ಜಿಟಿಟಿಸಿಯಲ್ಲಿ ಕಸ ನಿರ್ವಹಣೆ ಕಾರ್ಯಾಗಾರ

KannadaprabhaNewsNetwork |  
Published : Nov 24, 2026, 01:45 AM IST
ಕಸ ನಿರ್ವಹಣೆ ಕಾರ್ಯಾಗಾರದಲ್ಲಿ ಮಾಹಿತಿ ನೀಡುತ್ತಿರುವುದು   | Kannada Prabha

ಸಾರಾಂಶ

ಎಂಆರ್‌ಪಿಎಲ್‌ ಮತ್ತು ಸುರತ್ಕಲ್ ರೋಟರಿ ಕ್ಲಬ್ ವತಿಯಿಂದ ಬೈಕಂಪಾಡಿ ಜಿಟಿಟಿಸಿ ಡಿಪ್ಲೊಮಾ ಕಾಲೇಜಿನಲ್ಲಿ ಕಸ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಗಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಎಂಆರ್‌ಪಿಎಲ್‌ ಜನರಲ್ ಮ್ಯಾನೇಜರ್ ಮಂದಾರ ಕಾಳೆ ಉದ್ಘಾಟಿಸಿ ಮಾತನಾಡಿ, ದಿನ ನಿತ್ಯ ಮನೆ ಮತ್ತು ಕಾರ್ಖಾನೆಗಳಲ್ಲಿ ಶೇಖರಗೊಳ್ಳುವ ಹಸಿ ಮತ್ತು ಒಣ ಕಸವನ್ನು ಹೇಗೆ ಉಪಯುಕ್ತವಾಗಿಸಬಹುದು ಎಂದು ತಿಳಿಸಿದರು.

ಮಂಗಳೂರು : ಎಂಆರ್‌ಪಿಎಲ್‌ ಮತ್ತು ಸುರತ್ಕಲ್ ರೋಟರಿ ಕ್ಲಬ್ ವತಿಯಿಂದ ಬೈಕಂಪಾಡಿ ಜಿಟಿಟಿಸಿ ಡಿಪ್ಲೊಮಾ ಕಾಲೇಜಿನಲ್ಲಿ ಕಸ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಗಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಎಂಆರ್‌ಪಿಎಲ್‌ ಜನರಲ್ ಮ್ಯಾನೇಜರ್ ಮಂದಾರ ಕಾಳೆ ಉದ್ಘಾಟಿಸಿ ಮಾತನಾಡಿ, ದಿನ ನಿತ್ಯ ಮನೆ ಮತ್ತು ಕಾರ್ಖಾನೆಗಳಲ್ಲಿ ಶೇಖರಗೊಳ್ಳುವ ಹಸಿ ಮತ್ತು ಒಣ ಕಸವನ್ನು ಹೇಗೆ ಉಪಯುಕ್ತವಾಗಿಸಬಹುದು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಲಕ್ಷ್ಮೀನಾರಾಯಣ ಅವರು ವಿದ್ಯಾರ್ಥಿಗಳು ಹೇಗೆ ಕಾಲೇಜಿನಲ್ಲಿ ಕಸವನ್ನು ಮರು ವಿಂಗಡಿಸಿ ವಿಲೇವಾರಿ ಮಾಡಿ ಉಪಯುಕ್ತವಾಗಿಸಬಹುದು ಎಂದು ತಿಳಿಸಿದರು.

ಸುರತ್ಕಲ್ ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಸತೀಶ್ ಸದಾನಂದ ಮತ್ತು ಜಿಟಿಟಿಸಿ ಘಟಕ ಮುಖ್ಯಸ್ಥ ಕುಮಾರಸ್ವಾಮಿ ಇವರು ಹಸಿ ಮತ್ತು ಒಣ ಕಸವನ್ನು ಹೇಗೆ ಗಿಡಗಳಿಗೆ ಗೊಬ್ಬರವನ್ನಾಗಿ ಪರಿವರ್ತಿಸಬಹುದು ಎಂದು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯರ ಬದುಕನ್ನು ಮಕ್ಕಳ ನಾಳೆಗಾಗಿ ನೆನಪಿಸಬೇಕಿದೆ: ಪ್ರೊ. ಧರ್ಮ
ಓಡಲ: ವಿಷ್ಣು ಸಹಸ್ರನಾಮ ಪಾರಾಯಣದ ಮೂರನೇ ಸರಣಿ