ಕನ್ನಡಪ್ರಭ ವಾರ್ತೆ ವಿಜಯಪುರ
ಬಾಗಲಕೋಟೆ ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಚಾರಕ್ಕೆ ಹೋದ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯತ್ನಾಳ ವಾಪಸ್ ಬಿಜೆಪಿಗೆ ಹೊಗಲು ನಾಟಕ ಮಾಡುತ್ತಿದ್ದಾರೆ. ದಾವಣಗೆರೆ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ನವರ ಟೀಂ ಅಲ್ಲಾ, ಶ್ರೀನಿವಾಸ ದಾಸಕರಿ ಸಿದ್ದೇಶ್ವರ ಟೀಂ ನವರು. ಬಿಜೆಪಿಗೆ ನನ್ನ ವಾಪಸ್ ತಗೋರಿ ಎಂದು ಕೈಮುಗಿದು ಕೇಳಿಕೊಳ್ಳಲಿ ಎಂದು ಟಾಂಗ್ ನೀಡಿದರು. ನಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಯತ್ನಾಳ ಮಾಡಲಿ ಎಂದು ಸಿಎಂ ಮನವಿ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳ ಈಗ ಪಕ್ಷೇತರ ಶಾಸಕ. ಬಿಜೆಪಿಯಲ್ಲಿ ಅಪಮಾನ ಮಾಡಿ ಯತ್ನಾಳರನ್ನ ಹೊರ ಹಾಕಿದ್ದಾರೆ. ಮಾನ ಮರ್ಯಾದೆ ಬಿಟ್ಟು ಸ್ವಾಭಿಮಾನ ಎಲ್ಲಿ ಹೋಯ್ತು ಯತ್ನಾಳಗೆ?. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ ಪರ ಕ್ಯಾಂಡಿಡಿಯೇಟ್ ಯಡಿಯೂರಪ್ಪಗೆ ಹೇಳದೇ ದಾಸಕರಿಯಪ್ಪಗೆ ಬಿಜೆಪಿ ಟಿಕೆಟ್ ನೀಡಿದ್ದಾರೆ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಯತ್ನಾಳ ಪರ ಪ್ರಚಾರ ಮಾಡಬಹುದಿತ್ತು. ಯತ್ನಾಳ ಸುಮ್ಮನೇ ನಾಟಕ ಮಾಡುತ್ತಿದ್ದಾರೆ. 2028ಕ್ಕೆ ಟೈಂ ಬರುತ್ತದೆ ಎಂದು ಮಾರ್ಮಿಕವಾಗಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿದರು.