ಕನ್ನಡಪ್ರಭ ವಾರ್ತೆ ರಾಮನಗರ
ರಾಮನಗರ ಸಮೀಪದ ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ರಾಮನಗರ ಪ್ರಾದೇಶಿಕ ವಿಭಾಗ ವತಿಯಿಂದ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನ ಆಚರಿಸಲಾಗುತ್ತದೆ. ರಣಹದ್ದುಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಈ ದಿನದ ಉದ್ದೇಶ. ರಣಹದ್ದು ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಲಾಗಿರುವ ಬ್ರೀಡಿಂಗ್ ಸೆಂಟರ್ ಶೀಘ್ರ ಪ್ರಾರಂಭ ನಿರೀಕ್ಷೆ ಇದೆ. ಇಲ್ಲಿನ ಸಂರಕ್ಷಿತ ರಣಹದ್ದಿನ ಮರಿ ರಾಮನಗರದ ರಣಹದ್ದು ವನ್ಯಧಾಮಕ್ಕೆ ತರಲಾಗುತ್ತದೆ. ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತದೆ. ಅಳಿವಿನಂಚಿನ ಭೀತಿ ಎದುರುಸುತ್ತಿರುವ ರಣಹದ್ದುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸಂರಕ್ಷ ಣೆ ಮುಖ್ಯವಾಗಿದ್ದು ಅರಣ್ಯ ಇಲಾಖೆ ಜತೆ ಸ್ಥಳೀಯ ಸಾರ್ವಜನಿಕರ ಸಹಕಾರ ಕೂಡ ಅವಶ್ಯ ಎಂದು ಹೇಳಿದರು.ರಾಮದೇವರ ಬೆಟ್ಟ ದೇಶದ ಮೊದಲ ರಣಹದ್ದು ಅಭಯಾರಣ್ಯವಾಗಿದ್ದು, ಇಲ್ಲಿ ಮುಖ್ಯವಾಗಿ ಉದ್ದಕೊಕ್ಕಿನ ರಣಹದ್ದು, ಈಜಿಪ್ಟಿಯನ್ ವಲ್ಚರ್ (ಬಿಳಿ ರಣಹದ್ದು) ಸಂತಾನೋತ್ಪತ್ತಿ ಮಾಡುತ್ತಿವೆ. ರಣಹದ್ದುಗಳು ವರ್ಷಕ್ಕೆ ಒಂದು ಮೊಟ್ಟೆ ಮಾತ್ರ ಇಡುವುದರಿಂದ ಅವುಗಳ ಸಂತತಿ ನಿಧಾನವಾಗಿ ವೃದ್ಧಿಯಾಗುತ್ತಿದೆ ಎಂದು ರಾಮಕೃಷ್ಣಪ್ಪ ತಿಳಿಸಿದರು.ಪರಿಸರ ಪ್ರೇಮಿ ಮರಸಪ್ಪ ರವಿ ಮಾತನಾಡಿ, ಮಾನವನ ಬದುಕಿನೊಂದಿಗೆ ಪ್ರಾಣಿ ಮತ್ತು ಪಕ್ಷಿಗಳ ಬದುಕು ಕೂಡ ಬೆಸೆದುಕೊಂಡಿದ್ದು, ಪರಿಸರ ಸಮತೋಲನಕ್ಕಾಗಿ ಅವುಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
ಎಸಿಎಫ್‌ಗಳಾದ ಶ್ರೀನಿವಾಸ್, ಪುಟ್ಟಮ್ಮ, ಚೈತ್ರಾ, ವಲಯ ಅರಣ್ಯಾಧಿಕಾರಿಗಳಾದ ಮನ್ಸೂರ್, ಮಲ್ಲೇಶ್, ನೇತ್ರಾವತಿ, ರಂಜಿತ, ಬಾಲಕೃಷ್ಣ, ವನ್ಯಜೀವಿ ವಿಭಾಗ ಶ್ರೀಧರ್, ಪ್ರಮೋದ್ ಉಪ ವಲಯರಣ್ಯಾಧಿಕಾರಿ ಸುಷ್ಮ, ಮಂಜು ರೆಡ್ಡಿ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್‌ನ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
...ಬಾಕ್ಸ್...
ರಾಮನಗರ: ರಾಮದೇವರಬೆಟ್ಟ ರಣಹದ್ದು ವನ್ಯಜೀವಿಧಾಮದಲ್ಲಿ ಅಪರೂಪದ ರಣಕಾಟಿ ಹದ್ದು (ಲಾಂಗ್ ಬಿಲ್ಡ್ ವಲ್ಚರ್) ಕಂಡ ಪ್ರವಾಸಿಗರು ಸಂತಸಪಟ್ಟರು.
16ಕೆಆರ್ ಎಂಎನ್ 1.ಜೆಪಿಜಿ