ಮುಂಡಗೋಡ: ಸಾಮಾಜಿಕ ಸೇವೆ ಸಲ್ಲಿಸಲು ಯಾವುದೇ ಮಿತಿ ಇರುವುದಿಲ್ಲ. ಸೇವೆ ಮಾಡುವ ಮನೋಭಾವ ಹಾಗೂ ಇಚ್ಛಾಶಕ್ತಿ ಇರಬೇಕು ಎಂದು ರೋಟರಿ ಕ್ಲಬ್ ನ ಜಿಲ್ಲಾ ಗವರ್ನರ್ ವೆಂಕಟೇಶ ದೇಶಪಾಂಡೆ ತಿಳಿಸಿದರು.
ಸಮಾಜದಲ್ಲಿ ನಡೆದುಕೊಳ್ಳುವ ರೀತಿ- ನೀತಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾದರೆ ಹೊಂದಾಣಿಕೆ ಮತ್ತು ಪರಸ್ಪರ ಸಹಭಾಗಿತ್ವ ತುಂಬಾ ಮಹತ್ವದ್ದಾಗಿರುತ್ತದೆ. ರೋಟರಿ ಕ್ಲಬ್ ಬಗ್ಗೆ ಜನರಿಗೆ ಅಪಾರವಾದ ನಂಬಿಕೆ ಇದೆ. ರೋಟರಿ ಕ್ಲಬ್ ಸಂಸ್ಥೆಯು ಸದಸ್ಯರಿಗೆ ಸಾಕಷ್ಟು ಜ್ಞಾನವನ್ನು ನೀಡುತ್ತದೆ. ಜ್ಞಾನ ಎಲ್ಲೇ ಸಿಗಲಿ. ಅದನ್ನು ಪಡೆದುಕೊಳ್ಳುವ ಮನಸ್ಸು ನಮ್ಮಲ್ಲಿರಬೇಕು ಎಂದರು.
ರೋಟರಿ ಕ್ಲಬ್‌ನ ೨೦೨೪- ೨೫ನೇ ಸಾಲಿನ ನೂತನ ಅಧ್ಯಕ್ಷ ರೋ. ಸುರೇಶ ಮಂಜಾಳಕರ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಭಾಗಕ್ಕೆ ರೋಟರಿ ಕ್ಲಬ್ ವತಿಯಿಂದ ತಮ್ಮ ಕಾಲಾವಧಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಜಿಲ್ಲಾ ಸಹಾಯಕ ಗವರ್ನರ್ ಶಂಕರ ಹಿರೇಮಠ ಮಾತನಾಡಿದರು. ೨೦೨೪- ೨೫ನೇ ಸಾಲಿನ ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ರೋ. ಸುರೇಶ ಮಂಜಾಳಕರ, ಕಾರ್ಯದರ್ಶಿಯಾಗಿ ರೋ. ಸಂತೋಷ ಕುರ್ಡೇಕರ, ಖಜಾಂಚಿಯಾಗಿ ರೋ. ಪಾಂಡುರಂಗ ಪಾಲೇಕರ ಅಧಿಕಾರ ವಹಿಸಿಕೊಂಡರು.ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ತಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ನಾಗರಾಜ ನಾಯ್ಕ, ಖಜಾಂಚಿ ಕಲ್ಮೇಶ ಟೋಪೋಜಿ ಮಾತನಾಡಿದರು. ಸತೀಶ ಕುರ್ಡೇಕರ, ಮಹೇಶ ಹೆಗಡೆ, ಪಿ.ಪಿ. ಚಬ್ಬಿ, ಪ್ರಶಾಂತ ಬಾಡಕರ, ಸಂಗಮೆಶ ಬಿದರಿ, ಎಸ್.ಕೆ. ಬೋರ್ಕರ, ಎಲ್.ಟಿ. ಪಾಟೀಲ, ಬೈಜು ಬಿ.ಜೆ., ವಸಂತ ಕೊಣಸಾಲಿ, ನಟರಾಜ ಕಾತೂರ, ನಾರಾಯಣ ದೈವಜ್ಞ ಮುಂತಾದವರು ಉಪಸ್ಥಿತರಿದ್ದರು. ಜಗದೀಶ ಕಾನಡೆ ನಿರೂಪಿಸಿದರು.