---ಕನ್ನಡಪ್ರಭ ವಾರ್ತೆ ಮೈಸೂರುಸಿದ್ದಲಿಂಗಪುರ ಜಿಪಂ ವ್ಯಾಪ್ತಿಯ ಸಿದ್ದಲಿಂಗಪುರ, ಬೆಲವತ್ತ, ಹಳೇಕೆಸರೆ, ಕಾಮನಕೆರೆಹುಂಡಿ, ಲಕ್ಷ್ಮೀಪುರ ಕಳಸ್ತವಾಡಿ ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಮುಂದಿನ 6 ತಿಂಗಳಲ್ಲಿ ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸುವುದಾಗಿ ಶಾಸಕ ಜಿ.ಟಿ. ದೇವೇಗೌಡ ಭರವಸೆ ನೀಡಿದರು.ನಗರದ ಏಕಲವ್ಯನಗರ, ನಾಗನಹಳ್ಳಿ, ಕಳಸ್ತವಾಡಿ, ಹಳೇಕೆಸರೆ, ಕಾಮನಕೆರೆಹುಂಡಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ನಗರದ ಸುತ್ತಮುತ್ತಲ ಬಡಾವಣೆಗಳು ಸೇರಿದಂತೆ ಹತ್ತಿರದ ಹಳ್ಳಿಗಳಿಗೂ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಒದಗಿಸಲು ಹಳೆಯ ಉಂಡುವಾಡಿ ಯೋಜನೆಯಡಿ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ಟ್ಯಾಂಕ್ ಗಳ ನಿರ್ಮಾಣ ಕಾರ್ಯ ಮುಗಿದು ಪೈಪ್ ಲೈನ್ ಅಳವಡಿಸುವ ಕಾರ್ಯ ಮುಗಿಯುವ ಹಂತದಲ್ಲಿದೆ ಎಂದು ಹೇಳಿದರು.ಏಕಲವ್ಯನಗರದಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಏಕಲವ್ಯನಗರದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿ, ಈ ಏಕಲವ್ಯನಗರದಲ್ಲಿ ಬಾಕಿ ಇರುವ 241 ಮನೆಗಳನ್ನು ವಿತರಿಸಲು 1 ತಿಂಗಳು ಕಾಲ ಸಮಯವನ್ನು ಅಧಿಕಾರಿಗಳಿಗೆ ನೀಡಿದ ಶಾಸಕರು, ಕೂಡಲೇ ಪಟ್ಟಿ ಮಾಡಿ, ಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದು ಮನೆಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ದೂರವಾಣಿ ಮೂಲಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ರಾಘವೇಂದ್ರ ಅವರಿಗೆ ತಿಳಿಸಿದರು.ಏಕಲವ್ಯನಗರದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬೇರೆಡೆ ಇರುವ ವಸತಿ ನಿಲಯಕ್ಕೆ ಪ್ರವೇಶಾತಿ ಪಡೆಯುತ್ತಿದ್ದು, ಈ ಬಡಾವಣೆಯಲ್ಲಿ ವಸತಿ ನಿಲಯ ಪ್ರಾರಂಭ ಮಾಡುವಂತೆ ಸ್ಥಳೀಯ ಆದಿವಾಸಿ ನಿವಾಸಿಗಳು ಕೋರಿದರು. ಇದಕ್ಕೆ ಸ್ಪಂಧಿಸಿದ ಶಾಸಕ ಜಿ.ಟಿ. ದೇವೇಗೌಡ, ಸ್ಥಳದಲ್ಲಿ ಹಾಜರಿದ್ದ ರಾಜಸ್ವ ನಿರೀಕ್ಷಕ ಹೇಮಂತ್ ಅವರಿಗೆ ಕೂಡಲೇ ಸ್ಥಳ ಪರಿಶೀಲಿಸಬೇಕು. ಸ್ಥಳವನ್ನು ಮೀಸಲಿರಿಸುವಂತೆ ಹಾಗೂ ಸ್ಮಶಾನಕ್ಕೆ ಕೂಡಲೇ ಸ್ಥಳವನ್ನು ಮೀಸಲಿರಿಸುವಂತೆ ಸೂಚಿಸಿದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತೆರೆದಿರುವ ನಮ್ಮ ಕ್ಲಿನಿಕ್ ಗೆ ವೈದ್ಯರನ್ನು ನೇಮಿಸುವಂತೆ ಡಿಎಚ್.ಒಗೆ ಸೂಚಿಸಿದರು.ನಾಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ನಿರ್ಮಿಸಿದ್ದ ಸ್ವಾಗತ ಕವಾನು ಉದ್ಘಾಟಿಸಿ, 50 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ವಾಣಕ್ಕೆ ಚಾಲನೆ ನೀಡಿದರು. ನಂತರ 35 ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿ, 26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಟ್ಯಾಂಕನ್ನು ಉದ್ಘಾಟಿಸಿ ನಂತರ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ, 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನವನ ಹಾಗೂ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಅಂಗನವಾಡಿ ಸಭಾಂಗಣ ಉದ್ಘಾಟಿಸಿದರು.ಕಳಸ್ತವಾಡಿ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ 25 ಲಕ್ಷ ರೂ. ವೆಚ್ಚದಲ್ಲಿ ಏಕದಂತ ಶಾಲೆಯ ರಸ್ತೆ, 17 ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಿ, 10 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿರುವ ಅಡುಗೆ ಮನೆ ಉದ್ಘಾಟಿಸಿದರು.ಹಳೆ ಕೆಸರೆ ಗ್ರಾಮದಲ್ಲಿ75 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಟೀಚರ್ಸ್ ಲೇ ಔಟ್ ನ ಸಮಸ್ಯೆ ಆಲಿಸಿ, ಅಂದಾಜು ಪಟ್ಟಿ ತಯಾರಿಸಿ, ಕಾಮಗಾರಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಾಮನಕೆರೆಹುಂಡಿ ಗ್ರಾಮದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿ, 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿದರು. ನಂತರ ಸಿದ್ದಲಿಂಗಪುರ ಗ್ರಾಮದಲ್ಲಿ 1.75 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯ ನಾಗನಹಳ್ಳಿ ದಿನೇಶ್, ಮುಖಂಡರಾದ ಸಿದ್ದಲಿಂಗಪುರ ಅರಕೇಶ್ವರ್, ರಾಮೇಗೌಡ್ರು, ವಿಜೇಂದ್ರಣ್ಣ, ಕೃಷ್ಣಪ್ಪ, ತಾಪಂ ಮಾಜಿ ಅಧ್ಯಕ್ಷ ಕುಮಾರ್, ಸದಸ್ಯ ರೇವಣ್ಣ, ಅಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಮರಿಸ್ವಾಮಿ, ಗ್ರಾಪಂ ಸದಸ್ಯರಾದ ಕೆ.ಜೆ. ಮಾದೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪುರಂದರ, ಯಶ್ವಂತ್, ಗ್ರಾಪಂ ಮಾಜಿ ಅಧ್ಯಕ್ಷ ಭಾಸ್ಕರ್, ರಶ್ಮಿಮಂಜು, ಕುಮಾರ್ ಚೌಡಪ್ಪ, ಯಜಮಾನರಾದ ರಮೇಶ್, ಶಿವಲಿಂಗು, ಪ್ರಕಾಶ್ ಮೊದಲಾದವರು ಇದ್ದರು.