ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರತಿಯೊಬ್ಬ ಬಡ ಜನರ ಆರೋಗ್ಯದ ಹಿತದೃಷ್ಠಿಯಿಂದ ಅತೀ ಕಡಿಮೆ ದರದಲ್ಲಿ ಔಷಧಿ ದೊರೆಯುವ ಉದ್ದೇಶದಿಂದ ೨೦೧೬ರಲ್ಲಿ ಜನೌಷಧಿ ಕೇಂದ್ರ ಜಾರಿಗೆ ತಂದಿದ್ದರಿಂದ ಬಡವರಿಗೆ ಔಷಧಿಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದ್ದು
ಕೊಪ್ಪಳ(ಯಲಬುರ್ಗಾ): ರಾಜ್ಯದಲ್ಲಿ ಜನೌಷಧಿ ಕೇಂದ್ರಗಳ ಬಗ್ಗೆ ಆರೋಗ್ಯ ಸಚಿವ ದಿನೇಶ ಗೂಂಡುರಾವ್ ರದ್ಧತಿ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ತಾಲೂಕು ಮಂಡಲದಿಂದ ಯಲಬುರ್ಗಾ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ಪಕ್ಷದ ಮುಖಂಡರು, ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರತಿಯೊಬ್ಬ ಬಡ ಜನರ ಆರೋಗ್ಯದ ಹಿತದೃಷ್ಠಿಯಿಂದ ಅತೀ ಕಡಿಮೆ ದರದಲ್ಲಿ ಔಷಧಿ ದೊರೆಯುವ ಉದ್ದೇಶದಿಂದ ೨೦೧೬ರಲ್ಲಿ ಜನೌಷಧಿ ಕೇಂದ್ರ ಜಾರಿಗೆ ತಂದಿದ್ದರಿಂದ ಬಡವರಿಗೆ ಔಷಧಿಗಳು ಅತೀ ಕಡಿಮೆ ದರದಲ್ಲಿ ದೊರೆಯುತ್ತಿದ್ದು, ಜನೌಷಧಿ ಕೇಂದ್ರಗಳು ಬಡ ಜನರ ಆರೋಗ್ಯ ಸಂಜೀವಿನಿಗಳಾಗಿದ್ದವು. ಇಂತಹ ಕೇಂದ್ರ ಮುಚ್ಚಲು ಹೊರಟಿರುವ ಸರ್ಕಾರ ಮತ್ತು ಸಚಿವರ ನಡೆ ಖಂಡನಾರ್ಹವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಜನತೆಯ ಸದೃಢ ಆರೋಗ್ಯಬೇಕಾಗಿಲ್ಲ. ಅವರು ಔಷಧಿ ಸಿಗದೇ ನರಳಾಡುವ ಸ್ಥಿತಿಯನ್ನು ಸರ್ಕಾರ ನೋಡಬೇಕು ಎಂದುಕೊಂಡಿದೆ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ, ಶಕುಂತಲಾದೇವಿ ಮಾಲಿಪಾಟೀಲ, ಅಮರೇಶ ಹುಬ್ಬಳ್ಳಿ, ಮಂಜುನಾಥ ನಾಡಗೌಡ್ರ ಮಾತನಾಡಿ, ಆಸ್ಪತ್ರೆ ಆವರಣದ ಕೇಂದ್ರಗಳನ್ನು ಮುಚ್ಚಿಸಲು ಕಾರಣವೇನು? ಮುಖ್ಯಮಂತ್ರಿ, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇದಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.