ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಉತ್ತಮ ಅನ್ಯೋನ್ಯತೆ
ರಾಜ್ಯ ರಾಜಕೀಯ ವಲಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿದೆ. ಆದರೆ, ಯಾವ ಕ್ರಾಂತಿಯೂ ಇಲ್ಲ. ಏನೂ ಇಲ್ಲ. ಎಲ್ಲಾ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಮೇಲೆ ಡಿಪೆಂಡ್ ಎಂದು ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ನವೆಂಬರ್ ಕ್ರಾಂತಿಯನ್ನ ತಳ್ಳಿ ಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಂತರಿಕ ಬಿಕ್ಕಟ್ಟು ಅಥವಾ ನಾಯಕತ್ವ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದು ಬಿಜೆಪಿ - ಜೆಡಿಎಸ್ ಅಲ್ಲ. ಕಾಂಗ್ರೆಸ್ ಪಕ್ಷ. ನಮ್ಮಲ್ಲಿ ಹೈಕಮಾಂಡ್ ಆದೇಶವೇ ಅಂತಿಮ. ಇಲ್ಲಿ ಯಾವುದೇ ಅನಗತ್ಯ ಚರ್ಚೆಗೆ ಆಸ್ಪದವಿಲ್ಲ ಎಂದು ಹೇಳುವ ಮೂಲಕ ಪ್ರತಿಪಕ್ಷ ಹಾಗೂ ಸ್ವಪಕ್ಷೀಯರಿಗೂ ತಿರುಗೇಟು ನೀಡಿದರು.ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಉತ್ತಮ ಅನ್ಯೋನ್ಯತೆ ಇದೆ. ನಾಯಕತ್ವ ಬದಲಾವಣೆ ಅಥವಾ ಖಾತೆ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳು ಊಹಾಪೋಹ ಮಾತ್ರ ಎಂದರು.
ದರ ನಿಗಧಿ ಕೇಂದ್ರದ ಕೆಲಸ:
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಯಾವುದು ಆಗಲ್ಲ, ಗೊಬ್ಬರಕ್ಕೂ ಭಾಗಿಯಾಗಿದ್ರು ಕೊನೆಗೆ ಎಕ್ಸ್ ಪೋಸ್ ಅದ್ರು ಅಸೆಂಬ್ಲಿಯಲ್ಲಿ ಒಂದು ಗಂಟೆ ಉತ್ತರ ಕೊಟ್ಟೆ. ಸಪ್ಲೈ ಮಾಡೋರು ಅವ್ರು, ಇಂಪೋರ್ಟ್ ಮಾಡೋರು ಅವ್ರು, ರೇಟ್ ಫಿಕ್ಸ್ ಮಾಡೋರು ಅವ್ರು, ಗೊತ್ತಿದ್ದು, ಗೊತ್ತಿಲ್ಲದೆ ವಿರೋಧ ಪಕ್ಷ ಅಂದಾಗ ಎಲ್ಲದಕ್ಕೂ ಹೋಗಬೇಕು
ಅವ್ರಿಗೆ ನಾನು ಏನೂ ಹೇಳೋದು, ಅವರಿಗೆ ಅನುಭವ ಇಲ್ಲದಿದ್ರು ತಂದೆ ಬಳಿ ಅನುಭವ ತೆಗೆದುಕೊಳ್ಳಬೇಕಲ್ಲ. ಈಗ ಆಶೋಕ್ ಗೆ ಅನುಭವ ಇಲ್ಲ ಅಂತಾ ಹೇಳೊಕಾಗುತ್ತಾ ಎಂದರು.ಎಚ್‌ಡಿಕೆ ವಿರುದ್ಧ ವಾಗ್ದಾಳಿ:
ಅವರು ಯಾರ ಹತ್ತಿರ ಮಾತಾಡ್ತಾರೆ, ಇಡೀ ರಾಷ್ಟ್ರದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಾರಾ, ಎಷ್ಟು ಫ್ಯಾಕ್ಟರಿ ಹತ್ತಿರ ಅವರು ಕಮಿಷನ್ ತೆಗೆದುಕೊಂಡಿದ್ದಾರೆ. ಎದುರಿಗೆ ಬಂದು ಮಾತನಾಡಲು ಹೇಳಿ, ಯಾರೋ ಸಿಕ್ಕಾಗ ಹೇಳಿ ಹಿಟ್ ಅಂಡ್ ರನ್ ಮಾಡುವುದಲ್ಲ ಎಂದರು.
ಅವರು ಹೇಳಲು ಹತ್ತು ಇದ್ದರೆ ನನ್ನ ಬಳಿ ಸಾವಿರ ಇದೆ. ಮಾತನಾಡಬಾರದು ಮಾತಾಡಲ್ಲ. ಅವರಿಗೆ ಸುಮ್ಮನೆ ಕೆಲಸ ನೋಡುವುದಕ್ಕೆ ಹೇಳಿ, ₹25 ಕೋಟಿ ಕೊಡುತ್ತೇನೆ ಎಂದು ಯಾವ ನಾಲಿಗೆಯಲ್ಲಿ ಹೇಳಿದ್ದಾರೆ ಎಂದರು.