ಪುರಸಭೆ ಅನುದಾನದಲ್ಲಿ ಶಾಸಕ ಹಿಂಬಾಲಕರ ದರ್ಬಾರೇಕೆ?

KannadaprabhaNewsNetwork |  
Published : Apr 14, 2026, 01:45 AM IST
ಮಾಗಡಿ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ  ವಿಎಸ್ಎಸ್ಎನ್ ಅಧ್ಯಕ್ಷ ಹೊಸಹಳ್ಳಿ ರಂಗಣ್ಣಿ  ಮಾತನಾಡಿದರು. | Kannada Prabha

ಸಾರಾಂಶ

ಮಾಗಡಿ: ಪುರಸಭೆ ಜನಪ್ರತಿನಿಧಿಗಳ ಆಡಳಿತ ಮುಗಿದು ಅಧಿಕಾರಿಗಳ ಆಡಳಿತ ಶುರುವಾಗಿ ಪುರಸಭಾ ವ್ಯಾಪ್ತಿಯಲ್ಲಿ 17 ಬೋರ್ ವೆಲ್ ಕೊರಿಸಲಾಗುತ್ತಿದ್ದು, ಶಾಸಕ ಬಾಲಕೃಷ್ಣರ ಹಿಂಬಾಲಕರೇ ಬೋರ್‌ವೆಲ್ ಕೊರಿಸುವ ಜಾಗಕ್ಕೆ ಹೋಗಿ ಫೋಟೋಗಳನ್ನು ಜಾಲತಾಣದಲ್ಲಿ ಹಾಕಿಕೊಂಡು ದಾರ್ಬರ್ ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಎಂ.ಎನ್.ಮಂಜುನಾಥ್ ಆರೋಪಿಸಿದರು

ಮಾಗಡಿ: ಪುರಸಭೆ ಜನಪ್ರತಿನಿಧಿಗಳ ಆಡಳಿತ ಮುಗಿದು ಅಧಿಕಾರಿಗಳ ಆಡಳಿತ ಶುರುವಾಗಿ ಪುರಸಭಾ ವ್ಯಾಪ್ತಿಯಲ್ಲಿ 17 ಬೋರ್ ವೆಲ್ ಕೊರಿಸಲಾಗುತ್ತಿದ್ದು, ಶಾಸಕ ಬಾಲಕೃಷ್ಣರ ಹಿಂಬಾಲಕರೇ ಬೋರ್‌ವೆಲ್ ಕೊರಿಸುವ ಜಾಗಕ್ಕೆ ಹೋಗಿ ಫೋಟೋಗಳನ್ನು ಜಾಲತಾಣದಲ್ಲಿ ಹಾಕಿಕೊಂಡು ದಾರ್ಬರ್ ಮಾಡುತ್ತಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಎಂ.ಎನ್.ಮಂಜುನಾಥ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಪುರಸಭೆಯದ್ದು, ನಾವು ಮಾಜಿ ಸದಸ್ಯರು, ನಮ್ಮ ವಾರ್ಡಿನಲ್ಲೂ ಸಮಸ್ಯೆ ಇದೆ. ಎಲ್ಲಿ ಬೋರ್‌ವೆಲ್ ಕೊರೆಸಬೇಕೆಂದು ನಮ್ಮ ಗಮನಕ್ಕೂ ತರಬೇಕು. ಶಾಸಕರ ಅನುದಾನವಾದರೆ ಅವರ ಹಿಂಬಾಲಕರು ಇಷ್ಟ ಬಂದಂತೆ ಮಾಡಲಿ ಪುರಸಭೆಯ ಅನುದಾನದಲ್ಲಿ ಪುರಸಭೆ ಮಾಜಿ ಸದಸ್ಯರಿಗೂ ಬೋರ್‌ವೆಲ್‌ ಕೊರೆಸುವಾಗ ತಿಳಿಸಬೇಕಾದ ಕರ್ತವ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಪುರಸಭೆಯ ಬೆಲೆಬಾಳುವ ಜಾಗವನ್ನು ಕಾಂಗ್ರೆಸ್ ಕಚೇರಿಗೆ ನೀಡುವ ವಿರುದ್ಧ ಜೆಡಿಎಸ್ ಸದಸ್ಯರು ತೀವ್ರ ವಿರೋಧ ಮಾಡಿದ್ದೆವು. ಕಾಂಗ್ರೆಸ್ ಮುಖಂಡರು ಪುರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಭವನಕ್ಕೆ ಜಾಗ ಮಂಜುರಾತಿ ವಿಷಯದಲ್ಲಿ ಜೆಡಿಎಸ್‌ನವರು ವಿರೋಧ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಾವು ತೀವ್ರವಾಗಿ ವಿರೋಧಿಸಿದ್ದರೂ ನಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು ನಿಮಗೆ ಜಾಗ ನೀಡಿದರೆ ಮುಂದೆ ಬಿಜೆಪಿಯವರು ಮತ್ತು ಜೆಡಿಎಸ್ ಪಕ್ಷದವರು ಜಾಗ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ಬೆಲೆ ಬಾಳುವ ಜಾಗವನ್ನು ಒಂದು ಪಕ್ಷಕ್ಕೆ ಕೊಟ್ಟರೆ ಹೇಗೆ? ಅಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಪುರಸಭೆಗೆ ಆದಾಯ ತರಬಹುದಿತ್ತು. ಅದನ್ನು ಬಿಟ್ಟು ಶಾಸಕರು ತಮ್ಮದೇ ಅಧಿಕಾರ ಎಂದು ಮಂಜೂರಾತಿ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಚೇರಿ 60*40 ಜಾಗದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮಾಡಿದರೆ ಒಪ್ಪುತ್ತಿತ್ತು. ಅದನ್ನು ಬಿಟ್ಟು ಯಾವುದೋ ಮೂಲೆಯಲ್ಲಿ ಕೆಂಪೇಗೌಡರ ಪ್ರತಿಮೆ ನಿಲ್ಲಿಸುತ್ತಿದ್ದು ಇದನ್ನು ಪ್ರಶ್ನಿಸಿದರೆ ಅಭಿವೃದ್ಧಿಗೆ ವಿರೋಧ ಎಂದು ಮುಖಂಡರು ಆರೋಪಿಸುತ್ತಾರೆ. ಆಡಳಿತ ಪಕ್ಷಕ್ಕೆ ವಿರೋಧ ಪಕ್ಷದವರು ಎಚ್ಚರಿಕೆ ಕೊಡುತ್ತಾರೆ ಅದನ್ನು ಗಮನಿಸಿಕೊಳ್ಳಬೇಕು. ಕೆ-ಶೀಫ್‌ನಿಂದ ಕಳೆದ ಏಳು ವರ್ಷಗಳಿಂದಲೂ ಜೆಡಿಎಸ್ ಕಚೇರಿ ಮುಂಭಾಗದ ರಸ್ತೆ ಚರಂಡಿ ಕಾಮಗಾರಿ ಮಾಡದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ, ಪೈಪ್‌ಗಳು ಒಡೆದಿದ್ದು ಇದನ್ನು ಸರಿಪಡಿಸಿಲ್ಲ. ಇದನ್ನಶ್ಪ್ರಶ್ನಿಸಿದರೆ ಅಭಿವೃದ್ಧಿಗೆ ವಿರೋಧ ಎನ್ನುತ್ತಾರೆ ಇದು ಸರಿಯಾದ ಬೆಳವಣಿಗೆಯಲ್ಲ ನಾವು ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ಮಾಡುತ್ತಿಲ್ಲ. ಅಲ್ಲಿರುವ ಮರ ಕಡೆಯಬಾರದೆಂದು ಹೇಳುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಬೆಳಗುಂಬ ವಿಎಸ್ಎಸ್ಎನ್ ಅಧ್ಯಕ್ಷ ಹೊಸಹಳ್ಳಿ ರಂಗಣ್ಣಿ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ ನನ್ನ ವಿರುದ್ಧ ಆರೋಪಿಸಿ ನಾನು ಬಕಿಟ್ ಹಿಡಿದು ರಾಜಕಾರಣ ಮಾಡುತ್ತಿದ್ದೇನೆಂದಿದ್ದಾರೆ. ಪೂಜಾರಿ ಪಾಳ್ಯ ಕೃಷ್ಣಮೂರ್ತಿ ಕಾಂಗ್ರೆಸ್‌ನಿಂದ ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಬಂದಾಗ ನಾನೇ ಅವರಿಗೆ ಸಹಾಯ ಮಾಡಿದ್ದು ಅವರ ಚುನಾವಣೆಯಲ್ಲಿ ಮನೆಮನೆಗೆ ತೆರಳಿ ಅವರ ಪರ ಮತಯಾಚಿಸಿದ್ದೇನೆ. ಅವರಿಗೆ ಅದು ನೆನಪಿದ್ದರೆ ಸಾಕು ಎಂದರು.

ಈ ವೇಳೆ ಜೆಡಿಎಸ್ ಮುಖಂಡರಾದ ಗುತ್ತಿಗೆದಾರ ಕರಡಿ ನಾಗರಾಜು, ಸಾಗರ್, ಕೆ.ವಿ. ಬಾಲು, ವಿಜಯಕುಮಾರ್ ಶಿವಕುಮಾರ್, ರಮೇಶ್, ಉಮೇಶ್, ನಯಾಜ್, ಬಾಲಕೃಷ್ಣ, ಕುಮಾರ್, ಶಬಾಸ್ ಖಾನ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು