ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಶನಿವಾರ ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಸಭಾಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಹಾಗೂ ಸಾವಿತ್ರಿಭಾಯಿ ಪುಲೆ ಶಿಕ್ಷಕಿಯರ ಸಂಘದ ಆಶ್ರಯದಲ್ಲಿ ಭಾಗೀರಥಿ ಆಲೂರ ಅವರ ನೆನಪಿನಂಗಳ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತಿ ಚಂದ್ರಶೇಖರ ಹೆಗಡೆ ಪುಸ್ತಕ ಅವಲೋಕನ ಮಾಡಿ ಮಾತನಾಡಿ, ಕಾವ್ಯದ ಮೂಲಕ ಸಮಾಜ ಸಮಸ್ಸೆಗಳಿಗೆ ಉತ್ತರ ನೀಡಿದ್ದಾರೆ. ಇಲ್ಲಿನ ಕವಿತೆಗಳು ಬದುಕನ್ನು ಬದಲಿಸಿ ಸನ್ಮಾರ್ಗದಲ್ಲಿ ಹೋಗುವಂತೆ ಮಾಡುತ್ತವೆ ಎಂದರು.ಹನುಮಂತ ಮಾವಿನಮರ, ಸಾನ್ನಿಧ್ಯ ವಹಿಸಿದ್ದ ಗುರುಸಿದ್ದೇಶ್ವರ ಬೃಹನ್ಮಠದ ಬಸವರಾಜ ಸ್ವಾಮೀಜಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಜಮುನಾ ಸಿಂಗದ ಶಿಕ್ಷಣ ತಜ್ಞ ಡಾ.ವಿ.ಎ.ಬೆನಕನಾಳ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ವಿ.ಜಾಧವ, ಮುದ್ರಕ ಗಣೇಶ ರಾಜನಾಳ, ಕವಯತ್ರಿ ಭಾಗೀರಥಿ ಆಲೂರ, ಮೋಹನ ಕರನಂದಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಭಾಗೀರಥಿ ಆಲೂರ ಅವರ ನೆನಪಿನಂಗಳ ಕೃತಿಯನ್ನು ಜೆಡಿಎಸ್ ಮಲ್ಲಿಕಾರ್ಜುನ ಬನ್ನಿ ಬಿಡುಗಡೆಗೊಳಿಸಿದರು.