ರಾಮನಗರ: ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಎಳೆ ಕೂಸು. ಮೂರು ಚುನಾವಣೆಗಳಲ್ಲಿ ಜನರಿಂದ ತಿರಸ್ಕೃತಗೊಂಡವರು. ಬಿಡದಿ ಟೌನ್ ಶಿಪ್ ಯೋಜನೆ ವಿಚಾರದಲ್ಲಿ ರಿಯಾಲಿಟಿ ಚೆಕ್ ಮಾಡಿ ಏನು ಸಾಧನೆ ಮಾಡುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದುಂತೂರು ವಿಶ್ವನಾಥ್ ಪ್ರಶ್ನಿಸಿದರು.
ಕೆಂಪು ವಲಯ ಘೋಷಿಸಿದ್ದು ಯಾರೆಂದು ಹೇಳಲಿ:
ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ರಿಯಾಲಿಟಿ ಚೆಕ್ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಬಿಡದಿ ಟೌನ್ ಶಿಪ್ ಯೋಜನೆ ಜಾರಿ ಮಾಡಿದ್ದು ಹಾಗೂ ಕೆಂಪು ವಲಯ ಎಂದು ಘೋಷಣೆ ಮಾಡಿದ್ದು ಯಾರ ಅಧಿಕಾರದ ಅವಧಿಯಲ್ಲಿ ಎಂಬುದರ ಸರ್ಕಾರಿ ದಾಖಲೆಗಳನ್ನು ಜನರಿಗೆ ಕೊಡಲಿ. ಅರ್ಚಕರಹಳ್ಳಿಯಲ್ಲಿ ರೈತರಿಗೆ ಉದ್ಯೋಗ ಭರವಸೆ ನೀಡಿ ರಾಜೀವ್ ಗಾಂಧಿ ಆರೋಗ್ಯ ವಿವಿಗಾಗಿ ಭೂ ಸ್ವಾಧೀನಕ್ಕೆ ಕುಮಾರಸ್ವಾಮಿರವರು 2007ರಲ್ಲಿ ಆದೇಶ ಹೊರಡಿಸಿದರು. ಅಲ್ಲಿ ಭೂ ಸ್ವಾಧೀನಕ್ಕೂ ಮುನ್ನ ರೈತರ ಸಭೆ ಕರೆಯಲಿಲ್ಲ, ಹೋಗಲಿ ರೈತರ ಮಕ್ಕಳಿಗೆ ಉದ್ಯೋಗವನ್ನು ನೀಡಲಿಲ್ಲ, ಘೋಷಿಸಿದಂತೆ ಮೆಡಿಕಲ್ ಕಾಲೇಜು ನಿರ್ಮಾಣವನ್ನೂ ಮಾಡಿಲ್ಲ ಏಕೆಂದು ಪ್ರಶ್ನಿಸಿದರು.ಮುಖ್ಯಮಂತ್ರಿ ಆಗಲು ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ಸನ್ನು ಕುಮಾರಸ್ವಾಮಿ ತಬ್ಬಿಕೊಂಡಿದ್ದರು. ಕೊನೆಗೆ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಿದವರ ವಿರುದ್ಧವೇ ತಿರುಗಿ ಬೀಳುವ ಕುಖ್ಯಾತಿ ಕುಮಾರಸ್ವಾಮಿ ಅವರದ್ದಾಗಿದೆ. ಇನ್ನು ಮಾಜಿ ಪ್ರಧಾನಿ ದೇವೇಗೌಡರು ನರೇಂದ್ರ ಮೋದಿಯವರು ಪ್ರಧಾನಿ ಆಗಬಾರದೆಂದು ಹೇಳಿಕೆ ನೀಡಿದ್ದರು. ಆದರೀಗ ಬಿಜೆಪಿಯನ್ನು ತಬ್ಬಿಕೊಂಡು ಕುಮರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಇವರಿಗೆಲ್ಲ ಯಾವ ನೈತಿಕತೆ ಇದೆ ಎಂದು ಟೀಕಿಸಿದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬಮೂಲ್ ನಿರ್ದೇಶಕ ಲಿಂಗೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಂತರಾಜು, ನಗರಸಭೆ ಮಾಜಿ ಅಧ್ಯಕ್ಷ ವಾಸಿಲ್ ಖಾನ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಚ್. ರಾಜು, ಮುಖಂಡರಾದ ಜಯಣ್ಣ, ಸಿಎನ್ ಆರ್ ವೆಂಕಟೇಶ್, ಪರ್ವಿಜ್ ಪಾಷ,ರಂಜಿತ್, ಸುನೀಲ್ ಕುಮಾರ್ , ರಂಗನಾಥ್, ಟಿ. ಡಿ. ರಾಜು ಇದ್ದರು.
ತಂದೆ ಮುಖ್ಯಮಂತ್ರಿಯಾಗಿದ್ದರೂ, ಮಂಡ್ಯದಲ್ಲಿ ಜೆಡಿಎಸ್‌ನ 8 ಶಾಸಕರಿದ್ದರೂ ನಿಖಿಲ್ ಲೋಕಸಭೆ ಚುನಾವಣೆ ಗೆಲ್ಲಲಾಗದೆ ಹೀನಾಯವಾಗಿ ಸೋತರು. ರಾಮನಗರ ಮತ್ತು ಚನ್ನಪಟ್ಟಣದ ಜನರೂ ತಿರಸ್ಕರಿಸಿದರು. 2028ಕ್ಕೆ ಯಾರು ಮಾಜಿಯಾಗಬೇಕು ಎಂಬುದನ್ನು ಜನ ತೀರ್ಮಾನಿಸುತ್ತಾರೆ. ನಿಖಿಲ್ ತಮ್ಮ ವಯಸ್ಸಿಗೆ ತಕ್ಕಂತೆ ಮಾತನಾಡಲಿ.
27ಕೆಆರ್ ಎಂಎನ್ 1.ಜೆಪಿಜಿ