ಕನ್ನಡಪ್ರಭ ವಾರ್ತೆ, ದಾವಣಗೆರೆ / ಹರಿಹರ
ಹರಿಹರ ತಾಲೂಕು ರಾಜನಹಳ್ಳಿ ಸಮೀಪದ ದಾವಣಗೆರೆ ನೀರು ಸರಬರಾಜು ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷದ ನಿರ್ಲಕ್ಷ್ಯದಿಂದಾಗಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹೊತ್ತಲ್ಲೇ ನೀರಿನ ಸಮಸ್ಯೆ ಉಲ್ಬಣಿಸುವಂತಾಗಿದೆ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು 2 ತಿಂಗಳ ಮುನ್ನವೇ ಕುಡಿಯುವ ನೀರು ಸಂಗ್ರಹಿಸಿಟ್ಟುಕೊಳ್ಳಬೇಕು. ಜಿಲ್ಲಾ ಕೇಂದ್ರದ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಸಂಗ್ರಹಿಸಬೇ ಕಾದ ಪಾಲಿಕೆ ಆಡಳಿತ ಪಕ್ಷವು ಕಣ್ಣು ಮುಚ್ಚಿ ಕುಳಿತ ಪರಿಣಾಮ ಮಹಾ ಜನತೆ ಈಗ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಅವರು ದೂರಿದರು.ಮಹಾ ನಗರಕ್ಕೆ ನೀರು ಪೂರೈಸುವ ನೀರು ಸಂಗ್ರಹಾಗಾರ ಕೆರೆಗಳು ಈಗಾಲೇ ಖಾಲಿಯಾಗಿವೆ. ಪ್ರತಿದಿನ ಕನಿಷ್ಟ ಅವಶ್ಯಕತೆ ಯ ನೀರನ್ನೂ ಪೂರೈಸಲಾಗದ ಸ್ಥಿತಿ ಇದೆ. ಕುಂದುವಾಡ ಕೆರೆ ಹಾಗೂ ಟಿವಿ ಸ್ಟೇಷನ್ಕೆರೆಯೂ ಕನಿಷ್ಟ ನೀರಿನ ಮಟ್ಟ ತಲುಪಿ, ಈಗಾಗಲೇ ಬರಿದಾಗಿವೆ. ಕಳೆದ ಜನವರಿಯಲ್ಲೇ ಜಿಲ್ಲಾಡಳಿತಕ್ಕೆ ಭದ್ರಾ ನೀರನ್ನು ಹರಿಸಿ, ಬೇಸಿಗೆಗೆ ಅಗತ್ಯ ಕುಡಿಯುವ
ಪಾಲಿಕೆ ಸಾಮಾನ್ಯ ಸಭೆಯಲ್ಲೂ ದುಗ್ಗಮ್ಮನ ಜಾತ್ರೆ ಹಾಗೂ ಬೇಸಿಗೆಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು. ಜನರ ಮೂಲಭೂತ ಸಮಸ್ಯೆಗಳಿಗೆ ಕಿವಿಗೊಡಬೇಕಾಗಿದ್ದ ಕಾಂಗ್ರೆಸ್ ಪಕ್ಷವು ಆಡಳಿತ ಅಧಿಕಾರದ ಮಜಾವಾದಿತನ ಪ್ರದರ್ಶಿಸುತ್ತಾ, ಜನರಿಗೆ ಬರದ ಗ್ಯಾರಂಟಿ ನೀಡಿದೆ. ಕನಿಷ್ಟ ಕುಡಿಯುವ ನೀರನ್ನು ಕೊಡದೇ, ಕಾಂಗ್ರೆಸ್ ಪಕ್ಷವು ಜನರ ಮನೆಗಳಲ್ಲಿ ನೀರಿನ ಕೊಡಗಳು ಬರಿದಾಗಲಿವೆಯೆಂಬುದನ್ನು ಖಚಿತಪಡಿಸಿದೆ ಎಂದು ಅವರು ಟೀಕಿಸಿದರು.
ಉಪ ಮೇಯರ್ ಯಶೋಧ ಯೋಗೇಶ, ಸದಸ್ಯರಾದ ಮಾಜಿ ಮೇಯರ್ ಎಸ್.ಟಿ.ವೀರೇಶ, ಆರ್.ಶಿವಾನಂದ, ಎಲ್.ಡಿ.ಗೋಣೆಪ್ಪ, ಕೆ.ಎಂ.ವೀರೇಶ, ಶಾಂತಕುಮಾರ ಸೋಗಿ, ಆರ್.ಎಲ್. ಶಿವಪ್ರಕಾಶ, ಬಿಜೆಪಿ ಮುಖಂಡರು, ಸದಸ್ಯರು ರಾಜನಹಳ್ಳಿ ಗ್ರಾಮದ ನೀರು ಸರಬರಾಜು ಕೇಂದ್ರದ ವಾಸ್ತವ ಸ್ಥಿತಿ ಪರಿಶೀಲಿಸಿದರು. ಟ್ಯಾಂಕರ್‌ನಿಂದ ನೀರು ಪೂರೈಕೆಗೆ ನಗರಸಭಾ ಸದಸ್ಯ ಖಲಂದರ್ ಒತ್ತಾಯಹರಿಹರ: ನಗರದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ನಗರಸಭಾ ಸದಸ್ಯ ದಾದಾ ಖಲಂದರ್ ಖಾಲಿ ಕೊಡಗಳೊಂದಿಗೆ ನಗರಸಭೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬರಗಾಲದ ಪರಿಣಾಮ ತುಂಗಭದ್ರ ನದಿಯಲ್ಲಿ ನೀರು ಹರಿವಿನ ಪ್ರಮಾಣ ಕಡಿಮೆಯಾಗಿ ಜಲಸಿರಿಯ ನೀರು ಸರಬರಾಜನ್ನು ಸ್ಥಗಿತಗೊಂಡಿದ್ದು. ಜನರಿಗೆ ನೀರಿನ ಅಹಾಕಾರ ತಲೆದೂರಿದರು ನಗರಸಭಾ ಅಧಿಕಾರಿ ಗಳು ಮಾತ್ರ ಗಾಡ ನಿದ್ರೆಗೆ ಜಾರಿದ್ದಾರೆ ಎಂದು ಆರೋಪಿಸಿದರು.೩೧ ವಾರ್ಡ್‌ಗಳಿಗೆ (೧ಲಕ್ಷ ಜನಸಂಖ್ಯೆ) ಕೇವಲ ಮೂರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೆ ಹೇಗೆ? ಕೆಟ್ಟು ನಿಂತಿರುವ ಕೊಳವೆ ಬಾವಿಗಳನ್ನು ದುರಸ್ಥಿ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರು ಅಧಿಕಾರಿಗಳು ಕಿವಿಯಿದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಪಟ್ಟು ಹಿಡಿದ ನಗರಸಭಾ ಸದಸ್ಯ ಜಿಲ್ಲಾಧಿಕಾರಿಗಳು ಅಥವಾ ಯೋಜನಾ ನಿರ್ದೇಶಕರ ಆದೇಶಪ್ರತಿ ಬಂದ ನಂತರವೇ ಪ್ರತಿಭಟನೆ ಕೈ ಬಿಡುವುದಾಗಿ ಆಯುಕ್ತರಿಗೆ ತಿಳಿಸಿದರು.ಪೌರಾಯುಕ್ತರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ನಗರಸಭಾ ಸದಸ್ಯರ ಪ್ರತಿಭಟನೆ ವಿಷಯ ಗಮನಕ್ಕೆ ತಂದು ಕೂಡಲೇ ಆದೇಶ ನೀಡುವಂತೆ ಮನವಿ ಮಾಡಿಕೊಂಡಾಗ ಯೋಜನಾ ನಿರ್ದೇಶಕರು ಹೆಚ್ಚುವರಿ ೫ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದುಕೊಂಡು ನೀರು ಸರಬರಾಜು ಮಾಡುವಂತೆ ಆದೇಶ ನೀಡಿದರು.