ಮೋದಿಗೆ ಮೊಯ್ಲಿ ಸರ್ಟಿಫಿಕೇಟ್ ಯಾರು ಕೇಳಿದ್ರು: ಸಿ.ಟಿ.ರವಿ

KannadaprabhaNewsNetwork |  
Published : Jan 24, 2024, 02:05 AM IST
ಕೃಷ್ಣಮಠದಲ್ಲಿ ಸಿ.ಟಿ.ರವಿ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದರು | Kannada Prabha

ಸಾರಾಂಶ

''ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನ ಉಪವಾಸ ಮಾಡಿರೋದು ಡೌಟ್ ಎಂದಿರುವ ವೀರಪ್ಪ ಮೊಯ್ಲಿಗೆ ಸಿಟಿ ರವಿ ಟಾಂಗ್‌ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ''''ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನ ಉಪವಾಸ ಮಾಡಿರೋದು ಡೌಟ್'''' ಎಂದು ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮೋದಿ ಬಗ್ಗೆ ನಮಗೆ ವೀರಪ್ಪ ಮೊಯ್ಲಿಯ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ, ಅವರ ಸರ್ಟಿಫಿಕೇಟನ್ನು ಯಾರು ಕೇಳಿದ್ದಾರೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''''ನಾನು ದೇವಸ್ಥಾನಕ್ಕೆ ಹೋಗಲ್ಲ, ಸಂವಿಧಾನ ಮುಖ್ಯ'''' ಅಂತಾರೆ ಪ್ರಿಯಾಂಕ ಖರ್ಗೆ, ಸಂವಿಧಾನ ನಮಗೂ ಮುಖ್ಯ, ಅದರ ಮೊದಲ ಪುಟದಲ್ಲಿ ರಾಮ ಇದ್ದಾನೆ. ರಾಮ ಯಾರಪ್ಪನ ಸ್ವತ್ತು ಅಲ್ಲ ಎನ್ನುತ್ತಾರೆ ಡಿಕೆಶಿ, ಶ್ರೀರಾಮಚಂದ್ರ ಭಕ್ತರ ಸ್ವತ್ತು. ಆದರೆ ಕಾಂಗ್ರೆಸಿಗರು ಬಾಬರ್ ಸಂತಾನವನ್ನು ಪ್ರೀತಿಸಿದಷ್ಟು ಅವರ ಅಪ್ಪನನ್ನು ಪ್ರೀತಿಸುವುದಿಲ್ಲ ಎಂದು ಹರಿಹಾಯ್ದರು.* ದೇವಳಗಳ ನಿಯಂತ್ರಣ ಅಕ್ಷಮ್ಯದೇವಸ್ಥಾನದ ಆದಾಯದ ಬಗ್ಗೆ ಹಿರೇಮಗಳೂರು ಕಣ್ಣನ್‌ಗೆ ಸರ್ಕಾರ ನೋಟಿಸು ನೀಡಿದೆ. ದೇವಾಲಯದ ಹಣ ವಾಪಸ್ ಕೇಳುವುದು ಅಕ್ಷಮ್ಯ. ಇದು ಸರ್ಕಾರದ ಮಾನಸಿಕತೆ ತೋರಿಸುತ್ತದೆ. ಹಿಂದೆ ಕಾಂಗ್ರೆಸ್‌ನವರು ಭಕ್ತರು ಕೊಟ್ಟ ಹಣವನ್ನು ಟೆನೆಂಟ್ ಆ್ಯಕ್ಟ್ ತಂದು ದೇವಾಲಯವನ್ನೇ ಬಡ ಮಾಡಿಬಿಟ್ಟರು. ಈಗ ದೇವಸ್ಥಾನಕ್ಕೆ ತಸ್ತಿಕನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. ದೇವಾಲಯಗಳ ಮೇಲೆ ಸರ್ಕಾರದ ನಿಯಂತ್ರಣವೇ ತಪ್ಪು. ಈ ನಿಯಂತ್ರಣ ಮಸೀದಿ, ಚರ್ಚುಗಳ ಮೇಲೆ ಇಲ್ಲ ಎಂದ ಸಿ.ಟಿ.ರವಿ, ಕಣ್ಣನ್‌ ಅವರಿಗೆ ನೋಟಿಸ್ ಕೊಟ್ಟವರ ಮೇಲೆ ಕ್ರಮ ಆಗಬೇಕು, ಸರ್ಕಾರ ಕ್ಷಮೆ ಕೊರಬೇಕು ಎಂದು ಆಗ್ರಹಿಸಿದರು.ಸರ್ಕಾರದ ನಿಯಂತ್ರಣ ಕಡಿಮೆ ಮಾಡಲು ಧಾರ್ಮಿಕ ಪರಿಷತ್ತು ಮಾಡಿದ್ದೆವು. ದೇವಾಲಯಗಳನ್ನು ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ, ತಮಿಳುನಾಡಿನಂತಹ ನಾಸ್ತಿಕ ಸರ್ಕಾರಕ್ಕೂ ದೇವರ ದುಡ್ಡು ಬೇಕು, ದೇವರ ಮೇಲೆ ಭಕ್ತಿ ಇಲ್ಲ, ಹುಂಡಿ ಮೇಲೆ ಪ್ರೀತಿ, ಇದು ತಪ್ಪಬೇಕು ಎಂದರು.

* ತಮ್ಮ ಕ್ಷೇತ್ರಗಳನ್ನು ಬಿಟ್ಟುಕೊಡಿ

ರಾಮ ಹುಟ್ಟಿದ ಅಯೋಧ್ಯೆಯಷ್ಟೇ, ಕೃಷ್ಣನ ಮಥುರೆಯೂ ನಮಗೆ ಪವಿತ್ರ, ಜ್ಞಾನ ವ್ಯಾಪ್ತಿಯ ನಂದಿ ಕಾಶಿಯ ವಿಶ್ವನಾಥ ಪುನರುತ್ಥಾನಕ್ಕೆ ಕಾಯುತ್ತಿದೆ ಎಂದು ಸಿ.ಟಿ.ರವಿ ಹೇಳಿದರು.ಅತಿಕ್ರಮಿತ ಜಾಗದಲ್ಲಿ ನಮಾಜ್ ಮಾಡಿದರೆ ಅದು ಹರಾಮ್ ಎಂದು ಸ್ವತಃ ಮುಸಲ್ಮಾನರೇ ಹೇಳುತ್ತಾರೆ. ಆದ್ದರಿಂದ ನಮ್ಮ ಕ್ಷೇತ್ರಗಳನ್ನು ಬಿಟ್ಟು ಕೊಡಿ, ಸನಾತನಿಗಳ ವಿರುದ್ಧ ಮಾಡಿದ ಪಾಪ ನೀವು ಹೊತ್ತುಕೊಳ್ಳಬೇಡಿ, ಮಾಡಿದ ತಪ್ಪನ್ನು ಪ್ರಾಯಶ್ಚಿತ ಮಾಡಲು ಅವಕಾಶ ಇದೆ ಎಂದವರು ಆಗ್ರಹಿಸಿದರು.

ಇಡೀ ದೇಶದಲ್ಲಿ ರಾಮಮಂದಿರ ಮೂಲಕ ಪರಕೀಯರ ಆಕ್ರಮಣದಿಂದ ಕಳೆದುಕೊಂಡ ಸಾಂಸ್ಕೃತಿಕತೆಯ ಬೀಜಾಂಕುರ ಆಗಿದೆ. ಬಾಬರ್ ಸಂತಾನ ಓಲೈಸುವವರಿಗೂ ವೋಟ್ ಬ್ಯಾಂಕ್‌ಗಾಗಿ ರಾಮನ ಅನಿವಾರ್ಯತೆ ಉಂಟಾಗಿದೆ. ಇನ್ನು ರಾಮನನ್ನು ಬಿಟ್ಟರೆ ಈ ದೇಶದಲ್ಲಿ ವೋಟ್ ಇಲ್ಲ ಎಂದವರಿಗೆ ಗೊತ್ತಾಗಿದೆ. ರಾಮ ಕಾಲ್ಪನಿಕ ಎಂದವರೂ ರಾಮನಾಮ ಜಪ ಆರಂಭಿಸಿದ್ದಾರೆ ಎಂದವರು ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ