ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಕಲ್ಪನೆಯ ಕೂಸಾದ ಒಕ್ಕೂಟ ವ್ಯವಸ್ಥೆಯ ಬುಡಕ್ಕೆ ಕೈ ಹಾಕುತ್ತಿರುವ ವ್ಯವಸ್ಥೆಗಳ ವಿರುದ್ಧ ದ್ವನಿ ಎತ್ತಿಲ್ಲ ಎಂದರೆ ಊಳಿಗಮಾನ್ಯ ವ್ಯವಸ್ಥೆಗೆ ಹಿಂದಿರುಗಬೇಕಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು
ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಕಲ್ಪನೆಯ ಕೂಸಾದ ಒಕ್ಕೂಟ ವ್ಯವಸ್ಥೆಯ ಬುಡಕ್ಕೆ ಕೈ ಹಾಕುತ್ತಿರುವ ವ್ಯವಸ್ಥೆಗಳ ವಿರುದ್ಧ ದ್ವನಿ ಎತ್ತಿಲ್ಲ ಎಂದರೆ ಊಳಿಗಮಾನ್ಯ ವ್ಯವಸ್ಥೆಗೆ ಹಿಂದಿರುಗಬೇಕಾಗುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಚನ್ನಭೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ‍್ಯ ರಕ್ತ, ಬೆವರು, ತ್ಯಾಗ ಮತ್ತು ನಿರಂತರ ಹೋರಾಟದ ಪರಿಶ್ರಮದ ಫಲವಾಗಿದೆ. ವಿವಿಧ ಜಾತಿ, ಮತ ಪಂಥ ಭಾಷೆಗಳಿರುವ ನಮ್ಮ ರಾಷ್ಟ್ರದಲ್ಲಿ ಎಲ್ಲರಲ್ಲೂ ಸಮಾನ ಕಾನೂನು ಪಾಲನೆ ಕಾಣಬೇಕೆಂದರೆ ಸಂವಿಧಾನದಿಂದ ಮಾತ್ರ ಸಾಧ್ಯ. ದೇಶ ಸಂಕೋಲೆಗಳಿಂದ ಮುಕ್ತವಾದ ಸಂದರ್ಭಕ್ಕೆ 565 ಸಂಸ್ಥಾನಗಳಾಗಿ ಹಂಚಿಹೋಗಿದ್ದ ದೇಶ ಇಂದಿಗೂ ಕೇಂದ್ರದ ಯೂನಿಯನ್ ಅಡಿಯಲ್ಲಿ ಒಕ್ಕೂಟ ವ್ಯವಸ್ಥೆ ಜೀವಂತವಿದೆ ಎಂದರೆ ಅದು ನಮ್ಮ ಸಂವಿಧಾನದ ಹೆಗ್ಗಳಿಕೆ. ಇಂತಹ ಸಂವಿಧಾನಕ್ಕೆ ಅಪಾಯ ಬಂದಿರುವ ಸಂದರ್ಭದಲ್ಲಿ ನಾವೆಲ್ಲರೂ ಜಾಗರೂಕರಾಗಬೇಕು. ಸಂವಿಧಾನ ಮನುಷ್ಯನಿಗೆ ಸ್ವಾಭಿಮಾನದಿಂದ ಬದುಕುವ ಶಿಕ್ಷಣದ ಹಕ್ಕನ್ನು ಕೊಟ್ಟಿದೆ ಎಂದರು.
ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ಸೋಮಶೇಖರ್, ಡಿವೈಎಸ್‌ಪಿ ಮಲ್ಲೇಶ್, ನಗರಸಭೆ ಆಯುಕ್ತರಾದ ನೀಲಲೋಚನಾ ಪ್ರಭು, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜ್, ಮಾಜಿ ಅಧ್ಯಕ್ಷರಾದ ಸಿ.ಜಯರಾಜ್, ವಿಜಯ್ ಕುಮಾರ್ ಇತರರು ಹಾಜರಿದ್ದರು.
ಫೋಟೋ: 26 ಹೆಚ್‌ಎಸ್‌ಕೆ 3
ಹೊಸಕೋಟೆಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.