ಸಕಲ ಜೀವರಾಶಿಗಳಿಗೂ ನೀರು ಅವಶ್ಯ

KannadaprabhaNewsNetwork |  
Published : Sep 28, 2025, 02:00 AM IST
ಷದವ ್ಬ ್ಗದ | Kannada Prabha

ಸಾರಾಂಶ

ನೀರನ್ನು ಅನವಶ್ಯಕವಾಗಿ ವ್ಯರ್ಥ ಮಾಡಬಾರದು.ಮಿತವಾಗಿ ಬಳಕೆ ಮಾಡಬೇಕು

ಹನುಮಸಾಗರ: ಸಕಲ ಜೀವರಾಶಿಗಳಿಗೂ ನೀರು ಅವಶ್ಯವಾಗಿ ಬೇಕಾಗಿದ್ದು, ಪ್ರತಿಯೊಬ್ಬರು ಜಲಸಂರಕ್ಷಣೆ ಮಾಡಬೇಕು ಎಂದು ಪಿಡಿಒ ಚಂದಪ್ಪ ಗುಡಿಮನಿ ಹೇಳಿದರು.

ಸಮೀಪದ ಮಾಲಗಿತ್ತಿ ಗ್ರಾಪಂ ವ್ಯಾಪ್ತಿಯ ಕಡಿವಾಲ ಗ್ರಾಮದಲ್ಲಿ ಶನಿವಾರ 24x7 ನೀರು ಸರಬರಾಜು ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರನ್ನು ಅನವಶ್ಯಕವಾಗಿ ವ್ಯರ್ಥ ಮಾಡಬಾರದು.ಮಿತವಾಗಿ ಬಳಕೆ ಮಾಡಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪಂಚಾಯತರಾಜ್ ಇಲಾಖೆ, ಜಲ್ ಜೀವನ್ ಮಿಷನ್ ಯೋಜನೆ ಮತ್ತು ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಡಿಯಲ್ಲಿ ಕಡಿವಾಲ ಗ್ರಾಮವನ್ನು 24x7 ನೀರು ಸರಬರಾಜು ಮಾಡುವ ಕುಷ್ಟಗಿ ತಾಲೂಕಿನ 3ನೇ ಗ್ರಾಮವೆಂದು ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆಶಯದಂತೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 200 ಗ್ರಾಮಗಳನ್ನು 24x7 ನೀರು ಸರಬರಾಜು ಗ್ರಾಮಗಳನ್ನಾಗಿ ಘೋಷಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.ಅನವಶ್ಯಕವಾಗಿ ನೀರನ್ನು ವ್ಯರ್ಥ ಮಾಡದೆ ನಿಯಮಿತವಾಗಿ ಬಳಕೆ ಮಾಡಬೇಕು ಎಂದರು.

ವಿಶ್ವ ಬ್ಯಾಂಕ್ ಅಧಿಕಾರಿ ಬಸವರಾಜ, ಗ್ರಾಮೀಣ ಕುಡಿಯುವ ಎಇಇ ಸುರೇಶ, ಕೆ.ಇ. ಪ್ರಭಾಕರ, ಗುತ್ತಿಗೆದಾರ ಮೌಸೀನ್, ಗ್ರಾಪಂ ಅಧ್ಯಕ್ಷೆ ಯಮನವ್ವ ಮಲ್ಲಪ್ಪ ಮುಗಳಿ, ಬಸವರಾಜ ಬಾಲದಾರ, ಪಿಡಿಒ ಚಂದಪ್ಪ ಗುಡಿಮನಿ, ಗ್ರಾಪಂ ಸದಸ್ಯರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ