ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ಅ.27 ರಂದು ಬೆಳಗ್ಗೆ 8ರಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯ ಅ.27 ರಂದು ಬೆಳಗ್ಗೆ 8ರಿಂದ ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ತಿಳಿಸಿದರು.ಗುವಿವಿ ಗಣಿತ ವಿಭಾಗದ ಭಾಸ್ಕರ್ ಸಭಾಂಗಣಕ್ಕೆ ಭೇಟಿ ನೀಡಿ ಮತ ಎಣಿಕೆಯ ಅಂತಿಮ ಸಿದ್ಧತೆ ಕುರಿತು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆಗೆ ಒಟ್ಟಾರೆ 14 ಟೇಬಲ್ ಹಾಕಲಾಗಿದೆ. ಪ್ರತಿಯೊಂದು ಟೇಬಲ್ ಗೆ ಓರ್ವ ಜಿಲ್ಲಾಮಟ್ಟದ ಅಧಿಕಾರಿ, ಇಬ್ಬರು ಸಹಾಯಕ ಅಧಿಕಾರಿಗಳು ಮತ ಎಣಿಕೆ ಮಾಡಲಿದ್ದಾರೆ. ಓರ್ವ ಗ್ರೂಪ್ ''''''''ಡಿ'''''''' ಸಿಬ್ಬಂದಿ ಮತ ಪೆಟ್ಟಿಗೆ ತರಲು ನೆರವಾಗಲಿದ್ದಾರೆ. ಸ್ಪರ್ಧಾ ಕಣದಲ್ಲಿ 13 ಅಭ್ಯರ್ಥಿ ಇರುವುದರಿಂದ ಮತ ಎಣಿಕೆಗೆ ಪ್ರತಿ ಟೇಬಲ್ಗೆ 13 ಟ್ರೇಗಳನ್ನು ಮತ್ತು ತಿರಸ್ಕೃತ, ಸಂಶಯಾಸ್ಪದ ಮತಗಳಿಗೆ ಪ್ರತ್ಯೇಕ ಟ್ರೇ ಇಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅ. 23 ರಂದು ನಡೆದ ಮತದಾನದಲ್ಲಿ 34,784 ಮತದಾರರ ಪೈಕಿ 30,250 (ಶೇ.86.97) ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಗೆ ಏಳು ಜಿಲ್ಲೆಗಳು ಬರಲಿದ್ದು, ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ ಎಣಿಕೆಯಲ್ಲಿ ಭಾಗಿಯಾಗಿ ಪ್ರತಿ ಎರಡು ಟೇಬಲ್ ಗೆ ಎಣಿಕೆ ಉಸ್ತುವಾರಿ ಜಿಲ್ಲಾಧಿಕಾರಿ ನೋಡಿಕೊಳ್ಳಲಿದ್ದಾರೆ ಎಂದರು.*ಮೊಬೈಲ್ ನಿಷೇಧ: ಮತ ಎಣಿಕೆ ಕೇಂದ್ರಕ್ಕೆ ಅಭ್ಯರ್ಥಿ, ಚುನಾವಣಾ ಏಜೆಂಟ್, ಕೌಂಟಿಂಗ್ ಸಹಿತ ಯಾರು ಮೊಬೈಲ್, ಬೆಂಕಿ ಪೊಟ್ಟಣ, ಲೈಟರ್, ಫೌಂಟೇನ್ ಇಂಕ್ ಪೇನ್, ಸಿಗರೇಟ್, ಪಾನ್ ಬೀಡಾ, ತಂಬಾಕು, ನೀರಿನ ಬಾಟಲ್ ತರುವುದನ್ನು ನಿಷೇಧಿಸಲಾಗಿದೆ.ಮತ ಎಣಿಕೆ ಪ್ರಕ್ರಿಯೆ ಹೇಗೆ?: ಪ್ರಾಶಸ್ತ್ಯ ಮತ ಎಣಿಕೆ ಇರುವುದರಿಂದ ಮೊದಲು 144 ಮತಪೆಟ್ಟಿಗೆಗಳನ್ನು ಟೇಬಲ್ ವಾರು ನೀಡಿ 25 ಮತಗಳ ಬಂಡ್ಲಿಂಗ್ ಮಾಡಿ ಅದನ್ನು ಬ್ಯಾರೆಲ್ ನಲ್ಲಿ ಹಾಕಿ ರ್ಯಾಂಡಮೈಜೇಷನ್ ಮಾಲಾಗುತ್ತದೆ. ತದನಂತರ 25 ಮತಗಳ ಬಂಡ್ಲಿಂಗ್ ಗಳನ್ನು ಪ್ರತಿ ಟೇಬಲ್ ಗೆ ಪ್ರತಿ ಸುತ್ತಿಗೆ 40ರಂತೆ ನೀಡಲಾಗುತ್ತದೆ. 30,250 ಮತಗಳು ಚಲಾವಣೆಯಾಗಿರುವುದರಿಂದ 14 ಟೇಬಲ್ ಮೂಲಕ ಮೂರು ಸುತ್ತಿನಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ನಡೆದ ನಂತರ ತಿರಸ್ಕೃತ ಮತ ತೆಗೆದು ಸಿಂಧು ಮತಗಳಲ್ಲಿ ವಿನ್ನಿಂಗ್ ಕೋಟಾ ಘೋಷಿಸಲಾಗುತ್ತದೆ. ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಯಾವುದೇ ಅಭ್ಯರ್ಥಿ ವಿನ್ನಿಂಗ್ ಕೋಟಾ ತಲುಪಿದಲ್ಲಿ ಅಂತಹ ಅಭ್ಯರ್ಥಿಯನ್ನೇ ವಿಜಯಶಾಲಿ ಎಂದು ಘೋಷಿಸಲಾಗುತ್ತದೆ. ವಿನ್ನಿಂಗ್ ಕೋಟಾ ತಲುಪದಿದ್ದಲ್ಲಿ ಎರಡನೆಯ ಪ್ರಾಶಸ್ತ್ಯ ಮತ ಎಣಿಕೆ ಆರಂಭಿಸಲಾಗುತ್ತದೆ. ಅತ್ಯಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳನ್ನು ಹಂತ ಹಂತವಾಗಿ ಎಲಿಮಿನೇಟ್ ಮಾಡಿ ಎರಡನೇ ಪ್ರಾಶಸ್ತ್ಯ ಮತ ಪಡೆದ ಮೇಲಿನ ಅಭ್ಯರ್ಥಿಗಳಿಗೆ ಸೇರಿಸಲಾಗುತ್ತದೆ. ಇದು ವಿನ್ನಿಂಗ್ ಕೋಟಾ ತಲುಪುವವರೆಗೆ ನಡೆದು ಅಂತಿಮವಾಗಿ ಯಾರು ಮೊದಲು ಕೋಟಾ ತಲುಪುತ್ತಾರೋ ಅವರನ್ನು ವಿಜಯಶಾಲಿ ಎಂದು ಘೋಷಿಸಲಾಗುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.