ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂಬುದೊಂದೆ ನಮ್ಮ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲು ಅವಕಾಶ ಕೇಳಿದ್ದೇವೆ. ನಮ್ಮ ಬೇಡಿಕೆ ನಿರ್ಲಕ್ಷಿಸಿದರೆ ಶಾಂತಿಯುತ ಹೋರಾಟ ಕ್ರಾಂತಿಕಾರಕ ರೂಪ ಪಡೆಯಲಿದೆ ಎಂದು ರೈತ ಮುಖಂಡ ಪ್ರಕಾಶ್ ಎಚ್ಚರಿಕೆ ನೀಡಿದರು.
ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಗಳಾಗಿದ್ದ ವೇಳೆ ಟೌನ್ ಶಿಪ್ ಯೋಜನೆಗೆ ಭೂ ಸ್ವಾಧೀನ ಆಗುತ್ತಿರುವ ರೈತರೊಂದಿಗೆ ಮಾತನಾಡಿದ್ದರು. ಶೇಕಡ 50ಕ್ಕಿಂತ ಅಧಿಕ ಮಂದಿ ವಿರೋಧ ವ್ಯಕ್ತಪಡಿಸಿದರೆ ಭೂಸ್ವಾಧೀನ ಕೈಬಿಡುವುದಾಗಿ ತಿಳಿಸಿದ್ದರು. ಈಗ ಮುಖ್ಯಮಂತ್ರಿಗಳಾಗಿರುವ ಅವರನ್ನು ಭೇಟಿ ಮಾಡಲು ಅವಕಾಶ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಸಿಎಂ ಅವರೊಂದಿಗೆ ಭೇಟಿಯಾಗುವವರೆಗೂ ಭೂಸ್ವಾಧೀನ ಪ್ರಕ್ರಿಯೆಯ ಭಾಗವಾಗಿರುವ ಪರಿಹಾರ ವಿತರಣೆ, ಜೆಎಂಸಿ ಮಾಡುವುದು ಇತ್ಯಾದಿ ಪ್ರಕ್ರಿಯೆಗಳು ಸ್ಥಗಿತಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ. ಜೆಎಂಸಿ ಮಾಡುವ ಸಂದರ್ಭದಲ್ಲಿ ಒಬ್ಬರು ತಮ್ಮ ಭೂಮಿಯನ್ನು ಸ್ವಾಧೀನಕ್ಕೆ ಒಪ್ಪಬಹುದು, ಉಳಿದವರು ಒಪ್ಪದೇ ಇರಬಹುದು. ಹೀಗಾದಾಗ ಎಲ್ಲರಿಗೂ ಸಮಸ್ಯೆಯಾಗುತ್ತದೆ ಹೀಗಾಗಿ ಪ್ರಕ್ರಿಯೆಗಳು ಸ್ಥಗಿತಗೊಳಿಸಲಿ ಎಂದು ಒತ್ತಾಯಿಸಿದರು.ನಮಗೆ ಭೂಮಿ ಬೇಕು, ಪರಿಹಾರ ಅಲ್ಲ :
ನಮ್ಮ ಬೇಡಿಕೆ ಒಂದೇ ಭೂಸ್ವಾಧೀನ ಕೈ ಬಿಡಿ ಎನ್ನುವುದೊಂದೆ. ಇಂದು ಶಾಸಕ ಬಾಲಕೃಷ್ಣ ಅವರು ನಡೆಸಿದ ಸಭೆಯಲ್ಲೂ ಇದನ್ನೇ ಹೇಳಿದ್ದೇವೆ. ಪರಿಹಾರಕ್ಕೆ ನಾವು ಬಂದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಭೂಸ್ವಾಧೀನಕ್ಕೆ ಪರವಾಗಿರುವ ರೈತರು ಅಭಿವೃದ್ದಿ ಪರ ಇದ್ದಾರೆ. ಅವರ ಬಗ್ಗೆಯೂ ನಮಗೆ ಕಾಳಜಿ ಇದೆ. ಅಭಿವೃದ್ದಿಗೆ ರೆಡ್ ಜೋನ್ ಸಮಸ್ಯೆಯಾಗಿದೆ ಎಂಬುದು ಅವರ ನಿಲುವು. ಹೀಗಾಗಿ ರೆಡ್ ಜೋನ್ ತೆರವುಗೊಳಿಸಲು ಸ್ವಾಧೀನದ ಪರ ಇರುವ ರೈತರು ಹೋರಾಟ ನಡೆಸಿದರೆ, ನಾವು ಸಹ ಬೆಂಬಲ ಕೊಡುತ್ತೇವೆ. ಅಭಿವೃಧ್ದಿ ಬಯಸುವುದು ತಪ್ಪಲ್ಲ. ಹೀಗಾಗಿ ರೆಡ್ ಜೋನ್ ತೆರವುಗೊಳಿಸುವುದರ ಮೂಲಕ ಅಭಿವೃದ್ದಿಗೆ ಅವಕಾಶವಾಗಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ರೈತ ಮುಖಂಡರಾದ ರಾಮಯ್ಯ, ಅಶ್ವಥ್, ಹನುಮಂತು, ಸುಮಾ, ಗಿರೀಶ್, ಶಿವಣ್ಣ, ಮಂಜುನಾಥ್ ಮತ್ತಿತರರು ಹಾಜರಿದ್ದರು.
ರೈತರ ಹೋರಾಟದಲ್ಲಿ ಸಂತೋಷ್ ಹೆಗ್ಡೆ ಭಾಗಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೈರಮಂಗಲ ವೃತ್ತದ ಪ್ರತಿಭಟನಾ ಸ್ಥಳದಲ್ಲಿ ನ್ಯಾಯಪೀಠವನ್ನು ಸ್ಥಾಪಿಸುತ್ತೇವೆ. ಭೂಮಾಲೀಕರ ಅಹವಾಲನ್ನು ನ್ಯಾಯಾಧೀಶರುಗಳು ಆಲಿಸಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ ಎಂದರು.
8ಕೆಆರ್ ಎಂಎನ್ 2.ಜೆಪಿಜಿ
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ರೈತರು ಶಾಸಕ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.