ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದಷ್ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಹದಿಹರಿಯದ ವಯಸ್ಸನ್ನು ದಾಟಿ ನೀವು ಮುಂದೆ ಹೋಗುತ್ತಿರುವುದರಿಂದ ಇದನ್ನು ಮಾಡಬೇಡಿ, ಅದನ್ನು ಮಾಡಬೇಡಿ ಎಂದು ಹೇಳಿಸಿಕೊಳ್ಳಬೇಕಾದ ವಯಸ್ಸಲ್ಲ. ಅದರಿಂದ ನಿಮಗೆ ನೀವೇ ಮನವರಿಕೆಯಾಗಿ ಪ್ರೇರೇಪಿತರಾಗಬೇಕು. ನಾವು ಯಾವ ಯಾವ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು, ಕಲಿಯಬೇಕು ಎಂಬುದನ್ನು ನೀವೇ ಮನಗಾಣುತ್ತಾ ಹೋಗುವಂತಹ ವಯಸ್ಸು ಇದು ಎಂದರು.ವಿದ್ಯಾರ್ಥಿಗಳ ಮೇಲೆ ಮದ್ಯ ಹಾಗೂ ಮಾದಕ ವಸ್ತುಗಳು ಬೀರುವ ಪರಿಣಾಮದಿಂದ ಡ್ರಿಂಕ್ಸ್, ಡ್ರಗ್ಸ್, ಅದನೆಲ್ಲಾ ಮೀರಿದ ಮೊಬೈಲ್ ಅಡಿಕ್ಷನ್ ಎಂಬುದು ಪ್ರಾರಂಭವಾಗಿದೆ. ಮೊಬೈಲ್ ಬಳಕೆ ಎಂಬುದು ಒಂದು ವ್ಯಸನ ಎಂದರೆ ತಪ್ಪಾಗುವುದಿಲ್ಲ. ಯಾರಾದರೂ ಮದ್ಯ ವ್ಯಸನಿ ಡ್ರಗ್ಸ್ ವ್ಯಸನಿ ಆಗುತ್ತಿದ್ದಾರೆ ಎಂದರೆ ಸಾಕಷ್ಟು ಕಾರಣಗಳು ಇರುತ್ತದೆ. ನಾವು ಮಾಡುವಂತಹ ಸಂಗಗಳು ಹವ್ಯಾಸಗಳು, ನಮ್ಮಲ್ಲಿ ಬಹಳ ಪ್ರೇರೇಪಣೆಯಾಗಿರುತ್ತದೆ. ಯಾವುದನ್ನು ಕಣ್ಣಿನಲ್ಲಿ ನೋಡುತ್ತೀರಿ ಅದರಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳುವುದಿಲ್ಲ, ಕೆಟ್ಟದ್ದನ್ನೇ ಮೊದಲು ಆರಿಸುವಲ್ಲಿ ಮುಂದಾಗುತ್ತಿರ. ಅದು ನಿಮ್ಮ ಮನಸ್ಸಿಗೆ ಬೇಗ ಅಂಟಿಕೊಳ್ಳುತ್ತಿದೆ ಎಂದು ಹೇಳಿದರು.
ನಗರ ಸಂಚಾರ ಉಪ ವಿಭಾಗದ ಎಸಿಪಿ ಶಿವಶಂಕರ್ ಮಾತನಾಡಿ, ಮಾದಕ ವಸ್ತುಗಳಿಗೆ ಯಾಕೆ ವಿದ್ಯಾರ್ಥಿಗಳು ವ್ಯಸನ ಆಗುತ್ತಿದ್ದಾರೆ ಎಂದರೆ ನಮ್ಮ ಜಿಲ್ಲೆಗಳಿಗೆ ಓದುವುದಕ್ಕೆ ಬಂದಂತಹ ವಿದ್ಯಾರ್ಥಿಗಳಿಗೆ ಅವರ ಬಳಿ ಹೆಚ್ಚು ಹೆಚ್ಚು ಹಣ ಸಿಗುತ್ತದೆ ಹಾಗೂ ಅವರ ಬಳಿಯಲ್ಲಿ ಪೋಷಕರು ಇರುವುದಿಲ್ಲ. ಆದ ಕಾರಣ ಮಾದಕಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ವ್ಯಸನಿಗಳು ಜೊತೆಯಲ್ಲಿ ಇರುವಂತಹ ಸ್ನೇಹಿತರನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಕೆ.ಆರ್. ಆಸ್ಪತ್ರೆ ಮನೋರೋಗ ತಜ್ಞ ಡಾ.ಬಿ.ಎನ್. ರವೀಶ್, ಪತ್ರಕರ್ತ ಎಸ್.ಟಿ. ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಡಾ. ಅಜಯ್ ಕುಮಾರ್ ಮೊದಲಾದವರು ಇದ್ದರು.
- ಡಾ.ಬಿ.ಎನ್. ರವೀಶ್, ಮನೋರೋಗತಜ್ಞ, ಕೆ.ಆರ್. ಆಸ್ಪತ್ರೆ