ವನ್ಯವೃಗ ದಾಳಿ: ರೈತ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನಿಗದಿಗೆ ಆಗ್ರಹ

KannadaprabhaNewsNetwork |  
Published : Feb 06, 2026, 01:15 AM IST
ಷಷಷ | Kannada Prabha

ಸಾರಾಂಶ

ಚಿಕ್ಕಮಗಳೂರುವನ್ಯ ಮೃಗಗಳಿಂದ ಮೃತಪಟ್ಟ ರೈತ ಕುಟುಂಬಕ್ಕೆ ಸರ್ಕಾರ ₹50 ಲಕ್ಷ ಪರಿಹಾರ ನಿಗದಿ ಪಡಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

- ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಜಿಲ್ಲಾ ರೈತ ಸಂಘದಿಂದ ರೈತ ಪ್ರತಿಭಟನಾ ಜಿಲ್ಲಾ ಸಮಾವೇಶ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವನ್ಯ ಮೃಗಗಳಿಂದ ಮೃತಪಟ್ಟ ರೈತ ಕುಟುಂಬಕ್ಕೆ ಸರ್ಕಾರ ₹50 ಲಕ್ಷ ಪರಿಹಾರ ನಿಗದಿ ಪಡಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಜಿಲ್ಲಾ ರೈತ ಸಂಘದಿಂದ ಏರ್ಪಡಿಸಿದ್ಧ ರೈತ ಪ್ರತಿಭಟನಾ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿ 1997ರಲ್ಲಿ ಪ್ರೊ.ನಂಜುಂಡಸ್ವಾಮಿ ಹೋರಾಟದ ಫಲವಾಗಿ ಆರಂಭವಾದ ಪರಿಹಾರಧನ ಹೆಚ್ಚಾಗಬೇಕಾದ ಅನಿವಾರ್ಯವಿದೆ. ಬಗರ್‌ಹುಕುಂ ಸಾಗುವಳಿದಾರರು ಮತ್ತು ಸರ್ಕಾರಿ ಭೂಮಿಯಲ್ಲಿ ಜೀವನ ಸಾಗಿಸುವ ಸಣ್ಣ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ಕುಂಟು ನೆಪ ಹೇಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಲಾಡ್ಯ ಕಾರ್ಪೋರೇಟ್ ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿ ನೀಡುವುದು ಖಂಡನೀಯ. ಇದು ಭವಿಷ್ಯದಲ್ಲಿ ರೈತರು ಬೀದಿ ಬೀಳುವಂತಾಗಲಿದೆ ಎಂದು ಎಚ್ಚರಿಸಿದರು.

ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್‌ಕುಮಾರ್ ಮಾತನಾಡಿ, ರಾಜ್ಯ ಸಂಘ ನಾಡಿನಾದ್ಯಂತ ಸಂಚಾರ ನಡೆಸಿ ಅರಣ್ಯಹಕ್ಕು, ಸಣ್ಣಪುಟ್ಟ ರೈತ ಸಮಸ್ಯೆಗಳ ಮುಕ್ತಿಗೆ ಪಾದಯಾತ್ರೆ ನಡೆಸಿದೆ. ಈ ಕಾಯ್ದೆ ಮುಕ್ತಿಗೆ ಹೋರಾಡುತ್ತಿದೆ. ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಕಾಯ್ದೆ ಹಿಂಪಡೆದಿದೆ ಎಂದರು.

ರೈತ ಸಂಘದ ಹಿರಿಯ ಮುಖಂಡ ಕೆ.ಕೆ.ಕೃಷ್ಣೇಗೌಡ ಮಾತನಾಡಿ, ದೇಶ ಹಾಗೂ ನಾಡಿನ ರೈತರು ಮನಸ್ಸು ಮಾಡಿದರೆ ಸರ್ಕಾರವನ್ನು ಉರುಳಿಸುವ ಶಕ್ತಿಯಿದೆ. ರೈತ ಹಕ್ಕಿಗೆ ಚ್ಯುತಿ ಬಾರದಂತೆ ಆಯಾ ಸರ್ಕಾ ರಗಳು ಸೂಕ್ತ ನಿರ್ಣಯ ಕೈಗೊಳ್ಳ ಬೇಕು ಎಂದು ಹೇಳಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಮಾಜಿ ಅಧ್ಯಕ್ಷ ಗುರುಶಾಂತಪ್ಪ, ಬಸವ ರಾಜ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಮುಖಂಡರಾದ ಕುಮಾರಸ್ವಾಮಿ, ದೇವರಾಜ್, ಬಸವಣ್ಣ, ರಾಜು ಎಕ್ಕಬೋರನಹಳ್ಳಿ, ಜಯರಾಮ್, ಇದ್ದರು.

-- ಬಾಕ್ಸ್‌--

ಬಡಾವಣೆಗೆ ಕೃಷಿ ಭೂಮಿ ವಶಕ್ಕೆ ಚಿಕ್ಕಮಗಳೂರು: ರೈತರ ಒಪ್ಪಿಗೆ ಇಲ್ಲದೇ ಜಮೀನಿನಲ್ಲಿ ವಸತಿ ಬಡಾವಣೆಗೆ ಕೃಷಿ ಭೂಮಿ ಆಕ್ರಮಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಇಂದಾವರ ಗ್ರಾಮಸ್ಥರು ಗುರುವಾರ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಗೆ ಮನವಿ ಸಲ್ಲಿಸಿದರು.

ಸಿಡಿಎಗೆ ಈಗಾಗಲೇ 193ಎಕರೆ ಜಮೀನನ್ನು ಎಬಿ ವಾಜಪೇಯಿ ವಸತಿ ಬಡಾವಣೆ, 208 ಎಕರೆ ಜಮೀನು ಇಂದಾವರ ವಸತಿ ಬಡಾವಣೆ ನೀಡಿದ್ದು ಬಡಾವಣೆ ನಿರ್ಮಿಸಲಾಗಿದೆ. ಈ ಬಡಾವಣೆಯಲ್ಲಿ ರೈತರಿಗೆ ಯಾವುದೇ ನಿವೇಶನ ಹಂಚಿಕೆ ಮಾಡಿಲ್ಲ. ವಾಜಪೇಯಿ ವಸತಿ ಬಡಾವಣೆಗೆ ನೀರಿನ ಸೌಕರ್ಯವಿಲ್ಲ, ತಾತ್ಕಾ ಲಿಕ ವಿದ್ಯುತ್ ಪೂರೈಕೆ ಮಾಡಲಾಗಿದೆ. ಇಂದಾವರ ಬಡಾವಣೆ ಕೆಲಸ ಆಮೆಗತಿಯಲ್ಲಿ ಸಾಗಿದ್ದು ಈಗಾಗಲೇ ಎರಡು ಕಡೆ ಭೂಮಿಯನ್ನು ಸಿಡಿಎ ಅಭಿವೃದ್ಧಿಗೆ ನೀಡಲಾಗಿದೆ ಎಂದು ಇಂದಾವರ ಮುಖಂಡ ಐ.ಎಸ್.ಯತೀಶ್ ಹೇಳಿದರು.ಹಸಿರು ವಲಯದಲ್ಲಿದ್ದರೂ ಸಹ ವಸತಿ ಬಡಾವಣೆ ನಿರ್ಮಿಸಲು ಹೊರಟಿರುವುದು ಬೇಸರದ ಸಂಗತಿ, ಹೀಗಾಗಿ ಇಂದಾವರ ಗ್ರಾಮಸ್ಥರಿಗೆ ಜೀವನ ಸಾಗಿಸಲು ಕೃಷಿ ಭೂಮಿ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಇಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಸುಭಾಶ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಿರಿಯಣ್ಣಗೌಡ, ಗ್ರಾಮಸ್ಥರಾದ ಚೇತನ್, ಸೋಮೇಗೌಡ, ಗುರುಶಾಂತಪ್ಪ ಉಪಸ್ಥಿತರಿದ್ದರು.

--ಫೋಟೋಕೃಷಿ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕೆ ಸರ್ಕಾರಿ ಅಧಿಕಾರಿಗಳು ಆಕ್ರಮಿಸುತ್ತಿದ್ದು, ಈ ಬಗ್ಗೆ ಹೋರಾಟಕ್ಕೆ ಇಂದಾವರ ಗ್ರಾಮಸ್ಥರು ರೈತ ಮುಖಂಡರಿಗೆ ಮನವಿ ಸಲ್ಲಿಸಿದರು.----ಫೋಟೋ---

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ಜಿಲ್ಲಾ ರೈತ ಸಂಘದಿಂದ ನಡೆದ ರೈತ ಪ್ರತಿಭಟನಾ ಜಿಲ್ಲಾ ಸಮಾವೇಶ ವನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಉದ್ಘಾಟಿಸಿದರು. ಈ ವೇಳೆ ಮುಖಂಡ ಕೆ.ಕೆ.ಕೃಷ್ಣೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ್‌ಕುಮಾರ್ ಸೇರಿದಂತೆ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ