ಆತ್ಮವಿಶ್ವಾಸದಿಂದ ಏನನ್ನಾದರೂ ಸಾಧಿಸಲು ಸಾಧ್ಯ: ದರ್ಶನ್

KannadaprabhaNewsNetwork |  
Published : Jun 12, 2026, 01:45 AM IST
ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆವಿದ್ಯಾರ್ಥಿಗಳು ಸರಿಯಾದ ಗುರಿ, ಆತ್ಮವಿಶ್ವಾಸವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಬೆಂಗಳೂರು ಕ್ರಾಫ್ಟಿಗ್ ಎಂಜಿನಿಯರ್ ಸಲ್ಯೂಷನ್ಸ್ ಕಂಪನಿ ಮಾಲೀಕ ದರ್ಶನ್ ಹೇಳಿದ್ದಾರೆ.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿದ್ಯಾರ್ಥಿಗಳು ಸರಿಯಾದ ಗುರಿ, ಆತ್ಮವಿಶ್ವಾಸವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಬೆಂಗಳೂರು ಕ್ರಾಫ್ಟಿಗ್ ಎಂಜಿನಿಯರ್ ಸಲ್ಯೂಷನ್ಸ್ ಕಂಪನಿ ಮಾಲೀಕ ದರ್ಶನ್ ಹೇಳಿದ್ದಾರೆ.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ೨೦೨೫-೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-೧ ರಲ್ಲಿ ಉನ್ನತ ಅಂಕಗಳನ್ನು ಪಡೆದ ನಮ್ಮ ಶಾಲೆ ಮೂವರು ವಿದ್ಯಾರ್ಥಿನಿಯರಿಗೆ ಒಟ್ಟು 24 ಸಾವಿರದ ಮೂರು ಚೆಕ್ಕುಗಳನ್ನು ನೀಡಿ ಸಮಾರಂಭದಲ್ಲಿ ಮಾತನಾಡಿದರು. ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ನಿಜಕ್ಕೂ ಪುಣ್ಯ ಮಾಡಿದ್ದು, ಮನೆಯಲ್ಲಿ ನಿಮ್ಮ ಪೋಷಕರು ಪಡುತ್ತಿರುವ ಕಷ್ಟ ಗಮನ ದಲ್ಲಿಟ್ಟುಕೊಂಡು, ಚೆನ್ನಾಗಿ ಓದಿ, ತಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು. ಪ್ರತಿಭಾ ಪುರಸ್ಕೃತ ವಿದ್ಯಾರ್ಥಿನಿ ಸ್ಪೂರ್ತಿ ತಾಯಿ ವಾಣಿ ಮಾತನಾಡಿ ನಮ್ಮ ಮಗಳು ಉತ್ತಮ ಅಂಕ ಪಡೆಯಲಿಕ್ಕೆ ಈ ಶಾಲೆ ಉತ್ತಮ ಪಾಠ-ಪ್ರವಚನಗಳೇ ಕಾರಣ. ಇಲ್ಲಿ ವಿದ್ಯಾರ್ಥಿಗಳು ಓದಲು ಉತ್ತಮ ಸೌಲಭ್ಯವಿದೆ. ಅವುಗಳನ್ನು ಬಳಸಿ ಕೊಂಡು ಮಕ್ಕಳು ಚೆನ್ನಾಗಿ ಓದಬೇಕು ಎಂದರು. ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ,ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಓದಿನೆಡೆಗೆ ಉತ್ತಮ ಗಮನ ನೀಡಿ ಮುಂಬರುವ ಪರೀಕ್ಷೆಗಳಲ್ಲಿ ಇನ್ನೂ ಉತ್ತಮ ಅಂಕ ಪಡೆಯಬೇಕು ಎಂದು ತಿಳಿಸಿದರು. ಮಕ್ಕಳು ಹೇಗೆ ಉತ್ತಮ ಏಕಾಗ್ರತೆ ಹೊಂದಬಹುದೆಂಬ ಬಗ್ಗೆ ಸ್ವಾಮಿ ವಿವೇಕಾನಂದರ ಜೀವನದ ಕಥೆ ಹೇಳಿ ಮಕ್ಕಳನ್ನು ಹುರಿದುಂಬಿಸಿದರು.

ಗ್ರಾಮಸ್ಥರಾದ ಅಚೆಟ್ಟಿ ದಿನೇಶ್, ನಿಜಗುಣ, ಪ್ರತಿಭಾ ಪುರಸ್ಕೃತ ಮಕ್ಕಳ ಪೋಷಕರು ಮತ್ತು ಹಾಸ್ಟೆಲ್ ಮಕ್ಕಳು. ನಯನ, ರೇಖಾ, ಭವ್ಯ ಭಾಗವಹಿಸಿದ್ದರು.-

10ಕೆಟಿಆರ್.ಕೆ.1ಃ ತರೀಕೆರೆ ಸಮೀಪದ ನೇರಲೆಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಏರ್ಪಾಡಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ರಾಫ್ಟಿಗ್ ಇಂಜಿನಿಯರ್ ಸಲೂಷನ್ಸ್ ಕಂಪನಿ ಮಾಲೀಕ ದರ್ಶನ್, ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ.ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹದಿಹರೆಯದಲ್ಲಿ ಮಕ್ಕಳು ಜಾಗ್ರತೆ ವಹಿಸಬೇಕು: ವೈ.ಎಂ.ಲಲಿತ ಸಲಹೆ
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮ ರಸ್ತೆ ನಿರ್ಮಾಣ: ಗುಡ್ಡದ ಮಣ್ಣು ಸಾಗಣೆ ಆರೋಪ