ಕಾಡುಪ್ರಾಣಿ ಬೇಟೆ ಆರೋಪ: ಆರೋಪಿಗೆ ನ್ಯಾಯಾಂಗ ಬಂಧನ

KannadaprabhaNewsNetwork |  
Published : Aug 08, 2024, 01:30 AM ISTUpdated : Aug 08, 2024, 01:31 AM IST
ಹೊನ್ನಾಳಿ ವಲಯ ಅರಣ್ಯಾಧಿಕಾರಿಗಳು ತಾಲೂಕಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಮಹೋನ್‌ ಎಂಬುವನ್ನು ವನ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ. | Kannada Prabha

ಸಾರಾಂಶ

ನ್ಯಾಮತಿ ತಾಲೂಕಿನ ಸಂರಕ್ಷಿತ ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಒಬ್ಬನನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ನ್ಯಾಮತಿ: ತಾಲೂಕಿನ ಸಂರಕ್ಷಿತ ಅರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಆರೋಪದ ಮೇಲೆ ಅರಣ್ಯಾಧಿಕಾರಿಗಳು ಒಬ್ಬನನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಮೋಹನ್‌ ಆರೋಪಿ. ತಲೆತಪ್ಪಿಸಿಕೊಂಡ ಶಿವಕುಮಾರ, ದಿನೇಶ, ವಡೆವೇಲು ಎಂಬುವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಗಳೆಲ್ಲ ತಾಲೂಕಿನ ಚಿನ್ನಿಕಟ್ಟೆ ಗ್ರಾಮದವರಾಗಿದ್ದಾರೆ. ಬಂಧಿತ ಮೋಹನ್‌ನಿಂದ ಚುಕ್ಕಿ ಜಿಂಕೆ ಸುಲಿದ ಚರ್ಮ, ನಾಡ ಬಂದೂಕು, ಪಲ್ಸರ್‌ ಬೈಕ್‌ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಡಿಸಿಎಫ್‌ ಜಿ.ಆರ್‌. ಶಶಿಧರ್‌, ಎಸಿಎಫ್‌ ಭಾಗ್ಯಲಕ್ಷ್ಮೀ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒಗಳಾದ ಬರ್ಕತ್‌ ಅಲಿ, ಎಂ.ಬಿ. ಶಿವಯೋಗಿ, ಜಿ.ಜಿ.ಹಸೀನ್‌ ಬಾಷಾ, ಗಸ್ತು ಅರಣ್ಯ ಪಾಲಕರಾದ ನಾಗಲಿಂಗಪ್ಪ, ಅಂಜಲಿ, ಪ್ರಭಾಕರ, ಆಶಾ, ಸಿಬ್ಬಂದಿ ಎಂ.ಪಿ.ಬಸವರಾಜಪ್ಪ, ಪ್ರವೀಣ್‌, ಸುನೀಲ್‌, ಪ್ರದೀಪ, ರಮೇಶ, ಮೌನೇಶ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?