ಭದ್ರತೆ ನೀಡದೆ ಪರಿಹಾರ ಕೊಟ್ಟರೆ ಏನು ಪ್ರಯೋಜನ

KannadaprabhaNewsNetwork |  
Published : Jun 06, 2025, 01:15 AM IST
೫ಕೆಎಲ್‌ಆರ್-೬ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ ಕೋಲಾರದ ಸಹನಾರ ಮೃತದೇಹ ಕೋಲಾರದ ಎಸ್‌ಜಿ ಲೇಔಟ್‌ನ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿರುವುದು. | Kannada Prabha

ಸಾರಾಂಶ

ನನ್ನ ಮಗಳು ಮತ್ತು ಆಕೆಯ ಸಹೋದ್ಯೋಗಿಗಳು ಆರ್‌ಸಿಬಿ ಸಂಭ್ರಮಾಚಾರಣೆ ಕಾರ್ಯಕ್ರಮ ಹೋಗುವಾಗ ನಮಗೆ ತಿಳಿಸಿಯೇ ಹೋಗಿದ್ದಳು. ಆಗ ಎಚ್ಚರಿಕೆಯಿಂದ ಹೋಗಿಬಿರುವಂತೆ ಹೇಳಿದ್ದೆ. ಕಾರ್ಯಕ್ರಮಕ್ಕೆ ಹೋಗಲೆಂದು ಕೆಲಸಕ್ಕೆ ಅರ್ಧ ದಿನದ ರಜೆ ಹಾಕಿದ್ದಳು. ನನ್ನ ಮಗಳನ್ನು ಗಂಡು ಮಗು ತರಹ ಸಾಕಿದ್ದೆ ಎನ್ನುತ್ತಾರೆ ಸಹನಾ ತಂದೆ.

ಕನ್ನಡಪ್ರಭ ವಾರ್ತೆ ಕೋಲಾರಐಪಿಎಲ್ ಪಂದ್ಯಲ್ಲಿ ಕಪ್‌ ಗೆದ್ದ ಆರ್‌ಸಿಬಿ ತಂಡದವರನ್ನು ಅಭಿನಂದಿಸುವುದಕ್ಕಾಗಿ ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ಸಿಕ್ಕಿ ಮೃತಪಟ್ಟ ಎಂಜಿನಿಯರ್‌ ಸಹನಾ ಅ‍ರ ಮೃತದೇಹವನ್ನು ನಗರದ ಎಸ್‌ಜಿ ಲೇಔಟ್‌ನ ಸ್ವಗೃಹಕ್ಕೆ ಗುರುವಾರ ತರಲಾಯಿತು. ವೇಳೆ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಪರಿಹಾರ ಯಾರಿಗೆ ಬೇಕು

ಮೃತ ಸಹಾನಾ ತಂದೆ ಸುರೇಶ್‌ಬಾಬು ಮಾತನಾಡಿ, ನನ್ನ ಮಗಳು ಮತ್ತು ಆಕೆಯ ಸಹೋದ್ಯೋಗಿಗಳು ಆರ್‌ಸಿಬಿ ಸಂಭ್ರಮಾಚಾರಣೆ ಕಾರ್ಯಕ್ರಮ ಹೋಗುವಾಗ ನಮಗೆ ತಿಳಿಸಿಯೇ ಹೋಗಿದ್ದಳು. ಆಗ ಎಚ್ಚರಿಕೆಯಿಂದ ಹೋಗಿಬಿರುವಂತೆ ಹೇಳಿದ್ದೆ. ಕಾರ್ಯಕ್ರಮಕ್ಕೆ ಹೋಗಲೆಂದು ಕೆಲಸಕ್ಕೆ ಅರ್ಧ ದಿನದ ರಜೆ ಹಾಕಿದ್ದಳು. ನನ್ನ ಮಗಳನ್ನು ಗಂಡು ಮಗು ತರಹ ಸಾಕಿದ್ದೆ, ನಮಗೆ ಯಾವತ್ತೂ ಕೂಡ ಅವಳು ಬೇಸರ ಮಾಡಿಲ್ಲ ಎಂದು ಹೇಳಿದರು.

ಸಹನಾಳ ಅಂತ್ಯಸಂಸ್ಕಾರ ವನ್ನು ನಮ್ಮ ಸ್ವಗ್ರಾಮದಲ್ಲಿ ಮಾಡುತ್ತೇವೆ, ಸರ್ಕಾರದಿಂದ ನೀಡುವ ಪರಿಹಾರ ಯಾರಿಗೆ ಬೇಕು, ನಮ್ಮ ಮಗು ಇದ್ದಿದ್ದರೆ ಅದಕ್ಕಿಂತ ಹತ್ತು ಪಟ್ಟು ಸಂಪಾದನೆ ಮಾಡುತಿದ್ದಳು, ಭದ್ರತೆ ನೀಡದೆ ಪರಿಹಾರ ಕೊಟ್ಟರೆ ಏನು ಪ್ರಯೋಜನ ಎಂದು ಸುರೇಶ್ ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಪ್ರಶ್ನಿಸಿದರು.ಬಡಮಾಕನಹಳ್ಳಿಯಲ್ಲಿ ಶವಸಂಸ್ಕಾರ

೧೦ ಗಂಟೆಯ ನಂತರ ಸ್ವಗ್ರಾಮ ಕೆಜಿಎಫ್ ತಾಲ್ಲೂಕು ಬಡಮಾಕನಹಳ್ಳಿಯಲ್ಲಿ ಅಂತ್ಯಸಂಸ್ಕಾರಕ್ಕೆಂದು ತೆಗೆದುಕೊಂಡು ಹೋಗಲಾಯಿತು. ಗುರುವಾರ ಮಧ್ಯಾಹ್ನ ಮೃತ ಸಹನಾರ ಅಂತ್ಯಸಂಸ್ಕಾರ ಕೆಜಿಎಫ್ ತಾಲೂಕಿನ ಬಡಮಾಕನಹಳ್ಳಿಯಲ್ಲಿ ನೇರವೇರಿಸಲಾಯಿತು. ಮೃತ ಸಹನ ನಿವಾಸಕ್ಕೆ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಹಾಗೂ ತಹಸೀಲ್ದಾರ್ ಡಾ.ನಯನ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ