ಸುಸಜ್ಜಿತ ಶವಾಗಾರ ಕಟ್ಟಡಕ್ಕೆ ಶೀಘ್ರವೇ ಚಾಲನೆ: ಶಾಸಕ

KannadaprabhaNewsNetwork |  
Published : Jun 23, 2025, 12:33 AM IST
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ರಕ್ಷಾ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ತಾಲೂಕು ಸರ್ಕಾರಿ ಆಸ್ಪತ್ರೆಗೆ ಸುಸಜ್ಜಿತವಾದ ಶವಾಗಾರ ಕಟ್ಟಡ ನಿರ್ಮಾಣ ಆಗಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿದ್ದು, ಶೀಘ್ರವೇ ನೂತನ ಕಟ್ಟಡ ನಿರ್ಮಾಣಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ನರಸಿಂಹರಾಜಪುರ: ತಾಲೂಕು ಸರ್ಕಾರಿ ಆಸ್ಪತ್ರೆಗೆ ಸುಸಜ್ಜಿತವಾದ ಶವಾಗಾರ ಕಟ್ಟಡ ನಿರ್ಮಾಣ ಆಗಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿದ್ದು, ಶೀಘ್ರವೇ ನೂತನ ಕಟ್ಟಡ ನಿರ್ಮಾಣಕ್ಕೆ ಕಾಯಕಲ್ಪ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿದ್ದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಕೆ.ಒ.ನರಸಿಂಹಮೂರ್ತಿ ಮಾತನಾಡಿ, ಈಗಿರುವ ಶವಾಗಾರ ಕೇವಲ ಒಂದೇ ಶವವನ್ನು ಇಡಲು ಸ್ಥಳಾವಕಾಶವಿದೆ. ಆದರೆ, ಏಕ ಕಾಲದಲ್ಲಿ ಎರಡು-ಮೂರು ಶವಗಳ ಮರಣೋತ್ತರ ಪರೀಕ್ಷೆ ನಡೆಸಬೇಕಾದಂತಹ ಸಂದರ್ಭ ಬಂದಾಗ ಉಳಿದ ಶವಗಳನ್ನು ಇಡಲು ಸ್ಥಳವಿಲ್ಲದಂತಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಇದು ಬಹಳ ವರ್ಷಗಳ ಬೇಡಿಕೆಯಾಗಿದೆ. ಈ ಬಾರಿ ಸುಸಜ್ಜಿತವಾದ ಒಂದಕ್ಕಿಂತ ಹೆಚ್ಚು ಶವವಗಳನ್ನು ಇಡಲು ಸ್ಥಳಾವಕಾಶ ಇರುವ ಶವಾಗಾರ ಕಟ್ಟಡ ನಿರ್ಮಾಣ ಮಾಡಲು ಕ್ರಮವಹಿಸುತ್ತೇನೆ ಎಂದರು.

ಹೊಸ ತಾಲೂಕು ಪ್ರಯೋಗಾಲಯ ಕಟ್ಟಡಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎರಡೂ ಅನುದಾನ ಇದೆ. ಆದ್ದರಿಂದ ಸಂಸದರಿಗೆ 3-4 ಬಾರಿ ನೂತನ ಲ್ಯಾಬ್ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಿಕೊಡುವಂತೆ ಕೋರಿದರೂ ನೀಡಲಿಲ್ಲ. ರೋಗಿಗಳಿಗೆ ತೊಂದರೆ ಆಗಬಾರದೆಂಬ ಸದುದ್ದೇಶದಿಂದ ಕಾರ್ಯಾರಂಭ ಮಾಡಲಾಗಿದೆ. ಆದರೆ, ಅಧಿಕೃತ ಉದ್ಘಾಟನೆ ಬಾಕಿ ಇದೆ ಎಂದು ಶಾಸಕರು ತಿಳಿಸಿದರು.

ರಕ್ಷಾ ಸಮಿತಿ ಸದಸ್ಯರುಗಳು ಮಾತನಾಡಿ, ಆಸ್ಪತ್ರೆ ಅಧಿಕಾರಿಗಳಿಂದ, ಸಿಬ್ಬಂದಿಗಳಿಂದ ನಮಗೆ ಯಾವುದೇ ಮಾಹಿತಿಗಳು ದೊರಕುತ್ತಿಲ್ಲ ಎಂದು ದೂರಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ತಿಂಗಳಿಗೊಮ್ಮೆ ನನ್ನ ಅನುಪಸ್ಥಿತಿಯಲ್ಲೂ ಸಮಿತಿ ಸದಸ್ಯರುಗಳನ್ನು ಕರೆಸಿ ಆಸ್ಪತ್ರೆ ವ್ಯವಸ್ಥೆ ಬಗ್ಗೆ, ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಕೆ.ಒ.ನರಸಿಂಹಮೂರ್ತಿ ಅವರಿಗೆ ಸೂಚಿಸಿದರು.

ಸಮಿತಿ ಸದಸ್ಯ ಸುಜಿತ್ ಮಾತನಾಡಿ, ಆಸ್ಪತ್ರೆಯಿಂದ ತುರ್ತು ವಾಹನ ತುರ್ತಾಗಿ ಹೋಗುವ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಾರ್ವಜನಿಕರುಗಳು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಯಾವುದಾದರೊಂದು ಅನುದಾನದಿಂದ ಆಸ್ಪತ್ರೆಗೆ ವಾಚ್‌ಮ್ಯಾನ್ ನೇಮಕ ಮಾಡಿಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು. ಸಭೆಯಲ್ಲಿ ರಕ್ಷಾ ಸಮಿತಿ ಸದಸ್ಯರುಗಳಾದ ಎಲಿಯಾಸ್, ಅಭಿಲಾಷ್, ದಾನಮ್ಮ, ರಥನ್‌ಗೌಡ ಅರಗಿ, ರೇವಂತ್, ಸುನೀಲ್‌ಕುಮಾರ್, ಸುಜಿತ್, ಕೊಪ್ಪ ಎಪಿಎಂಸಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಮುಖಂಡರುಗಳಾದ ಪಿ.ಆರ್.ಸದಾಶಿವ, ರಘು ಮತ್ತಿತರರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ