- ನನ್ನ ಟೀಕಿಸಿದವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಲೀಡ್ ಕೊಡಿಸಿದ್ದೀರಿ ಎಂದು ಪ್ರಶ್ನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಶಾಮನೂರು ಕುಟುಂಬ ತಗೊಂಡು ನಾನೇನು ಮಾಡಲಿ? ನೀವು ಆ ಕುಟುಂಬಕ್ಕೆ ಅಭಿಮಾನಗಳಾಗಿದ್ದರೆ ಇರಿ. ಸಚಿವ, ಸಂಸದರು, ಶಾಸಕರ ಬಗ್ಗೆ ನಾನು ನೇರವಾಗಿ ಪ್ರಶ್ನೆ ಮಾಡಿದರೆ ನೀವ್ಯಾಕೆ ಮಾತನಾಡುತ್ತೀರಿ? ಸಂಬಂಧಿಸಿದವರು ಅದಕ್ಕೆ ಉತ್ತರಿಸಲಿ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಕಾಂಗ್ರೆಸಿಗರಿಗೆ ಟಾಂಗ್ ನೀಡಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನೋಡಲು ಸೈಲೆಂಟ್ ಆಗಿದ್ದೇನೆ. ಅಷ್ಟೇ ವೈಲೆಂಟ್ ಸಹ ಆಗುತ್ತೇನೆ. ನಾನು ಮಾತನಾಡಿದ್ದು, ಪ್ರಶ್ನಿಸಿದ್ದು ನೇರವಾಗಿ ಸಚಿವರು, ಜಿಲ್ಲಾಡಳಿತವನ್ನು. ಇದಕ್ಕೆ ಉತ್ತರಿಸಬೇಕಾದವರೂ ಸಚಿವರು. ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕಿತ್ತು. ಆದರೆ, ಸ್ವಂತ ಅಸ್ತಿತ್ವವೇ ಇಲ್ಲದ ಕೆಲ ಕಾಂಗ್ರೆಸ್ಸಿಗರು ಮನಬಂದಂತೆ ಮಾತನಾಡಿದ್ದಾರೆ. ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ನನಗೆ ಇನ್ನೂ ಬಚ್ಚಾ ಅಂದಿದ್ದಾರೆ. ಗಡಿಗುಡಾಳ ಮಂಜುನಾಥ, ಎ.ನಾಗರಾಜ, ಕೆ.ಚಮನ್ ಸಾಬ್ ಹೀಗೆ ನನ್ನನ್ನು ಟೀಕಿಸಿದವರು ವಿಧಾನಸಭೆ- ಲೋಕಸಭೆ ಚುನಾವಣೆಯಲ್ಲಿ ತಮ್ಮ ನಾಯಕರಿಗೆ ಎಷ್ಟು ಲೀಡ್ ಕೊಡಿಸಿದ್ದಾರೆಂದು ಮೊದಲು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಗಡಿಗುಡಾಳ ಮಂಜುನಾಥ ನಿಮ್ಮ ವಾರ್ಡಲ್ಲೇ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮ ನಾಯಕರಿಗೆ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಎಷ್ಟು ಲೀಡ್ ಕೊಡಿಸಿದ್ದೀರಿ? ನನ್ನ ಬಗ್ಗೆ ಎಪಿಎಂಸಿ ಮಾರ್ಕೆಟ್, ಬ್ಯಾಂಕ್‌ನ ಏನೋ ದಾಖಲೆ ಇವೆಯೆಂದೆಯೆಲ್ಲಾ, ಅವನ್ನೆಲ್ಲಾ ದಾಖಲೆ ಸಮೇತ ಬೇಗನೇ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ 2018ರಲ್ಲಿ ನಿಮ್ಮ ನಾಯಕರು ಸೋತ ನಂತರ ಸೇಡು ತೀರಿಸಿಕೊಳ್ಳಲು ನನಗೆ ಹೇಗೆಲ್ಲಾ ವ್ಯವಹಾರದಲ್ಲಿ ಕಿರುಕುಳ ಕೊಟ್ಟಿದ್ದೀರೆಂದು ಬಹಿರಂಗಪಡಿಸುವೆ. ನಿಮ್ಮ ನಾಯಕರ ವಿರುದ್ಧದ ಕೇಸ್ ಹೇಗೆ ಮುಚ್ಚಿ ಹಾಕಿದ್ದೀರಿ ಎಂಬ ಬಗ್ಗೆ 400 ಪುಟಗಳ ಸಾಕ್ಷ್ಯ ಸಮೇತ ಬಿಜೆಪಿ ರಾಜ್ಯ ಮುಖಂಡರ ಸಮಕ್ಷಮ ಬೆಂಗಳೂರಿನಲ್ಲಿ ನಾನು ಬಹಿರಂಗಪಡಿಸುವೆ ಎಂದು ಸವಾಲು ಹಾಕಿದರು.
- - -
- ಲೋಕಿಕೆರೆ ನಾಗರಾಜ, ರಾಜ್ಯ ಉಪಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ
-15ಕೆಡಿವಿಜಿ6: