ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಸಿಕ್ಯಾಬ್ ಸಂಸ್ಥೆಯ ಎ.ಆರ್.ಎಸ್.ಐ. ಪದವಿ ಮಹಿಳಾ ಮಹಾವಿದ್ಯಾಲಯ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪಿಎಚ್.ಡಿ ಪದವಿ ಪುರಸ್ಕೃತರಿಗೆ ಮತ್ತು ರ‍್ಯಾಂಕ್ ವಿಜೇತರಿಗೆ ಸುವರ್ಣ ಪದಕ ನೀಡಿ ಸನ್ಮಾನಿಸಿ ಮಾತನಾಡಿದರು.
ಸ್ತ್ರೀ- ಪುರುಷರಿಬ್ಬರು ಸರಿಸಮಾನರಾಗಿದ್ದು, ಪರಸ್ಪರ ಅರಿತು ನಡೆದರೆ ಬದುಕಿನ ಸಮಸ್ಯೆಗಳು ದೂರಾಗುತ್ತವೆ. ಇದನ್ನು ಪ್ರೀತಿ, ವಿಶ್ವಾಸ ಮತ್ತು ಸಮಾನತೆಯ ತತ್ವಕ್ಕೆ ಅನುಸಾರವಾಗಿ ಸಾಧಿಸಬಹುದಾಗಿದೆ ಎಂದು ತಿಳಿಸಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫಿ ಭಂಡಾರಿ ಮಾತನಾಡಿ, ಸಮಕಾಲೀನ ಜಗತ್ತು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ನಾವು ಗೆಲ್ಲಬೇಕಾದರೆ ಸ್ಪರ್ಧಾ ಉತ್ತಮ ಮನೋಭಾವ ಹೊಂದಿ ವಿಜೇತರಾಗಬೇಕು. ಇದಕ್ಕೆ ಪೂರಕವಾಗುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರವನ್ನು ಮಹಾವಿದ್ಯಾಲಯದಲ್ಲಿ ಆರಂಭಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಿಕ್ಯಾಬ್ ಎ.ಆರ್.ಎಸ್.ಐ. ಪದವಿ ಮಹಾವಿದ್ಯಾಲಯದ ಕೌಸ್ಸಿಲ್ ಚೇರ್ಮನ್ ರಿಯಾಜ್ ಫಾರೂಖಿ ಮಾತನಾಡಿ, ಶಿಕ್ಷಣ ಹಾಗೂ ಸಮಾಜ ಸುಧಾರಣೆ ಪರಸ್ಪರ ಪೂರಕವಾಗಿವೆ. ಉನ್ನತ ಅಧ್ಯಯನಗಳು ಪ್ರಾಯೋಗಿಕವಾಗಿ ಸಾಗಬೇಕು. ಈ ಮೂಲಕ ಸಮಾಜ ಸುಧಾರಣೆಗೆ ಕಾರಣವಾಗಬೇಕು. ಸ್ತ್ರೀಯರು ಛಲದಿಂದ ಬಲ ಪಡೆದುಕೊಂಡು ಭದ್ರವಾದ ಜೀವನ ಕಟ್ಟಿಕೊಳ್ಳಬೇಕೆಂದು ಎಂದು ತಿಳಿಸಿದರು.
ಆಸ್ಮಾ ನಾಗರದಿನ್ನಿ, ಸುಸ್ಮಿತಾ ಬಂಡೇನವರ, ನಜೀಫಾ, ಸೌಮ್ಯಾ, ಪ್ರಾಚಾರ್ಯ ಪ್ರೊ.ಎಂ.ಟಿ. ಕೊಟ್ನಿಸ್, ಪ್ರೊ.ತೌಸಿಫ್ ಬಾಗವಾನ, ಪ್ರೊ. ಝಡ್.ಟಿ. ಖಾಜಿ, ಮಲ್ಲಿಕಾರ್ಜುನ ಮೇತ್ರಿ, ಪ್ರೊ.ಸಾದಿಯಾ ಬಾನು, ಪಾಲಕರು, ಪ್ರಾಧ್ಯಾಪಕರು, ವಿಶೇಷ ಆಹ್ವಾನಿತರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.