ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಸೇರಿದ ಎರಡು ಸಂಘಟನೆಗಳ ಕಾರ್ಯಕರ್ತರು ಲೋಕಸಭೆ, ರಾಜ್ಯಸಭೆ ಎರಡೂ ಸದನಗಳಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿಧೇಯಕ ಅಂಗೀಕರಿಸಿರುವುದನ್ನು ಸ್ವಾಗತಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು. ನಂತರ ಸ್ಥಳದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.ಈ ವೇಳೆ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಕೆ.ಸತೀಶ್, ವಕ್ಫ್ ಕಾನೂನು ಸಂವಿಧಾನಕ್ಕೆ ವಿರೋಧವಾಗಿತ್ತು. ವಕ್ಫ್ ಮಂಡಳಿ ಇದು ನಮ್ಮ ಆಸ್ತಿ ಎಂದು ನಂಬಬಹುದಾಗಿದ್ದ ಎಲ್ಲವನ್ನು ತನ್ನ ಆಸ್ತಿಯೆಂದು ಪರಿಗಣಿಸುವ ಮೂಲಕ ಪಹಣಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅವಕಾಶವಿತ್ತು. ಇಂತಹ ಸಂವಿಧಾನ ವಿರೋಧಿ ಅವಕಾಶವನ್ನು ಯುಪಿಎ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇದರ ಲಾಭ ಪಡೆಯುವ ಅವಕಾಶವಿತ್ತು ಎಂದು ದೂರಿದರು.
ಈ ಬಗ್ಗೆ ಕೇಂದ್ರ ಸರ್ಕಾರ ಸದನದಲ್ಲಿ ವಕ್ಫ್ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಿರುವುದನ್ನು ಮುಕ್ತ ಕಂಠದಿಂದ ಸ್ವಾಗತಿಸಿದರು. ಈ ವೇಳೆ ಬಿಜೆಪಿ ತಾಲೂಕ ಅಧ್ಯಕ್ಷೆ ಶ್ವೇತಾ, ಮನ್ಮುಲ್ ಮಾಜಿ ನಿರ್ದೇಶಕಿ ಎಂ.ರೂಪ, ಎಂ.ಸಿ.ಸಿದ್ದು, ಸೌಮ್ಯ, ಬಿಂದು, ಮಮತಾ ರಾಂಖ, ನೈದಿಲೆ ಚಂದ್ರು, ಮಾ.ನ. ಪ್ರಸನ್ನ ಕುಮಾರ್, ಮಂಜುಳಾ, ತ್ರಿಶಾಂತ್, ರಾಮೇಗೌಡ, ಮಿಥುನ್, ಕೆ ಟಿ ನವೀನ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರವಿ ಮತ್ತಿತರರು ಇದ್ದರು.