ಹರಿಹರ ಶಾಸಕರು ಅನಧಿಕೃತ ಸಭೆ ನಡೆಸಿ ಗೊಂದಲ ಸೃಷ್ಟಿಸಿದ್ದೇಕೆ?: ಜೆ.ಕೆ.ಸುರೇಶ್

KannadaprabhaNewsNetwork | Published : Feb 7, 2024 1:49 AM

ಸಾರಾಂಶ

ರೇಣುಕಾಚಾರ್ಯ ಕಾಂಗ್ರೆಸ್‌ ಸೇರುತ್ತೇನೆ ಎಲ್ಲಿಯೂ ಹೇಳಿಲ್ಲ ಆದರೂ ಎ.ಬಿ.ಹನುಮಂತಪ್ಪ, ಶಾಂತರಾಜ್ ಪಾಟೀಲ್ ಮುಂತಾದ ಮುಖಂಡರು ರೇಣುಕಾಚಾರ್ಯ ಕಾಂಗ್ರೆಸ್ ಸೇರಲಿದ್ದಾರೆ ಎಂದಿದ್ದರು ಆದರೆ ರೇಣುಕಾಚಾರ್ಯ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ 75 ಸಾವಿರಕ್ಕೂ ಹೆಚ್ಚು ಮತಗಳಿಸಿದ್ದು ಅವರ ಜನಪ್ರಿಯತೆಗೆ ಸಾಕ್ಷಿ . ಸಂಸದ ಜಿ.ಎಂ.ಸಿದ್ದೇಶ್ವರ ಕೆಲ ಕಾರ್ಯಕರ್ತರ ಮೂಲಕ ರೇಣುಕಾಚಾರ್ಯ ವಿರುದ್ಧ ರಾಜಕಾರಣ ಮಾಡುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಬಿಜೆಪಿಯಲ್ಲಿದ್ದು ಪಕ್ಷದ ಹೆಸರಿನಲ್ಲಿ ಮಾಜಿ ಸಚಿವ ಹಾಗೂ ಪ್ರಮುಖ ಮುಖಂಡರ ಕೈಬಿಟ್ಟು ಅನಧಿಕೃತವಾಗಿ ಸಭೆ ನಡೆಸಿ ಗೊಂದಲದ ಹೇಳಿಕೆಗಳ ನೀಡುವುದು ಸರಿಯಲ್ಲ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅನಗತ್ಯ ಸಭೆಯೊಂದಿಗೆ ಹೇಳಿಕೆಗಳ ನೀಡಿ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.

ಫೆ.4ರಂದು ಬಿಜೆಪಿ ಮಂಡಲದ ಹೆಸರಿನಲ್ಲಿ ಕೆಲವರು ನಡೆಸಿದ ಸಭೆಯಲ್ಲಿ ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಚುನಾವಣೆ ಸಹ ಸಂಚಾಲಕ ಹನಗವಾಡಿ ವೀರೇಶ್ ಮತ್ತು ಹರಿಹರ ಶಾಸಕ ಬಿ.ಪಿ.ಹರೀಶ್ ಹಾಗೂ ಶಾಂತರಾಜ್ ಪಾಟೀಲ್‌ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸೌಜನ್ಯ ರಹಿತವಾಗಿದೆ ಎಂದು ಹೇಳಿ ಮಂಡಲ ಸಭೆ ಕರೆಯಲು ಇವರಿಗೇನು ಅಧಿಕಾರವಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಕುಬೇಂದ್ರಪ್ಪ ಮಾತನಾಡಿ, ರೇಣುಕಾಚಾರ್ಯ ಕಾಂಗ್ರೆಸ್‌ ಸೇರುತ್ತೇನೆ ಎಲ್ಲಿಯೂ ಹೇಳಿಲ್ಲ ಆದರೂ ಎ.ಬಿ.ಹನುಮಂತಪ್ಪ, ಶಾಂತರಾಜ್ ಪಾಟೀಲ್ ಮುಂತಾದ ಮುಖಂಡರು ರೇಣುಕಾಚಾರ್ಯ ಕಾಂಗ್ರೆಸ್ ಸೇರಲಿದ್ದಾರೆ ಎಂದಿದ್ದರು ಆದರೆ ರೇಣುಕಾಚಾರ್ಯ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಕಳೆದ ವಿಧಾನಸಭಾ ಚುನಾವಣೆಯಲ್ಲಿ 75 ಸಾವಿರಕ್ಕೂ ಹೆಚ್ಚು ಮತಗಳಿಸಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದರು. ಸಂಸದ ಜಿ.ಎಂ.ಸಿದ್ದೇಶ್ವರ ಕೆಲ ಕಾರ್ಯಕರ್ತರ ಮೂಲಕ ರೇಣುಕಾಚಾರ್ಯ ವಿರುದ್ಧ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಫೆ. 8ರಂದು ದಾವಣಗೆರೆಯಲ್ಲಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ರಾಜಶೇಖರ ನಾಗಪ್ಪ ಅಧಿಕಾರ ಪದಗ್ರಹಣ ಸಮಾರಂಭ ನಡೆಯಲಿದ್ದು ಅವಳಿ ತಾಲೂಕಿನ ಬಿಜೆಪಿಯ ಮುಖಂಡರು ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಆರಕೆರೆ ನಾಗರಾಜ್, ಕೆ.ವಿ.ಶ್ರೀಧರ್, ಹಿರೇಮಠ ರಾಜು, ಮಾರುತಿ ನಾಯ್ಕ, ಪಾಲಾಕ್ಷಪ್ಪ, ಮಾದೇನಹಳ್ಳಿ ಕೆ.ಇ.ವಾಗರಾಜ್, ರಂಗಪ್ಪ, ಕುಂದೂರು ಶಾಂತರಾಜ್, ಸೇರಿ ಅನೇಕ ಮುಖಂಡರಿದ್ದರು.

Share this article