ಶಾಸಕರು ವಿದೇಶ ಪ್ರವಾಸ ಹೋದರೆ ತಪ್ಪೇನು?

KannadaprabhaNewsNetwork |  
Published : Feb 16, 2026, 03:00 AM IST
ಶಾಸಕರು ವಿದೇಶ ಪ್ರವಾಸ ಹೋದರೆ ತಪ್ಪೇನು?: ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ಶಾಸಕರು ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನು? ನಾನು ಮತ್ತೆ ಈಗ ಹೋಗುತ್ತೇನೆ. ಕಮಿಟಿ ಟೂರ್ ಇರುತ್ತೆ. ಶಾಸಕರು ಕೂಡಿ ಹೋಗುತ್ತಿರುತ್ತಾರೆ. ರಾಜಕೀಯ ಅಥವಾ ಗುಂಪುಗಾರಿಕೆ ಮಾಡಿಕೊಂಡು ಯಾರೂ ಪ್ರವಾಸ ಹೋಗುತ್ತಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಾಸಕರು ವಿದೇಶ ಪ್ರವಾಸಕ್ಕೆ ಹೋದರೆ ತಪ್ಪೇನು? ನಾನು ಮತ್ತೆ ಈಗ ಹೋಗುತ್ತೇನೆ. ಕಮಿಟಿ ಟೂರ್ ಇರುತ್ತೆ. ಶಾಸಕರು ಕೂಡಿ ಹೋಗುತ್ತಿರುತ್ತಾರೆ. ರಾಜಕೀಯ ಅಥವಾ ಗುಂಪುಗಾರಿಕೆ ಮಾಡಿಕೊಂಡು ಯಾರೂ ಪ್ರವಾಸ ಹೋಗುತ್ತಿಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲ ಶಾಸಕರ ವಿದೇಶ ಪ್ರವಾಸದ ವಿಚಾರಕ್ಕೆ ಮಾತನಾಡಿ, ನಾನು ಕೂಡ ಸದ್ಯ ಜರ್ಮನ್‌ಗೆ ಹೋಗುತ್ತಿರುವೆ. ಹಾಗಂತ ಬೇರೆ ಅರ್ಥ ಕಲ್ಪಿಸಬೇಕಿಲ್ಲ. ಯಾರೂ ಕೂಡ ರಾಜಕೀಯಕ್ಕಾಗಿ ಪ್ರವಾಸ ಹೋಗುತ್ತಿಲ್ಲ ಎಂದರು.

ಬಿಜೆಪಿಯಿಂದ ಸಾವಿರ ಸುಳ್ಳಿನ‌ ಪೋಸ್ಟರ್ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ನಾಲ್ಕು ವರ್ಷ ಇತ್ತು, ಇವರೇನು ಮಾಡಿದರು? ನಾವು ಸಾವಿರ ದಿನದಲ್ಲಿ ₹70 ಸಾವಿರ ಕೋಟಿಯಷ್ಟು ಗ್ಯಾರಂಟಿಗೆ ಹಣ ಕೊಟ್ಟಿದ್ದೇವೆ. ನಿನ್ನೆ 2 ಲಕ್ಷ 30 ಸಾವಿರ ಭೂ ಕಾರ್ಡ್ ಕೊಡುವ ಕೆಲಸ ಮಾಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ದಾರೆ? ಬಿಜೆಪಿಯಲ್ಲಿ ನಾಲ್ಕು ವರ್ಷದಲ್ಲಿ 3 ಮುಖ್ಯಮಂತ್ರಿಗಳು ಬೇರೆ ಬೇರೆಯಾದರು. ಪಾಪ ಆ ವಿಜಯೇಂದ್ರಗೆ ಹೇಳಿ, ಯಡಿಯೂರಪ್ಪನವರಿಗೆ ಪೂರ್ತಿ ಅವಧಿ ಕೆಲಸ ಮಾಡಲು ಅವರು ಬಿಡಲೇ ಇಲ್ಲ. ಸಿದ್ದರಾಮಯ್ಯನವರು 5 ವರ್ಷ ಆಗಿ ಈಗ ಮತ್ತೆ ಎರಡೂವರೆ ವರ್ಷ ಮಾಡುತ್ತಿದ್ದಾರೆ. ಬಿಜೆಪಿಯವರಿಂದ ನಾವು ಏನು ಕಲಿಯಬೇಕಿಲ್ಲ. ಗ್ಯಾರಂಟಿಗೆ ಟೀಕೆ ಮಾಡುವ ಪ್ರಧಾನಿಯವರೇ ಈಗ ಗ್ಯಾರಂಟಿ ನಕಲು ಮಾಡುತ್ತಿದ್ದಾರೆ ಎಂದು ದೂರಿದರು.

ಸಂಸದ ರಮೇಶ ಜಿಗಜಿಣಗಿ ಪೋಸ್ಟರ್ ಬಿಡುಗಡೆಗೆ ತಿರುಗೇಟು ನೀಡಿದ ಸಚಿವರು, ಸಂಸತ್ತಿನಲ್ಲಿ ಹೋಗಿ ಮೊದಲು ಪ್ರಶ್ನೆ ಕೇಳಲಿ. ಇವರಿಗೆ ಪೋಸ್ಟರ್ ಹಚ್ಚಲು ಜನ ಆರಿಸಿ ಕಳಿಸಿಲ್ಲ. ರೈಲು, ಉದ್ಯೋಗ ಸೃಷ್ಟಿ, ವಿಮಾನ ನಿಲ್ದಾಣ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ಆ ಕುರಿತು ಚರ್ಚೆ ಮಾಡಲಿ. ಸಂಸತ್‌ ‌ಸದಸ್ಯರಾಗಿ ಪೋಸ್ಟರ್ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪೋಸ್ಟರ್ ಹಚ್ಚುವ ಮಟ್ಟಕ್ಕೆ ಸಂಸದರು ಬಂದರಾ ಎಂದು ಅವರು ಲೇವಡಿ ಮಾಡಿದರು.

ಡಿಸಿಎಂ ಡಿಕೆಶಿ ಅವರು ಸೋನಿಯಾ ಗಾಂಧಿ ಭೇಟಿ ವಿಚಾರದ ಬಗ್ಗೆ ಮಾತನಾಡಿ, ಅವರು ಕೆಪಿಸಿಸಿ ಅಧ್ಯಕ್ಷರು. ಅವರು ತಮ್ಮ ಭಾವನೆಗಳನ್ನು ಹೇಳಿರುತ್ತಾರೆ. ನಾವು ಹೋದಾಗ ನಮ್ಮ ಭಾವನೆ ಹೇಳುತ್ತೇವೆ. ನಾನು ಪದೇ ಪದೇ ಹೇಳುವುದಿಲ್ಲ, ಇದು ಕೊನೆಯ ಬಾರಿ ನಮ್ಮ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ
ಪು4...ಲೀಡ್‌.... ಕಲಾವಿದರಿಗೆ ಬೇಕಿದೆ ಸಮಾಜ, ಸರ್ಕಾರದ ನೆರವು