ಮಹಿಳೆಯರು ಕಾಂಗ್ರೆಸ್ ಬೆಂಬಲಿಸುವುದು ನಿಶ್ಚಿತ: ಸಚಿವ ತಂಗಡಗಿ

KannadaprabhaNewsNetwork |  
Published : May 03, 2024, 01:04 AM IST
ಕಾರಟಗಿಯಲ್ಲಿ ಮಾದಿಗ ಸಮುದಾಯದ ಹಲವು ಯುವಕರು ಬಿಜೆಪಿ ತೊರೆದು ಸಚಿವ ಶಿವರಾಜ್‌ ತಂಗಡಗಿ ಇವರ ನಿವಾಸದಲ್ಲಿ ಕಾಂಗ್ರೆಸ್‌ ಸೇರಿದರು. | Kannada Prabha

ಸಾರಾಂಶ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾದ ಶೇ.೮೯ರಷ್ಟು ಮಹಿಳೆಯರು ಕಾಂಗ್ರೆಸ್ ಬೆಂಬಲಿಸುವುದು ನಿಶ್ಚಿತ.

ಕನ್ನಡಪ್ರಭ ವಾರ್ತೆ ಕಾರಟಗಿ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾದ ಶೇ.೮೯ರಷ್ಟು ಮಹಿಳೆಯರು ಕಾಂಗ್ರೆಸ್ ಬೆಂಬಲಿಸುವುದು ನಿಶ್ಚಿತ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ₹೫೬ ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಮೀಸಲಿರಿಸಿದೆ. ಜಾತಿಗಳ ಮಧ್ಯೆ ಕಲಹ ಸೃಷ್ಟಿಸುವುದೇ ಬಿಜೆಪಿಯ ಕೆಲಸ. ಎಲ್ಲ ಸಮುದಾಯಗಳನ್ನು ಸಮಾನ ದೃಷ್ಟಿಯಿಂದ ಕಾಂಗ್ರೆಸ್ ನೋಡುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುವುದು ಬಿಜೆಪಿಯವರ ತಿರುಕನ ಕನಸು. ಪಕ್ಷ ಸೇರ್ಪಡೆಗೊಳ್ಳುತ್ತಿರುವ ಯುವಕರ ಉತ್ಸಾಹವನ್ನು ನೋಡಿ ಈ ಬಾರಿ ಅತಿಹೆಚ್ಚು ಮತಗಳ ಲೀಡ್ ನಮ್ಮ ಲೋಕಸಭೆ ಅಭ್ಯರ್ಥಿಗೆ ದೊರಕುತ್ತದೆ ಎಂದರು.

ಪಕ್ಷ ಸೇರ್ಪಡೆ:ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಎಸ್ಪಿ ಮೋರ್ಚಾ ಮಾಜಿ ಅಧ್ಯಕ್ಷ ಜಮದಗ್ನಿ ಚೌಡಕಿ ಸೇರಿದಂತೆ ಮಾದಿಗ ಸಮುದಾಯದ ಹಲವು ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಮೌನೇಶ್ ಭಜರಂಗಿ, ದುರುಗೇಶ್ ಕೆಂಗೇರಿ, ವಿಜಯ ಕೆಂಗೇರಿ, ಕುಂಟೋಜಿ ಗ್ರಾಮದ ಹೇಮಂತ್ ಕುಂಟೋಜಿ, ಪರುಶರಾಮ್ ಮ್ಯಾಗಡಮನಿ, ರಮೇಶ್ ನಂಜಲದಿನ್ನಿ, ಪರುಶರಾಮ್ ನಂದಿಹಳ್ಳಿ, ಪಂಪಾಪತಿ ಸಿದ್ದಾಪುರ, ವಿಜಯಕುಮಾರ್, ವಸಂತ ಈಳಿಗನೂರು, ನೀಲಪ್ಪ ಗುಂಡೂರು, ಗಾಳೇಶ್ ಇಂದಿರಾನಗರ, ನಾಗರಾಜ್ ಮರ್‍ಲಾನಹಳ್ಳಿ, ಲಕ್ಷ್ಮಣ ಮರ್‍ಲಾನಹಳ್ಳಿ, ಮಾರೇಶ್, ವಿರುಪಾಕ್ಷಿ ಸೇರಿದಂತೆ ೬೦ಕ್ಕೂ ಹೆಚ್ಚು ಜನ ಸಚಿವ ಶಿವರಾಜ ತಂಗಡಗಿ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾ.ಪಾ, ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಚನ್ನಬಸಪ್ಪ ಸುಂಕದ, ಪುರಸಭೆ ಸದಸ್ಯರಾದ ಈಶಪ್ಪ ಇಟ್ಟಂಗಿ, ಹಿರೇಬಸಪ್ಪ ಸಜ್ಜನ್, ಪ್ರಮುಖರಾದ ಕೆ.ಸಿದ್ದನಗೌಡ, ಮಹೇಶ್ ಕಂದಗಲ್, ಶರಣಪ್ಪ ಪರಕಿ ಹಾಗೂ ದಲಿತ ಸಮಾಜದ ವಿರುಪಾಕ್ಷಿ ಕುಂಟೋಜಿ, ಮರಿಸ್ವಾಮಿ ಬರಗೂರು, ಬಸವರಾಜ್ ಬಸವಣ್ಣಕ್ಯಾಂಪ್, ಹನುಮೇಶ್ ವಡ್ಡರಟ್ಟಿ, ಹುಲುಗೇಶ್ ಕೆಂಗೇರಿ, ಸಣ್ಣಗಾಳೇಶ್ ಮ್ಯಾಗಡಮನಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ