ಮುಂಡಗೋಡ: ಇಂದಿನ ಸ್ಪರ್ಧಾಯುಗದಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಬಲರಾಗಿ ಬೆಳೆಯುತ್ತಿದ್ದಾರೆ. ಹಿಂದಿನಂತೆ ಯಾವುದೇ ಸಮಸ್ಯೆಗಳಿಲ್ಲದೆ ಉತ್ತಮವಾಗಿ ತನ್ನ ಕಾಲುಗಳ ಮೇಲೆ ತಾನೆ ನಿಂತು ಪುರುಷರೊಂದಿಗೆ ಸ್ಪರ್ಧಿಸುವ ಧೈರ್ಯವನ್ನು ಮಹಿಳೆ ಹೊಂದಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಡಾ. ಅನುಪಮಾ ಆದಾಪುರ ಹೇಳಿದರು.
ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ ಅಧ್ಯಕ್ಷತೆವಹಿಸಿದ್ದರು. ಜ್ಯೋತಿ ಆಚಾರ್ಯ, ಸುಮಿತ್ ಸಿಜಿಯರ್, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ನಿಲಯಪಾಲಕರಾದ ಶಿವಲೀಲಾ ಗಂಟಾಮಠ, ನಂದಾ ಮಠಲ್ಲೆ, ವಿನಾಯಕ ಶೇಟ್, ಎಸ್.ಡಿ. ಮುಡೆಣ್ಣವರ, ನಾಗರಾಜ ಅರ್ಕಸಾಲಿ ಡಾ. ಪಿ.ಪಿ. ಚಬ್ಬಿ, ಎಸ್.ಕೆ. ಬೋರ್ಕರ್, ಆರ್. ಎನ್. ನಾಯಕ, ಸುಭಾಸ ಡೋರಿ, ಸಂಗಪ್ಪ ಕೋಳೂರು, ಆನಂದ ಹೊಸೂರು, ದಿನೇಶ ವೆರ್ಣೇಕರ್, ಆರ್.ಎಸ್. ಕಲಾಲ್, ಮಲ್ಲಮ್ಮ ನೀರಲಗಿ, ಎಸ್.ಬಿ. ಹೂಗಾರ, ಮಂಜುನಾಥ ನೀಲಮ್ಮನವರ, ಶ್ರೀಕಾಂತ ಹೊಂಡದಕಟ್ಟಿ, ಸಂತೋಷ ಕೂಸನೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕರಾದ ಶಿವಲೀಲಾ ಘಂಟಾಮಠ ಹಾಗೂ ಸುಲೋಚನಮ್ಮ ರಾಮಣ್ಣನವರ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಅದಿತಿ ನಾರಾಯಣ್ ನಾಯಕ ಪ್ರಾರ್ಥಿಸಿದರು. ಶಾರದಾಬಾಯಿ ರಾಥೋಡ್ ಸ್ವಾಗತಿಸಿದರು. ವಿದ್ಯಾ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು. ಗೌರಮ್ಮ ಕೊಳ್ಳಾನ್ನವರ ವಂದಿಸಿದರು.