ಅರೇಹಳ್ಳಿಯಲ್ಲಿ ಮತ್ತೆ ಕಾಡುಕೋಣ ಕಾಡೆಮ್ಮೆ ಪ್ರತ್ಯಕ್ಷ

KannadaprabhaNewsNetwork |  
Published : Mar 21, 2026, 01:30 AM IST
20ಎಚ್ಎಸ್ಎನ್9 : ಮರಿಯೊಂದಿಗೆ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಕಾಡೆಮ್ಮೆ. | Kannada Prabha

ಸಾರಾಂಶ

ಮಲೆನಾಡು ಭಾಗವಾದ ಈ ಪ್ರದೇಶದಲ್ಲಿ ಸುಮಾರು ಐದಾರು ವರ್ಷಗಳ ಹಿಂದೆ ಕಾಡಾನೆಗಳ ಸಣ್ಣ ಗುಂಪು ಕಾಣಿಸಿಕೊಂಡಿದ್ದು, ನಂತರ ಅದು ಹಲವಾರು ಗುಂಪುಗಳಾಗಿ ಹೆಚ್ಚಾಗಿ ರೈತರಿಗೆ ತೊಂದರೆ ಉಂಟುಮಾಡಿತ್ತು. ಆ ಸಮಯದಲ್ಲಿ ಬೆಳೆ ಹಾನಿಯಷ್ಟೇ ಅಲ್ಲದೆ, ಮಾನವ ಜೀವಕ್ಕೂ ಅಪಾಯ ಎದುರಾಗಿದ್ದರಿಂದ ಕೃಷಿಕರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದರು. ಬಳಿಕ ಕೃಷಿಕರು ಸೋಲಾರ್‌ ವಿದ್ಯುತ್ ತಂತಿ ಬೇಲಿ ಅಳವಡಿಸಿಕೊಂಡ ಪರಿಣಾಮ ಕಾಡಾನೆಗಳ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಹೊಸ ಆತಂಕವಾಗಿ ಕಾಡುಕೋಣ ಹಾಗೂ ಕಾಡೆಮ್ಮೆ ಪ್ರತ್ಯಕ್ಷವಾಗಿವೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಸುತ್ತಮುತ್ತ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಮತ್ತೆ ತಲೆದೋರಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.ಮಲೆನಾಡು ಭಾಗವಾದ ಈ ಪ್ರದೇಶದಲ್ಲಿ ಸುಮಾರು ಐದಾರು ವರ್ಷಗಳ ಹಿಂದೆ ಕಾಡಾನೆಗಳ ಸಣ್ಣ ಗುಂಪು ಕಾಣಿಸಿಕೊಂಡಿದ್ದು, ನಂತರ ಅದು ಹಲವಾರು ಗುಂಪುಗಳಾಗಿ ಹೆಚ್ಚಾಗಿ ರೈತರಿಗೆ ತೊಂದರೆ ಉಂಟುಮಾಡಿತ್ತು. ಆ ಸಮಯದಲ್ಲಿ ಬೆಳೆ ಹಾನಿಯಷ್ಟೇ ಅಲ್ಲದೆ, ಮಾನವ ಜೀವಕ್ಕೂ ಅಪಾಯ ಎದುರಾಗಿದ್ದರಿಂದ ಕೃಷಿಕರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದರು. ಬಳಿಕ ಕೃಷಿಕರು ಸೋಲಾರ್‌ ವಿದ್ಯುತ್ ತಂತಿ ಬೇಲಿ ಅಳವಡಿಸಿಕೊಂಡ ಪರಿಣಾಮ ಕಾಡಾನೆಗಳ ಹಾವಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿತ್ತು. ಇದೀಗ ಮತ್ತೆ ಹೊಸ ಆತಂಕವಾಗಿ ಕಾಡುಕೋಣ ಹಾಗೂ ಕಾಡೆಮ್ಮೆ ಪ್ರತ್ಯಕ್ಷವಾಗಿವೆ. ಇತ್ತೀಚೆಗೆ ಅರೇಹಳ್ಳಿ ಸಮೀಪ ಕಾಡುಕೋಣವೊಂದು ಆಟೋ ಮೇಲೆ ದಾಳಿ ನಡೆಸಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.ಇದೀಗ ಮರಿಯೊಂದಿಗೆ ಕಾಡುಕೋಣ ಹಾಗೂ ಕಾಡೆಮ್ಮೆ ಕಡೆಗರ್ಜೆ ಸಮೀಪದ ಗುಡ್ ಪೇಟಾ ಎಸ್ಟೇಟ್ ಆವರಣದಲ್ಲಿ ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ವಾಹನ ಸವಾರನೊಬ್ಬ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಈ ಘಟನೆಗಳು ಮರುಕಳಿಸಬಹುದೆಂಬ ಭೀತಿಯಿಂದ ಸ್ಥಳೀಯರು ಕಳವಳಗೊಂಡಿದ್ದಾರೆ.“ಕಾಡಾನೆಗಳ ಹಾವಳಿಯಿಂದ ಈಗಾಗಲೇ ನಲುಗಿದ್ದೇವೆ. ಇದೀಗ ಕಾಡುಕೋಣಗಳ ಸಂಚಾರವೂ ಹೆಚ್ಚಾಗಿದೆ. ಭವಿಷ್ಯದಲ್ಲಿ ಮಾನವ ಜೀವಕ್ಕೆ ಅಪಾಯ ತಪ್ಪದು. ಆದ್ದರಿಂದ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಈ ಕಾಡುಪ್ರಾಣಿಗಳನ್ನು ಸೆರೆಹಿಡಿದು ಕಾಡಿಗೆ ಒಯ್ಯಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಸೆರೆ
ಗವೇನಹಳ್ಳಿಯಲ್ಲಿ ಹೊಸತಡಕಿಗೆ ಗುಡ್ಡೆ ಮಾಂಸ ಖರೀದಿ