ಸಾವಿರಾರು ಮಂದಿ ಸೇರುವ ಜಾಗದಲ್ಲಿ ಭದ್ರತೆ ಏಕಿರಲಿಲ್ಲ: ಲಕ್ಷ್ಮಣ ಪ್ರಶ್ನೆ

KannadaprabhaNewsNetwork |  
Published : Apr 25, 2025, 11:45 PM IST
7 | Kannada Prabha

ಸಾರಾಂಶ

ಪ್ರಪಂಚದ ಮುಂದೆ ಗುಪ್ತಚರ ಮತ್ತು ಭದ್ರತೆ ವಿಚಾರದಲ್ಲಿ ಭಾರತ ತಲೆತಗ್ಗಿಸುವಂತಾಗಿದೆ. ಏಕಕಾಲಕ್ಕೆ 2000 ಜನ ಸೇರುವ ಜಾಗ. ಆದರೂ ವೈಫಲ್ಯದಿಂದಾಗಿ ಈ ದಾಳಿ ನಡೆದಿದೆ. ಕೇಂದ್ರದ ಬಿಜೆಪಿ ಸರ್ಕಾರವು ಭಯೋತ್ಪಾದನೆಯ ಬೇರು ಕಿತ್ತು ಹಾಕುವ ಯಾವುದೇ ಭರವಸೆ ನೀಡಿಲ್ಲ. ದೇಶದ ಹಿತದೃಷ್ಟಿಯಿಂದ ಜೊತೆಗಿರುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಾವಿರಾರು ಮಂದಿ ಸೇರುವ ಜಾಗದಲ್ಲಿ ಏಕೆ ಕೇಂದ್ರ ಸರ್ಕಾರ ಪೊಲೀಸ್‌ ಭದ್ರತೆ ಹೆಚ್ಚಿಸಿರಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಪಂಚದ ಮುಂದೆ ಗುಪ್ತಚರ ಮತ್ತು ಭದ್ರತೆ ವಿಚಾರದಲ್ಲಿ ಭಾರತ ತಲೆತಗ್ಗಿಸುವಂತಾಗಿದೆ. ಏಕಕಾಲಕ್ಕೆ 2000 ಜನ ಸೇರುವ ಜಾಗ. ಆದರೂ ವೈಫಲ್ಯದಿಂದಾಗಿ ಈ ದಾಳಿ ನಡೆದಿದೆ. ಕೇಂದ್ರದ ಬಿಜೆಪಿ ಸರ್ಕಾರವು ಭಯೋತ್ಪಾದನೆಯ ಬೇರು ಕಿತ್ತು ಹಾಕುವ ಯಾವುದೇ ಭರವಸೆ ನೀಡಿಲ್ಲ. ದೇಶದ ಹಿತದೃಷ್ಟಿಯಿಂದ ಜೊತೆಗಿರುತ್ತೇವೆ ಎಂದು ಖರ್ಗೆ ಹೇಳಿದ್ದಾರೆ ಎಂದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 350 ಸೆಕ್ಷನ್ ತೆಗೆದ ನಂತರ ಫೊಲೀಸ್ ವ್ಯವಸ್ಥೆ ಸೇನೆ ಕೇಂದ್ರ ಸರ್ಕಾರದ ಹಿಡಿತದಲ್ಲಿದೆ. ಆದರೂ ಘಟನಾ ಸ್ಥಳದಲ್ಲಿ ಯಾಕೆ ಪೊಲೀಸರನ್ನು ನಿಯೋಜಿಸಿರಲಿಲ್ಲ. ಇದು ಯಾಕೆ ಎಂಬ ಸ್ಪಷ್ಟೀಕರಣ ನೀಡಬೇಕು. 3.67 ಲಕ್ಷ ಮಿಲಿಟರಿ ಜಮ್ಮ ಮತ್ತು ಕಾಶ್ಮೀರದಲ್ಲಿ ಸೇನೆಯ ಯೋಧರಿದ್ದಾರೆ. ಅವತ್ತು ಮಾತ್ರ ನಿಯೋಜಿಸಿಲ್ಲವೋ ಯಾವಗಲೂ ಇಲ್ಲವೂ ಸ್ಪಷ್ಟಪಡಿಸಿ ಎಂದರು.

ಜಮ್ಮು ಮತ್ತು ಕಾಶ್ಮೀರ ಸಹಜ ಸ್ಥಿತಿಗೆ ಬಂದಿದೆ ಎಂಬ ಸುಳ್ಳು ಹೇಳುವ ವಿಚಾರ ನಡೆದಿದೆ. 3983 ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಆಗಿದೆ‌. ಈ ಪೈಕಿ ಬಿಜೆಪಿ ಕಾಲದಲ್ಲಿ ಹೆಚ್ಚಿನ ದಾಳಿಗಳಾಗಿವೆ. ಇದಕ್ಕೆ ಯಾವಾಗ ಉತ್ತರ ಕೊಡುತ್ತೀರಾ? ಮೋದಿ ಬಿಹಾರದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಗುಡುಗಿದ್ದಾರೆ. ಇದನ್ನು ಚುನಾವಣೆಗೋಷ್ಕರ ಯಾಕೆ ಉಪಯೋಗಿಸುತ್ತಿದ್ದಾರೆ, ನಾಚಿಕೆ ಅಗೋದಿಲ್ವ ಎಂದು ಪ್ರಶ್ನಿಸಿದರು.

ಮುಸ್ಲಿಮರೇ ಎಂದು ಕೇಳಿ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ತಿಳಿಸಿದ್ದಾರೆ. ಮುಸಲ್ಮಾನ ಸತ್ತಿರುವುದನ್ನು ತಿಳಿಸಿಲ್ಲ. ನಿಜ ಸಂಗತಿ ಹೇಳುವುದಕ್ಕೂ ನಿರ್ಬಂಧ ಇರುವುದರಿಂದ ಕಾಂಗ್ರೆಸ್ ಸುಮ್ಮನೆ ಕೂತಿದೆ. 5- 6 ರಾಜ್ಯದಲ್ಲಿ ಚುನಾವಣೆ ಬರುತ್ತಿದೆ. ಅದಕ್ಕಾಗಿ ನಡೆಸುತ್ತಿರುವ ಹೇಯ ಕೃತ್ಯ ಇದು. ಸಂತೋಷ್ ಲಾಡ್ ಸಿದ್ದರಾಮಯ್ಯ ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ ಈ ರೀತಿಯ ವ್ಯವಸ್ಥೆ ಇದೆಯಾ ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಹೆಸರಿನಲ್ಲಿ ರಾಜಕೀಯ ನಿಲ್ಲಬೇಕು. ಸಿಂಧು ನದಿಯ ನೀರನ್ನು ನೀರು ಎಷ್ಟು ದಿನ ಇಟ್ಟುಕೊಳ್ಳಲು ಸಾಧ್ಯ. ತುಂಬಿದ ಮೇಲೆ ಬಿಡಲೇ ಬೇಕಾಗುತ್ತದೆ. ಜನರನ್ನು ಉದ್ವೇಘಕ್ಕೆ ಒಳಗಾಗಿಸುವುದು ಬೇಡ. ತಪ್ಪಿತಸ್ಥರನ್ನು ಹುಡುಕಿ ಹೊಡೆದು ಹಾಕಿ. ಭಾಷಣದ ಮೂಲಕ ಜನರ ದಿಕ್ಕು ತಪ್ಪಿಸಬೇಡಿ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್. ಮೂರ್ತಿ, ಕಾರ್ಯದರ್ಶಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ರಾಮಣ್ಣ, ಮಹೇಶ್, ಗಿರೀಶ್, ಮೋಹನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ