ಸಿಗುವ ತನಕವೂ ಇಲ್ಲಿಯೇ ಕುಳಿತಿರುತ್ತೇವೆ.‌ತೆಗೆದುಕೊಂಡು ಬರಲಿ ಅಂತ ಪಟ್ಟಾಗಿ ಕುಳಿತರು. ನಂತರ,ಬ್ಯಾಂಕಿನಿಂದ ಎಸಿ ಕಚೇರಿಗೆ ಕಳುಹಿಸಿದ್ದ ಸಿಬ್ಬಂದಿ ರಿಟರ್ನಿಂಗ್ ಅಧಿಕಾರಿಯನ್ನು ಭೇಟಿ ಮಾಡಿ ನಕಲು ಪ್ರತಿಯನ್ನು ತಂದರು.‌ನಂತರ,ಅದಕ್ಕೆ ದೃಢೀಕರಣ ಮಾಡಿ ಮತದಾರರಿಗೆ ನೀಡಲಾಯಿತು.

ಎಲ್ಲದಕ್ಕೂ ‌ಮೌನ: ಶಾಸಕ ಜಿ.ಡಿ.ಹರೀಶ್ ಗೌಡ ಅವರು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ಮುಖ್ಯ ಕಾರ್ಯ‌ನಿರ್ವಹಣಾಧಿಕಾರಿಗಳದ್ದು ಮೌನವೇ ಉತ್ತರ ಆಗಿತ್ತು. ‌ಪ್ರತಿಯೊಂದು ವಿಚಾರಕ್ಜೂ ನೋಡೋಣ, ಪರಿಶೀಲನೆ ಮಾಡೋಣ, ಒಂದು ಬಾರಿ ಕೊಟ್ಟ ನಂತರ ನಮ್ಮಲ್ಲಿ ಇರುವುದಿಲ್ಲ ಎನ್ನುವ ಮಾತನಾಡುತ್ತಿದ್ದು ಬಿಟ್ಟರೇ ಬೇರೇನೂ ಮಾತನಾಡಲೇ ಇಲ್ಲ. ಹೀಗಾಗಿ, ಶಾಸಕರೇ ಶಾಂತವಾಗಿ ಕುಳಿತರು.ಜೂನ್ ಹದಿನಾಲ್ಕರಂದು ಬಸ್ ‌ನಲ್ಲಿ ಹೋಗುವಾಗ ಗುರುತಿನ ಚೀಟಿ ಕಳೆದು ಹೋಗಿತ್ತು. ಹೀಗಾಗಿ, ನಕಲಿ ಗುರುತಿನ ಚೀಟಿ ಕೊಡಲು ಅರ್ಜಿ‌ಸಲ್ಲಿಸಿದ್ದರಿಂದ ಕೊಡದೇ ದಿನಾಲೂ ಸತಾಯಿಸುತ್ತಿದ್ದರು.ನಾವು ಎಸಿ ಕಚೇರಿ ಹೋಗಿ ವಿಚಾರಿಸಿದಾಗ ಬ್ಯಾಂಕ್ ನಲ್ಲಿ ಕೊಡುತ್ತಾರೆ ಅಂತ ಹೇಳಿದರು.ಹಾಗಾಗಿ, ಮತ್ತೆ ಶಾಸಕ ಜಿ.ಡಿ.ಹರೀಶ್ ಗೌಡರು ಬಂದ ಮೇಲೆ ಕೊಡುತ್ತೇನೆ ಅಂತ ಹೇಳಿ‌ಒಪ್ಪಿಕೊಂಡರು.

ಗುರುನಾಯ್ಕ,ಡೆಲಿಗೇಟ್ಸ್, ಪುಣಜನೂರು.

ಚುನಾವಣೆಯಲ್ಲಿ ವಾಮಮಾರ್ಗ ಹಿಡಿದು ಮತದಾರರೊಬ್ಬರಿಗೆ ಗುರುತಿನ ಚೀಟಿ ಕೊಡದಂತೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದರಿಂದ ಈ ರೀತಿಯ ವಿಳಂಬ ಮಾಡಲಾಗಿದೆ. ಚುನಾವಣೆ ಮುಕ್ತವಾಗಿ ನಡೆಯದಂತಹ ಸನ್ನಿವೇಶ ನಿರ್ಮಾಣ ಮಾಡಲಾಗಿದೆ.‌ಇದೊಂದು ಸಂವಿಧಾನ ವಿರೋಧಿ ಕೆಲಸವಾಗಿದೆ.

ವೃಚಬೇಂದ್ರಪ್ಪ,ಚಾಮರಾಜನಗರ ‌ತಾಲ್ಲೂಕು ಬಿಜೆಪಿ ಬೆಂಬಲಿತ ಅಭ್ಯರ್ಥಿ.ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರತಿನಿಧಿಯಾಗಿ ಆಯ್ಕೆಯಾಗಿರುವ. ಗುರುನಾಯ್ಕ ಅವರ ಗುರುತಿನ ಚೀಟಿ ಕಳೆದುಕೊಂಡಿದ್ದರು. ನಕಲು ಚೀಟಿಗೆ ಅರ್ಜಿ ಸಲ್ಲಿಸಿದರೂ ಕೊಡದೆ ವಿಳಂಬ ಮಾಡಲಾಗಿದೆ. ಅಧಿಕಾರಗಳನ್ನು ಬಳಸಿಕೊಂಡು ಚುನಾವಣಾ ವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡಲಾಗಿದೆ.ಯಾವುದೇ ಒತ್ತಡ ಇದ್ದರೂ ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ಕ್ರಮಕೈಗೊಳ್ಳುವಂತೆ ಶಾಸಕ ಜಿ.ಡಿ.ಹರೀಶ್ ಗೌಡ ಒತ್ತಾಯಿಸಿದರು. ಒಂದು ಗುರುತಿನ ಚೀಟಿ ಕೊಡಲು ಇಷ್ಟೊಂದು ಅನಾವಶ್ಯಕ ಒತ್ತಡ ಮಾಡಲಾಗಿದೆ. ಇಂತಹ ಹೊತ್ತಲ್ಲಿ ಮುಕ್ತ ಚುನಾವಣೆ ಆಗಬೇಕು.‌ನಾನು ಹನ್ನೊಂದು ವರ್ಷಗಳ ಕಾಲದಿಂದ ಕೆಲಸ ಮಾಡುತ್ತಿದ್ದೇನೆ.ನಷ್ಟದ ಬ್ಯಾಂಕ್ ನ್ನು ಲಾಭಕ್ಕೆ ಕೊಂಡೊಯ್ದು ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಜನರಿಗೆ ಅನುಕೂಲ ಮಾಡಿಕೊಡಲು ಸಹಕಾರ ಸಂಸ್ಥೆ ಉಳಿಯಬೇಕು. ಸಹಕಾರ ಕ್ಷೇತ್ರದಲ್ಲಿ ಬರುವವರು ಸೇವಾ‌ಮನೋಭಾವ ಇರಬೇಕು. ಡೆಲಿಗೇಟ್ಸ್ ಗಳನ್ನು ಪ್ರವಾಸಕ್ಕೆ ಕಳುಹಿಸಿರುವುದು ಗೊತ್ತಿಲ್ಲ. ಒಂದೂವರೆ ವರ್ಷದಲ್ಲಿ ಒಂದೇ ಒಂದು ಸೊಸೈಟಿಯಲ್ಲಿ ಹೊಸ ಸದಸ್ಯರಿಗೆ ಸಾಲ ಕೊಡಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರ ಪ್ರವೇಶ ಮಾಡಬಾರದು. ‌ನನ್ನನ್ನು ಟಾರ್ಗೆಟ್ ಮಾಡಿರುವುದು ಗೊತ್ತಿಲ್ಲ. ನನ್ನ ಟಾರ್ಗೆಟ್ ಮಾಡಿದ್ದರೆ ಮಾಡಿಕೊಂಡಿರಲಿ.ನನಗೇನೂ ಭಯವಿಲ್ಲ. ಅವಕಾಶ ಸಿಕ್ಕಿದಾಗ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.

ಚುನಾವಣೆ ಫಲಿತಾಂಶ ಹೊರ ಬರುವ ತನಕವೂ ಏನನ್ನು ಹೇಳಲು ಸಾಧ್ಯವಿಲ್ಲ. ‌ಚುನಾವಣೆ ನಡೆಸುವಂತೆ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದರಿಂದಲೇ ಎಲ್ಲರೂ ನಿಲ್ಲಲು ಅವಕಾಶ ಇದೆ. ಇಲ್ಲದಿದ್ದರೆ ಚುನಾವಣೆ ಇನ್ನೂ ಒಂದು ವರ್ಷವಾದರೂ ನಡೆಯುತ್ತಿರಲಿಲ್ಲ ಎಂದರು. ಪ್ರವಾಸ ಹೋಗಿರುವ ಮತದಾರರು ಸಹಕಾರ ಕ್ಷೇತ್ರದ ಉಳಿವಿಗೆ ಸೂಕ್ತ ನಿರ್ಧಾರ ಮಾಡಬೇಕು.ಆತ್ಮಸಾಕ್ಷಿಯ ಮತದಾನ ಮಾಡಬೇಕು ಎಂದು ಹೇಳಿದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ