ದೆಹಲಿಗೆ ಹೋಗಿದ್ದೇಕೆ ಎಂದು ಶಾಸಕರೇ ಹೇಳಬೇಕು

KannadaprabhaNewsNetwork |  
Published : Nov 22, 2025, 03:15 AM IST

ಸಾರಾಂಶ

ಶಾಸಕರಿಗೆ ದೆಹಲಿ ಹೋಗುವ ಅಧಿಕಾರ ಇದೆ. ಯಾವ ಕಾರಣಕ್ಕೆ ಹೋಗಿದ್ದಾರೆ ಅವರೇ ಹೇಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ‌.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಾಸಕರಿಗೆ ದೆಹಲಿ ಹೋಗುವ ಅಧಿಕಾರ ಇದೆ. ಯಾವ ಕಾರಣಕ್ಕೆ ಹೋಗಿದ್ದಾರೆ ಅವರೇ ಹೇಳಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ‌.ಪಾಟೀಲ ಹೇಳಿದರು.

ಡಿ.ಕೆ.ಶಿವಕುಮಾರ ಬೆಂಬಲಿಗ ಶಾಸಕರು ದೆಹಲಿ ಪರೇಡ್ ವಿಚಾರದ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಸಚಿವರಾಗಲು ದೆಹಲಿಗೆ ಹೋಗಿದ್ದಾಗಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ, ಹೈಕಮಾಂಡ್ ಅಂತಿಮ. ಹೈಕಮಾಂಡ್ ಕಾಲಕಾಲಕ್ಕೆ ಮಾಡುವ ತೀರ್ಮಾನವನ್ನು ಸಿಎಂ, ಡಿಸಿಎಂ, ಸಚಿವರು ಪಾಲಿಸಬೇಕು. ನಮ್ಮಲ್ಲಿ ಯಾವುದೇ, ಏನೇ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಸುಪ್ರೀಂ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ತಲೆಬಾಗಿ ಒಪ್ಪುವ ರೂಢಿ ನಮ್ಮ ಪಕ್ಷದಲ್ಲಿದೆ ಎಂದರು.ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದಿರುವ ಸಿಎಂ ಹೇಳಿಕೆ ವಿಚಾರದ ಕುರಿತು ಮಾತನಾಡಿ, ಸಿಎಂ ಅವರೇ ಹೇಳಿದ ಮೇಲೆ ಮುಗಿತಲ್ಲ. ಸಿಎಂ ಹೇಳಿದ್ದಾರಲ್ಲ. ಸಿಎಂ ಆಗಿ ನಾನೇ ಮುಂದುವರೆಯುತ್ತೇನೆ, ಬಜೆಟ್ ಮಂಡಿಸುವೆ ಎಂದಿದ್ದಾರೆ. ಡಿ.ಕೆ.ಶಿವಕುಮಾರ ಪಕ್ಷದ ಅಧ್ಯಕ್ಷರು. ಮೇಲಿಂದ ಮೇಲೆ ದೆಹಲಿ ಹೋಗಬೇಕಾಗುತ್ತೆ, ಬರಬೇಕಾಗುತ್ತೆ. ವ್ಯಾಪಾರಕ್ಕಾಗಿ ಹೋಗಬೇಕಾಗುತ್ತೆ.‌‌ ಅವರ ಮೇಲೆ ಅನೇಕ ಕೇಸ್ ಹಾಕಿದ್ದಾರೆ ಅದಕ್ಕೂ ವಕೀಲರ ಬಳಿ ಹೋಗಬೇಕಾಗುತ್ತೆ. ಪಕ್ಷದ ಅಧ್ಯಕ್ಷರಾಗಿ ದೆಹಲಿ ಹೋಗೋದು ಬೇಡ ಅಂತೀರಾ ಎಂದು ಪ್ರಶ್ನಿಸಿದರು.ಸಿಎಂ ಕೊಟ್ಟ ಮಾತು ಉಳಿಸಿಕೊಳ್ತಾರೆ ಎಂದು ಡಿ.ಕೆ.ಸುರೇಶ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುರೇಶ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಏನು ಮಾತು ಕೊಟ್ಟಿದ್ದಾರೋ ಬಿಟ್ಟಿದ್ದಾರೋ ಸುರೇಶ ಅವರಿಗೆ ಗೊತ್ತು. ಅದು ಏನೇ ಇದ್ದರೂ ಹೈಕಮಾಂಡ್ ನಮ್ಮಲ್ಲಿ ಸುಪ್ರೀಂ. ಹೈಕಮಾಂಡ್ ಸುಪ್ರೀಂ ಫಾರ್ ಎವರಿ ಒನ್‌. ಈ ವಿಚಾರದಲ್ಲಿ ನಾವು ಏನೆ ಮಾತನಾಡಿದರೂ ಪ್ರಯೋಜನ ಇಲ್ಲ. ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಎಂದರು.ಸಚಿವ ಶಿವಾನಂದ ಪಾಟೀಲ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಗೆ ಹೋಗಿದ್ದೇನೆ ಎಂದು ಹೇಳಿದ್ದಾರೆ. ಪತ್ರ ಕೊಡಲು ಹೋಗಿದ್ದಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದು ಏನೂ ಇಲ್ಲ. ಏನೇ ವಿಚಾರ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಎಂ.ಬಿ.ಪಾಟೀಲ ಹೇಳಿದರು.

PREV

Recommended Stories

ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಸಕಲ ವ್ಯವಸ್ಥೆ
ಸಿಎಸ್‌ಆರ್ ₹200 ಕೋಟಿ ಅನುದಾನಡಿ 211 ಕೊಠಡಿ ನಿರ್ಮಾಣ