ಜೆ.ಕೆ.ಸಿಮೆಂಟ್ಸ್ ಕೈಗಾರಿಕೆ ಕಾರ್ಮಿಕರಿಗೆ ಮತದಾನ ಜಾಗೃತಿ

KannadaprabhaNewsNetwork |  
Published : Apr 29, 2024, 01:34 AM IST
ಲೋಕಾಪುರ ಸಮೀಪದ ಮುದ್ದಾಪುರ ಜೆ.ಕೆ.ಸಿಮೆಂಟ್ಸ್ ನಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಜಿಪಂ ಸಿಇಒ ಶಶಿಧರ ಕುರೇರ ಚಾಲನೆ ನೀಡಿದರು. ಜಿಪಂ ಯೋಜನಾ ನಿದೇರ್ಶಕ ಶಶಿಕಾಂತ ಶಿವಪೂರೆ, ಜೆ.ಕೆ.ಯುನಿಟ್ ಹೆಡ್ ಚೆಂದಮ್ಮಾ ಅಮ್ಮಲಗಿ, ಅಜೇಯ ಬನ್ನಿ, ಎಚ್.ಎಸ್.ಕರೆಹೊನ್ನ ಇದ್ದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಲೋಕಾಪುರ:ವಿಶ್ವದಲ್ಲಿಯೇ ಅತೀ ದೊಡ್ಡ ಚುನಾವಣೆಯೆಂದರೆ ಅದು ನಮ್ಮ ಲೋಕಸಭೆ ಚುನಾವಣೆ, ಇಂತಹ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಲು ಮುಂದಾಗಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ್ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರವಿಶ್ವದಲ್ಲಿಯೇ ಅತೀ ದೊಡ್ಡ ಚುನಾವಣೆಯೆಂದರೆ ಅದು ನಮ್ಮ ಲೋಕಸಭೆ ಚುನಾವಣೆ, ಇಂತಹ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಲು ಮುಂದಾಗಬೇಕು ಎಂದು ಜಿಪಂ ಸಿಇಒ ಶಶಿಧರ ಕುರೇರ್ ಹೇಳಿದರು.

ಸಮೀಪದ ಮುದ್ದಾಪುರ ಜೆ.ಕೆ. ಸಿಮೆಂಟ್ಸ್ ನಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಚುನಾವಣೆ ಆಯೋಗ ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ. ಹಾಗಿದ್ದಾಗ ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ. ಹಾಗಾಗಿ ಎಲ್ಲರೂ ಮತದಾನ ಮಾಡಿ ಹಾಗೂ ಬೇರೆಯವರಿಗೂ ಮತ ಹಾಕುವಂತೆ ಪ್ರೇರೇಪಿಸಿ ಚುನಾವಣೆ ಗೆಲ್ಲಿಸಬೇಕು ಎಂದು ಹೇಳಿದರು.

ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಕಾರ್ಮಿಕರಿಗೆ ಮತದಾನ ಜಾಗೃತಿ ಮತ್ತು ಅರಿವು ಮೂಡಿಸುವ ಸಂಬಂಧ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಮತದಾನ ದಿನ ಸಾರ್ವತ್ರಿಕ ರಜೆ ಇರುತ್ತದೆ. ಆ ದಿನದಂದು ಪ್ರತಿಯೊಬ್ಬ ಕಾರ್ಮಿಕರು ತಪ್ಪದೆ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಬೇಕು. ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಮುಕ್ತವಾಗಿ, ನಿರ್ಭಿತಿಯಿಂದ ಮತದಾನ ಮಾಡಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ತಾಪಂ ಇಒ ವೀರನಗೌಡ ಏಗನಗೌಡ ಮಾತನಾಡಿ, ಸಾರ್ವಜನಿಕರು ಸೇರುವ ಸ್ಥಳದಲ್ಲಿ ಮತದಾನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕರ ಪತ್ರ ಹಂಚಲಾಗುತ್ತಿದೆ. ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿಯೊಂದು ಕಾರ್ಖಾನೆಗೆ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಸ್ವಚ್ಛವಾಹಿನಿಯಲ್ಲಿ ಪ್ರತಿದಿನ ಮತದಾನ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದರು.

ಈ ವೇಳೆ ಜಿಪಂ ಯೋಜನಾ ನಿರ್ದೇರ್ಶಕ ಶಶಿಕಾಂತ ಶಿವಪೂರೆ, ಜೆ.ಕೆ.ಯುನಿಟ್ ಹೆಡ್ ಚೆಂದಮ್ಮಾ ಅಮ್ಮಲಗಿ, ಎಚ್.ಎಸ್. ಕರೆಹೊನ್ನ, ಪಪಂ ಮುಖ್ಯಾಧಿಕಾರಿ ಸುನೀಲ ಗಾವಡೆ, ಪಪಂ ಆರೋಗ್ಯ ನಿರೀಕ್ಷಕ ಭಾಗ್ಯಶ್ರೀ ಪಾಟೀಲ, ಅಜೇಯ ಬನ್ನಿ, ಗೋಪಾಲ್ ಎನ್.ಎರ್.ಎಲ್.ಎಂ. ಭೀಮಾನಂದ ಶೆಟ್ಟರ್, ರೇವಣಸಿದ್ದಯ್ಯ ಮರೆಗುದ್ದಿ, ಸ್ವೀಪ್ ಸಮಿತಿ ಸದಸ್ಯರು, ಜೆಕೆ ಸಿಮೆಂಟ್ ಅಧಿಕಾರಿಗಳು, ಕೈಗಾರಿಕಾ ಕಾರ್ಮಿಕರು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ