ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಭಿವೃದ್ಧಿಗೆ ಪೂರಕ: ತಹಸೀಲ್ದಾರ್ ಅಮರೇಶ್ ಜಿ.ಕೆ.

KannadaprabhaNewsNetwork |  
Published : Sep 18, 2024, 01:50 AM IST
ಕೊಟ್ಟೂರು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆ ಅಂಗವಾಗಿ ತಹಶೀಲ್ದಾರ ಅಮರೇಶ್ ಜಿ.ಕೆ ಸರ್ದಾರ ವಲ್ಲಬಾಯಿ ಪಟೀಲ್ ಭಾವ ಚಿತ್ರಕ್ಕೆ  ಪುಸ್ಪರ್ಚಾನೆ ಗೈದು ನಮಿಸಿದರು | Kannada Prabha

ಸಾರಾಂಶ

ಸರ್ಧಾರ ವಲ್ಲಭ್‌ಭಾಯಿ ಪಟೇಲ್ ಅವರ ಮುತ್ಸದ್ಧಿ ಆಡಳಿತ ಹೈದರಾಬಾದ್ ಕರ್ನಾಟಕ ಪ್ರಾಂತ ರಚನೆಗೆ ಕಾರಣವಾಗಿ ನಂತರ ಕಲ್ಯಾಣ ಕರ್ನಾಟಕ ಉದಯಕ್ಕೆ ನಾಂದಿ ಹಾಡಿತು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.

ಕೊಟ್ಟೂರು: ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಈ ಭಾಗದ ಭರಪೂರ ಅಭಿವೃದ್ಧಿಗೆ ಕಾರಣವಾಗಿದೆ. ಈ ದಿನಾಚರಣೆ ಇಲ್ಲಿನ ಜನರ ಅಶೋತ್ತರಗಳಿಗೆ ತಕ್ಷಣವೇ ಪರಿಹಾರ ಸಿಗುವಂತಾಗಿದೆ ಎಂದು ಕೊಟ್ಟೂರು ತಾಲೂಕು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.ಮಂಗಳವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸರ್ಧಾರ ವಲ್ಲಭ್‌ಭಾಯಿ ಪಟೇಲ್ ಅವರ ಮುತ್ಸದ್ಧಿ ಆಡಳಿತ ಹೈದರಾಬಾದ್ ಕರ್ನಾಟಕ ಪ್ರಾಂತ ರಚನೆಗೆ ಕಾರಣವಾಗಿ ನಂತರ ಕಲ್ಯಾಣ ಕರ್ನಾಟಕ ಉದಯಕ್ಕೆ ನಾಂದಿ ಹಾಡಿತು ಎಂದು ಅವರು ಹೇಳಿದರು.

ಉಪ ತಹಸೀಲ್ದಾರ್ ಅನ್ನದಾನೇಶ್ವರ, ಕಂದಾಯ ಪರೀವಿಕ್ಷಕ ಹಾಲಸ್ವಾಮಿ ಮತ್ತು ತಾಲೂಕು ಆಡಳಿತ ಸಿಬ್ಬಂದಿ ಭಾಗವಹಿಸಿದ್ದರು.

ಹೂವಿನಹಡಗಲಿ: ಕಲ್ಯಾಣ ಕರ್ನಾಟಕ ದಿನಾಚರಣೆ

ಹೂವಿನಹಡಗಲಿ: ತಾಲೂಕಿನ ಉಪನಾಯಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ ಹಾಗೂ ವಿಶ್ವ ಕರ್ಮ ಜಯಂತಿಯನ್ನು ವಿಜೃಂಬಣೆಯಿಂದ ಆಚರಿಸಲಾಯಿತು.ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಹೆದ್ದಾರಿ ಆನಂದಪ್ಪ ನೆರವೇರಿಸಿದರು. ಶಾಲಾ ಮುಖ್ಯಗುರು ವೀರೇಶಪ್ಪ ಅಧ್ಯಕ್ಷತೆ ವಹಿಸಿದ್ದರು.ಗ್ರಾಪಂ ಉಪಾಧ್ಯಕ್ಷ ವೀರನಗೌಡ, ಗ್ರಾಮದ ಮುಖಂಡರಾದ ಚನ್ನವೀರಪ್ಪ, ಚನ್ನವೀರಯ್ಯ ಸ್ವಾಮಿ, ಬೆನ್ನೂರು ರುದ್ರಪ್ಪ, ಸಿಂಗಟಾಲೂರು ವಿಶ್ವನಾಥ, ಜಿ. ಗಂಗಪ್ಪ ಮತ್ತು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಾಲೆಯ ಬಿಸಿಯೂಟಕ್ಕೆ ಪಾತ್ರೆ ಪರಿಕರಗಳನ್ನು ದಾನವಾಗಿ ನೀಡಿದ ಬೆನ್ನೂರು ರುದ್ರಪ್ಪ ಹಾಗೂ ಸಿಂಗಟಾಲೂರು ವಿಶ್ವನಾಥ ಅವರನ್ನು ಶಾಲೆಯ ವತಿಯಿಂದ ಸನ್ಮಾನ ಮಾಡಲಾಯಿತು.ಮಂಜುನಾಥ ನಿರ್ವಹಿಸಿದರು, ಗುರುನಾಥ ದೀಕ್ಷಿತ್ ಸ್ವಾಗತಿಸಿದರು. ಕೆ.ಪರಶುರಾಮಪ್ಪ ಪ್ರಾಸ್ತಾವಿಕ ಮಾತನಾಡಿದರು. ಗಂಗಮ್ಮ ಹಕ್ಕಂಡಿ ವಂದಿಸಿದರು. ಪ್ರಕಾಶ, ಜಯಕುಮಾರ ಸಿ. ಪರಶುರಾಮಪ್ಪ, ಕಾವ್ಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ