ವಾರದ ಕಾರ್ಯಕ್ರಮ
-ಬೆಲಗೂರಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಬಸವರಾಜ್
----ಕನ್ನಡಪ್ರಭವಾರ್ತೆ, ಹೊಸದುರ್ಗ
ಹೊಸದುರ್ಗ ತಾಲೂಕು ಬೆಲಗೂರು ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಾ ಸಪ್ತ ಕಾರ್ಯಕ್ರಮದ ಚಟುವಟಿಕೆ ಮತ್ತು ಅಂತರ್ಜಾಲ ಬಳಕೆ ಕುರಿತು ಪರಿಶೀಲಿಸಿ ಮಾತನಾಡಿದ ಅವರು ಶಿಕ್ಷಣ ಮಂತ್ರಾಲಯ ಸೂಚನೆಯಂತೆ ಕಾರ್ಯಕ್ರಮ ನಡೆಯುತ್ತಿದೆ. ಕಲಿಕೆ ಮತ್ತು ಅಭಿವೃದ್ಧಿ ಅಂಶಗಳನ್ನು ಕೇಂದ್ರೀಕರಿಸಿಕೊಂಡು ರಾಷ್ಟ್ರಾದ್ಯಂತ ವಾರದ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಏಕತೆ, ವೈವಿಧ್ಯತೆ ಪ್ರಜ್ಞೆ, ಕ್ರೀಡೆ ಮತ್ತು ಫಿಟ್‍ನೆಸ್ ಮಹತ್ವ, ಸಾಮಾಜಿಕ-ಭಾವನಾತ್ಮಕ ಯೋಗಕ್ಷೇಮ ಉತ್ತೇಜಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು, ಭಾಗಿ ದಾರರ ನಡುವೆ ಸಮನ್ವಯತೆ, ಸಂವೇದನಾಶೀಲತೆ ಬೆಳೆಸಲು ಶಿಕ್ಷಾ ಸಪ್ತ ಪೂರಕವಾಗಿದ್ದು, ಶಿಕ್ಷಕರು ಎಲ್ಲಾ ಚಟುವಟಿಕೆಗಳನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಉಪನ್ಯಾಸಕ ಕೆ.ಜಿ.ಪ್ರಶಾಂತ್ ಮಾತನಾಡಿ, ಶಿಕ್ಷಕರಿಗೆ ತಾಂತ್ರಿಕ ಜ್ಞಾನ ಅಗತ್ಯ. ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಬೋಧನೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ವಿಷಯವಾರು ಪೂರಕ ಚಿತ್ರಗಳು, ವಿಡಿಯೋಕ್ಲಿಪ್, ಚಟುವಟಿಕೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು. ಜನಪದ ಕಲಾವಿದ ರಂಗನಾಥ್ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಿಆರ್ ಪಿ ನೇತ್ರಾವತಿ. ಮುಖ್ಯ ಶಿಕ್ಷಕಿ ವಿಜಯಕುಮಾರಿ. ಶಿಕ್ಷಕರಾದ ಲತಾ, ಶೋಭಾ ಮತ್ತು ವಿದ್ಯಾರ್ಥಿಗಳು ಇದ್ದರು.
ಪೋಟೋ: ಹೊಸದುರ್ಗ ತಾಲೂಕು ಬೆಲಗೂರು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಯಟ್ ಉಪನ್ಯಾಸಕರ ತಂಡ ಭೇಟಿ ನೀಡಿ ಶಿಕ್ಷಾ ಸಪ್ತ ಚಟುವಟಿಕೆ ವೀಕ್ಷಿಸಿತು.
ಫೋಟೋ: 25 ಸಿಟಿಡಿ 4