ಶಾಂತಿ - ತ್ಯಾಗದ ಪ್ರತಿರೂಪ ವೈಶ್ಯ ಸಮಾಜ: ಸೀತಾರಾಮಯ್ಯ

KannadaprabhaNewsNetwork |  
Published : May 20, 2024, 01:33 AM IST
ಯಾದಗಿರಿ ಸಮೀಪದ ಸೈದಾಪುರ ಪಟ್ಟಣದಲ್ಲಿ ವಾಸವಿ ಜಯಂತಿ ಅಂಗವಾಗಿ ಕನ್ನಿಕಾ ಪರಮೇಶ್ವರಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಗೌರವಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆದಿಶಕ್ತಿ ವಾಸವಿ ಕನ್ನಿಕಾ ಪರಮೆಶ್ವರಿ ದೇವಿ ಮನುಕುಲಕ್ಕೆ ಶಾಂತಿ ಮತ್ತು ತ್ಯಾಗದ ಪ್ರತಿರೂಪವಾಗಿದ್ದಾಳೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ವೈಶ್ಯ ಸಮಾಜವು ಅಹಿಂಸೆ, ತ್ಯಾಗವನ್ನು ನಂಬಿದ ಜನಾಂಗವಾಗಿದೆ. ಈ ಸಮಾಜದಲ್ಲಿ ಜನಿಸಿದ ನಾವು ಧನ್ಯರು. ಪ್ರತಿಯೊಂದು ಜೀವಿಗೆ ಸುಖ, ಶಾಂತಿ, ಸಮೃದ್ಧಿ ದಯಪಾಲಿಸಲೆಂದು ನಾವು ಭಕ್ತಿಪೂರ್ವಕವಾಗಿ ಪ್ರಾರ್ಥಿಸೋಣ ಎಂದು ಆರ್ಯ ವೈಶ್ಯ ಸೇವಾ ಸಂಘದ ಕೋಶಾಧ್ಯಕ್ಷ ಸೀತಾರಾಮಯ್ಯ ಗುಜ್ಜಾ ಹೇಳಿದರು.

ಸಮೀಪದ ಸೈದಾಪುರ ಪಟ್ಟಣದ ವಾಸವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆರ್ಯ ವೈಶ್ಯ ಸೇವಾ ಸಂಘದಿಂದ ನಡೆದ ಕನ್ನಿಕಾ ಪರಮೇಶ್ವರಿ ವಾಸವಿ ಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೌರವಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಆದಿಶಕ್ತಿ ವಾಸವಿ ಕನ್ನಿಕಾ ಪರಮೆಶ್ವರಿ ದೇವಿ ಮನುಕುಲಕ್ಕೆ ಶಾಂತಿ ಮತ್ತು ತ್ಯಾಗದ ಪ್ರತಿರೂಪವಾಗಿದ್ದಾಳೆ. ಲೌಕಿಕ ಜೀವನವನ್ನು ತ್ಯಾಗ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿಯಾಗಿದ್ದು, ಅವರ ಪುಣ್ಯಕಾರ್ಯಗಳನ್ನು ನಾವು ಪಾಲಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪಟ್ಟಣದಲ್ಲಿ ಗ್ರಾಮದ ವಿಶ್ವನಾಥ ಮಂದಿರದಿಂದ ಸುಮಂಗಲೆಯರ ಕುಂಭ ಕಳಸದೊಂದಿಗೆ ಮತ್ತು ಗೋವಿಂದ ನಾಮಾವಳಿಯೊಂದಿಗೆ ಮುಖ್ಯ ರಸ್ತೆಯ ಮೂಲಕ ವಾಸವಿ ವಿದ್ಯಾ ಸಂಸ್ಥೆಯವರೆಗೆ ಕನ್ನಿಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಗ್ರಾಮದ ಸಮಾಜ ಬಾಂಧವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಬಿಳಿ ಸಮವಸ್ತ್ರದೊಂದಿಗೆ ಭಕ್ತಯಿಂದ ಭಾಗಿವಹಿಸಿರುವುದು ವಿಶೇಷವಾಗಿತ್ತು.

ಆರ್ಯ ವೈಶ್ಯ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ ಪಾಲದಿ, ಸಹ ಕಾರ್ಯದರ್ಶಿ ಸುರೇಶ ಪುರಿ, ಕೋಶಾಧ್ಯಕ್ಷ ಸೀತರಾಮಯ್ಯ ಗುಜ್ಜ, ಈಶ್ವರಯ್ಯ ಬಾದಾಮಿ, ಕೆ.ಬಿ. ಬನ್ನಯ್ಯ, ಪಾಂಡುರಂಗಯ್ಯ ಗುಮಡಾಲ, ಕೆ.ಬಿ. ನಾಗರಾಜ, ನರಸಿಂಹಲು ಕಲಕೊಂಡ, ಕೆ.ಪಿ. ಲಕ್ಷ್ಮಿನಾರಾಯಣಯ್ಯ, ಕೆ.ಪಿ. ವಿರೇಶ, ನಾಗಯ್ಯ ಮಿರಿಯಾಲ್, ಎಸ್.ಆರ್. ರಾಘವೇಂದ್ರ, ಸತ್ಯನಾರಾಯಣ ಪತ್ತಿ, ದತ್ತಾತ್ರಯ್ಯ ಸಂಗೋಳಿಗಿ, ಎನ್. ಮನೋಹರ, ಡಾ. ನಾಗೇಶ, ಮಹಿಳಾ ಸಂಘದ ಅಧ್ಯಕ್ಷೆ ವಸಂತಮ್ಮ ಮಿರಿಯಾಲ, ಕಾರ್ಯದರ್ಶಿ ಕೆ.ಪಿ. ಸವಿತಾ ಇತರರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ