ಕೊಪ್ಪಳ: ತಪ್ಪು ಮಾಡಿದವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಬಾರದೆ? ತಪ್ಪು ಮಾಡಿದರೂ ಬಿಟ್ಟು ಬಿಡಬೇಕಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಅಂದೊಂದು ಕಾನೂನು ಪ್ರಕ್ರಿಯೆ. ಪೊಲೀಸರು ಕಾನೂನು ರೀತಿ ಕ್ರಮ ವಹಿಸಿದ್ದಾರೆ. ಹಳೆಯ ಪ್ರಕರಣ ವಿಲೇವಾರಿ ಮಾಡುವಂತೆ ಸೂಚಿಸಿದ್ದೇವೆ. ಕೋರ್ಟ್ ಸಹ ನಿರ್ದೇಶನ ನೀಡಿದ್ದರಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅದರಲ್ಲಿ ತಪ್ಪೇನು? ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದರು.
ಕೇಂದ್ರ ಸರ್ಕಾರ ರಜೆ ಕೊಡಲಿ:ಶ್ರೀರಾಮಮಂದಿರದ ಉದ್ಘಾಟನಾ ದಿನವಾದ ಜ. 22ರಂದು ಸರ್ಕಾರಿ ರಜೆ ನೀಡುವಂತೆ ಆಗ್ರಹ ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಕೇಂದ್ರ ಸರ್ಕಾರ ಕೊಡಲಿ, ನಾವೇಕೆ ಕೊಡಬೇಕು ಎಂದು ಪ್ರಶ್ನಿಸಿದರು.
ಈಗಾಗಲೇ ಘೋಷಣೆ ಮಾಡಿರುವ ಪ್ರತಿ ರೈತರಿಗೆ ₹2 ಸಾವಿರ ನೀಡುವುದಕ್ಕೆ ತಾಂತ್ರಿಕ ಸಮಸ್ಯೆಯಾಗಿದೆ. ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಆನಂತರ ಜಮೆ ಮಾಡಲಾಗುವುದು ಎಂದರು.