ಜ. 4ರಂದು ಕಂಪ್ಲಿಯಲ್ಲಿ ವಕ್ಫ್ ಹಟಾವೋ ದೇಶ ಬಚಾವೋ ಜಾಗೃತಿ ಸಮಾವೇಶ

KannadaprabhaNewsNetwork | Published : Jan 3, 2025 12:30 AM

ಸಾರಾಂಶ

ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ವಕ್ಫ್ ಹೆಸರಿನಲ್ಲಿ ರೈತರಿಗೆ ಹಾಗೂ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಜನರನ್ನು ಜಾಗೃತಗೊಳಿಸಿ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜ. 4ರಂದು ಮಧ್ಯಾಹ್ನ 3 ಗಂಟೆಗೆ ವಕ್ಫ್ ಹಠಾವೋ ದೇಶ ಬಚಾವೋ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಎಂ. ಭರತ್ ಹೇಳಿದರು.

ಕಂಪ್ಲಿ: ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ವಕ್ಫ್ ಹೆಸರಿನಲ್ಲಿ ರೈತರಿಗೆ ಹಾಗೂ ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಜನರನ್ನು ಜಾಗೃತಗೊಳಿಸಿ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜ. 4ರಂದು ಮಧ್ಯಾಹ್ನ 3 ಗಂಟೆಗೆ ವಕ್ಫ್ ಹಠಾವೋ ದೇಶ ಬಚಾವೋ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಸಂಚಾಲಕ ಎಂ. ಭರತ್ ಹೇಳಿದರು.

ಇಲ್ಲಿನ ಅತಿಥಿಗೃಹ ಆವರಣದಲ್ಲಿ ಗುರುವಾರ ನಡೆದ ನಾಗರಿಕ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿ, ಪಟ್ಟಣದ ಶಾರದಾ ಶಾಲೆ ಆವರಣದಲ್ಲಿ ಜ. 4ರಂದು ಮಧ್ಯಾಹ್ನ 3 ಗಂಟೆಗೆ ವಕ್ಫ್ ಹಠಾವೋ ದೇಶ ಬಚಾವೋ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಪ್ರಭುಮಹಾಸ್ವಾಮಿಗಳು, ಹಂಪಿ ಮಾತಂಗಪರ್ವತದ ಪೂರ್ಣಾನಂದ ಭಾರತಿಶ್ರೀಗಳು ಸಾನ್ನಿಧ್ಯವಹಿಸಲಿದ್ದಾರೆ. ಪಟ್ಟಣದ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಪಾದಯಾತ್ರೆಯಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ಧೇಶ್ವರ್, ಮಾಜಿ ಸಂಸದರಾದ ಬಿ.ವಿ. ನಾಯಕ್, ಪ್ರತಾಪ್‌ಸಿಂಹ, ಶಾಸಕರಾದ ಚಂದ್ರಪ್ಪ, ಬಿ.ಪಿ. ಹರೀಶ್, ಎಂ. ಭರತ್, ರವಿ ಬಿರಾದಾರ್, ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಪ್ರಮುಖ ರಸ್ತೆ ಮೂಲಕ ಸಾಗಿ ಶಾರದಾ ಶಾಲೆ ಆವರಣದಲ್ಲಿ ಸಮಾರೋಪಗೊಂಡು ಬಹಿರಂಗ ಸಭೆ ನಡೆಸಲಿದೆ. ವಕ್ಫ್ ಕಾಯಿದೆ ಸಮಸ್ಯೆಗೊಳಗಾದ ರೈತರಿಂದ ಸೂಕ್ತ ದಾಖಲೆಗಳನ್ನು ಜಾಗೃತಿ ಸಭೆಯಲ್ಲಿ ಸಂಗ್ರಹಿಸಿ ಕೇಂದ್ರ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಅವರಿಗೆ ವರದಿ ಸಲ್ಲಿಸಲಾಗುವುದು. ವಕ್ಫ್ ಸಮಸ್ಯೆಗೀಡಾದ ರೈತರು, ನಾಗರಿಕರು ಪಾಲ್ಗೊಳ್ಳುವಂತೆ ಕೋರಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ವಾಲ್ಮೀಕಿ ಈರಣ್ಣ, ಎಂ. ಮಂಜುನಾಥ, ಪಿ. ಶಂಭುಲಿಂಗ, ಹರೀಶ ಚಿತ್ರಗಾರ, ಸಂತೋಷ್ ದಮ್ಮಾಳೆ, ಕೆ. ರೇಣುಕರಾಜ, ಕೆ. ಚಂದ್ರಶೇಖರ್, ಜಿ. ಮನೋಜ್, ವಿಜಯ್ ಇತರರಿದ್ದರು.

Share this article