ಫಲಾಪೇಕ್ಷೆ ಇಲ್ಲದೆ ಗುರುವಿನ ಸೇವೆ ಮಾಡಿದಾಗ ಫಲ ನಿಶ್ಚಿತ

KannadaprabhaNewsNetwork |  
Published : Sep 13, 2026, 02:30 AM IST
12ಜಿಟಿಎಲ್1 | Kannada Prabha

ಸಾರಾಂಶ

ಫಲಾಪೇಕ್ಷೆ ಇಲ್ಲದೆ ಗುರುವಿನ ಸೇವೆ ಮಾಡಿದಾಗ ಅದರ ಫಲ ಮಾತ್ರ ಸೇವೆ ಮಾಡಿದವರಿಗೆ ಖಂಡಿತ ದೊರೆಯುವುದೆಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿಚಾವಾಚಾರ್ಯ ಸ್ವಾಮೀಜಿ ಹೇಳಿದರು.

ಗುತ್ತಲ: ಫಲಾಪೇಕ್ಷೆ ಇಲ್ಲದೆ ಗುರುವಿನ ಸೇವೆ ಮಾಡಿದಾಗ ಅದರ ಫಲ ಮಾತ್ರ ಸೇವೆ ಮಾಡಿದವರಿಗೆ ಖಂಡಿತ ದೊರೆಯುವುದೆಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಪಟ್ಟದ್ದೇವರ ಹಿರೇಮಠದ ಲೋಕಾರ್ಪಣೆ ಅಂಗವಾಗಿ ನಡೆದ ಧರ್ಮಸಭೆಯ ಸಾನಿಧ್ಯವಹಿಸಿ ಆಶೀರ್ವಚನದಲ್ಲಿ ಪಟ್ಟದ್ದೇವರ ಹಿರೇಮಠದ ಜೀರ್ಣೋದ್ಧಾರ ಕಾರ್ಯಕ್ಕೆ ತನು-ಮನ-ಧನದಿಂದ ಸೇವೆಗೈದವರಿಗೆ ನಿಶ್ಚಿತವಾಗಿ ಉತ್ತಮ ಫಲ ದೊರೆಯುವುದು. ಸಮಾಜದಲ್ಲಿ ಧಾರ್ಮಿಕ ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಗುರು ಹಿರಿಯರ ಹಿತವಚನಗಳನ್ನು ಕೇಳಬೇಕು. ಮಹಾತ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಜೀವನ ಸಾರ್ಥಕ ಆಗುವುದೆಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಲಿಂಗನಾಯಕನಹಳ್ಳಿ ಮಠದ ಶ್ರೀಚನ್ನವೀರ ಸ್ವಾಮೀಜಿ ಆರ್ಶೀವಚನ ನೀಡಿ, ಮಠ ಮಾನ್ಯಗಳಲ್ಲಿನ ಧರ್ಮ ಕಾರ್ಯದಲ್ಲಿ ಎಲ್ಲರೂ ಸೇವೆ ಮಾಡುತ್ತಿರುವುದು ಹರ್ಷ ತಂದಿದೆ. ತಾವೆಲ್ಲರೂ ಸಹ ಇಂತಹ ಧಾರ್ಮಿಕ ಕಾರ್ಯದಲ್ಲಿ ತೊಡಗಿ ಉತ್ತಮವಾದ ಮಠವನ್ನು ನಿರ್ಮಾಣ ಮಾಡಿದ್ದೀರಿ ಎಂದರು.

ಸಮ್ಮುಖ ವಹಿಸಿದ್ದ ಹಾವನೂರ ದಳವಾಯಿ ಮಠದ ಶ್ರೀಶಿವಕುಮಾರ ಸ್ವಾಮಿಜಿ, ಅಧ್ಯಕ್ಷತೆ ವಹಿಸಿದ್ದ ಗುತ್ತಲ ಕಲ್ಮಠ- ಅಗಡಿ ಪ್ರಭುಸ್ವಾಮಿ ಮಠದ ಶ್ರೀಗುರುಸಿದ್ದ ಸ್ವಾಮೀಜಿಗಳು ಆರ್ಶೀಚನ ನೀಡಿದರು. ತಾಲೂಕು ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷ ಸಿ.ಬಿ. ಕುರವತ್ತಿಗೌಡರ, ಕುಮಾರಯ್ಯ ಹಿರೇಮಠ ಮಾತನಾಡಿದರು.

ಲೇಖಕಿ ಡಾ. ಪುಷ್ಪಾವತಿ ಶೆಲ್ವಡಿಮಠ(ಹಿರೇಮಠ) ಪ್ರಾಸ್ತವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಲೇಖಕಿ ಡಾ. ಪುಷ್ಪಾವತಿ ಶೆಲ್ವಡಿಮಠ (ಹಿರೇಮಠ) ಅವರು ರಚಿಸಿರುವ ''ಅನುಭಾವ ದೀಪ್ತಿ'' ಕೃತಿಯನ್ನು ವೇದಿಕೆಯ ಮೇಲಿದ್ದ ಸ್ವಾಮೀಜಿಗಳು ಬಿಡುಗಡೆಗೊಳಿಸಿದರು.

ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ವಿಶ್ವನಾಥ ಮನ್ನಂಗಿ ವೇದಿಕೆಯ ಮೇಲಿದ್ದರು.

ವಿಕಾಸ ಹಿರೇಮಠ, ಶಿವಕುಮಾರ ಮರಿಯಾನಿ, ಮಹದೇಪ್ಪ ಗಡ್ಡಿ, ಶಿವಕುಮಾರ ಹಿರೇಮಠ, ವಿಶ್ವನಾಥ ಹಿರೇಮಠ, ಪ್ರಶಾಂತಸ್ವಾಮಿ ಹಿರೇಮಠ, ರೇವಣಸಿದ್ದಯ್ಯ ಹಿರೇಮಠ, ಅಜ್ಜಪ್ಪ ಬೆನ್ನೂರ, ಪಿ.ಎನ್. ಹೇಮಗಿರಿಮಠ, ಹೇಮಂತ ಗಡ್ಡಿ, ಶಿವಪುತ್ರಪ್ಪ ಗಡ್ಡಿ, ಕೊಟ್ರೇಶ ಸಜ್ಜನಶೆಟ್ಟರ, ಶಂಕ್ರಪ್ಪ ಚಂದಾಪುರ, ಕುಮಾರಸ್ವಾಮಿ ಸುತ್ತೂರಮಠ ಸೇರಿದಂತೆ ನೂರಾರು ಜನರಿದ್ದರು.

ಪ್ರಕಾಶ ಸೊಪ್ಪಿನ ಸ್ವಾಗತಿಸಿದರು. ಪಿ.ಕೆ ನಿಂಗಪ್ಪ ಪ್ರಾರ್ಥಿಸಿದರು. ವೀರಯ್ಯ ಪ್ರಸಾಧಿಮಠ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲೆಲ್ಲೂ ಗಣೇಶೋತ್ಸವದ ಸಂಭ್ರಮ; ಡಿಜೆ ನಿಷೇಧಕ್ಕೆ ಅಸಮಾಧಾನ
ದೇಶದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅವಶ್ಯಕ: ಮಾಜಿ ಸಂಸದ ಸಂಗಣ್ಣ ಕರಡಿ