ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬಂಜಾರ ಕ್ರಾಸ್‌ನಲ್ಲಿರುವ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು (ರಿ)ನ ವಿಜಯಪುರ ಜಿಲ್ಲಾ ಮಹಿಳಾ ಘಟಕ ಆಯೋಜಿಸಿರುವ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಕಮಹಾದೇವಿ ಕಾಲದಲ್ಲಿ ಮಹಿಳೆಯರ ವಿವಾಹದಲ್ಲಿ ಗಂಡನ ಆಯ್ಕೆಯಲ್ಲಿ ಯಾವುದೇ ತರಹದ ಸ್ವಾತಂತ್ರ ಇರಲೇ ಇಲ್ಲ. ಅಂತ ಸಂದರ್ಭದಲ್ಲಿ ತನ್ನ ಗಂಡನ್ನು ತಾನೇ ಆಯ್ಕೆ ಮಾಡುವ ಮೂಲಕ ಗಂಡನ ಆಯ್ಕೆಯ ಸ್ವಾತಂತ್ರವನ್ನು ಪಡೆದುಕೊಳ್ಳುವ ಮೂಲಕ ಮಹಿಳೆಯರಿಗೆ ಆತ್ಮಸ್ಥೈರ್ಯ ಹಾಗೂ ಸ್ವಾಭಿಮಾನದ ಬದುಕಿಗೆ ಭದ್ರ ಅಡಿಪಾಯ ಹಾಕಿದ್ದರು ಎಂದು ವಿವರಿಸಿದರು.ಅಕ್ಕಮಹಾದೇವಿ ನಡೆದ ಹಾದಿ ತುಂಬ ದುರ್ಗಮದ ಹಾದಿಯಾಗಿದ್ದು, ತನ್ನ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ತನ್ನ ವಚನ ಸಾಹಿತ್ಯದ ಮೂಲಕ ಸಮಾನತೆಯ ಸಂದೇಶಗಳನ್ನು ಸಮಾಜಕ್ಕೆ ನೀಡುವ ಮೂಲಕ ದೊಡ್ಡ ಕಾಂತ್ರಿಯನ್ನು ಮಾಡಿದ್ದರು. ಅಂತಹ ಅಕ್ಕಮಹಾದೇವಿಯ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಸಂಸ್ಕಾರದಲ್ಲಿ ಅಂದಿನ ಕಾಲದಲ್ಲಿದ್ದ ಲಿಂಗ ಭೇದ ಇಂದು ಯಾವುದೇ ನಿರ್ಬಂಧವಿಲ್ಲದೇ ಇರುವುದಕ್ಕೆ ಅಕ್ಕಮಹಾದೇವಿಯವರ ಹೋರಾಟವೇ ಕಾರಣವಾಗಿದ್ದು, ಲಿಂಗ ಪೂಜೆ ಮೂಲಕ ಭಗವಂತನನ್ನು ಕಾಣಬೇಕು ಎಂದರು.ಶಿಕ್ಷಕಿ ಸಕಬಾಯಿ ಅಲಬಾಳ ಅತಿಥಿ ಉಪನ್ಯಾಸ ನೀಡಿ ಗುರುಲಿಂಗ ದೇವರಿಂದ ಶಿಕ್ಷಣ ಮತ್ತು ಸಂಸ್ಕಾರ ಪಡೆದ ಅಕ್ಕಮಹಾದೇವಿ, ನೀನೆಂಬುವು ದೇವರ ಸ್ವರೂಪ ಎಂಬ ಆತ್ಮಜ್ಞಾನ ಅಳವಡಿಸಿಕೊಂಡವರು. ಮದುವೆಗೆ ಒತ್ತಾಯ ಬಂದಾಗ ಚನ್ನಮಲ್ಲಿಕಾರ್ಜುನನೇ ತನ್ನ ಪತಿ ಎಂದು ಘೋಷಿಸಿ ಪ್ರಕೃತಿಯಲ್ಲಿಯೇ ದೇವರನ್ನು ಕಂಡ ಅಧ್ಯಾತ್ಮ ಲೋಕದ ವಿಸ್ಮಯರಾದವರು ಅಕ್ಕಮಹಾದೇವಿಯವರು ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಮತ್ತು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಸಾಧಕಿ-2025 ಪ್ರಶಸ್ತಿ ಪುರಸ್ಕೃತೆ ವಿದ್ಯಾ ಕೋಟೆನ್ನವರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕ ಸದಸ್ಯೆ ಶಾರದಾ ಐಹೋಳೆ, ವೀರಶೈವ ಲಿಂಗಾಯತ ಮಹಾಸಭಾದ ಸಂಸ್ಥಾಪಕ ಸದಸ್ಯೆ ಮಲ್ಲಮ್ಮ ಜೋಗುರ, ಮಹಿಳಾ ಸದಸ್ಯೆರಾದ ತ್ರಿವೇಣಿ ಬುರ್ಲಿ, ವಂದನಾ ಲೋಣಿ, ಶಕುಂತಲಾ ಮೋಸಲಗಿ, ಶೈಲಾ ಮೋದಿ ಸೇರಿದಂತೆ ಅತಿಥಿಗಳಾದ ಮಹಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ಶಾರದಾ ಹಿರೇಮಠ, ಶಶಿಕಲಾ ಕೋಟಗಿ ಸೇರಿದಂತೆ ಮಹಿಳೆಯರು ಇದ್ದರು. ಅಕ್ಕಮಹಾದೇವಿ ಬುರ್ಲಿ ಪ್ರಾರ್ಥನೆ ಸಲ್ಲಿಸಿದರು. ಭಾರತಿ ಬುಯ್ಯಾರ್ ಸ್ವಾಗತಿಸಿದರು. ಶಿವಲೀಲಾ ಮಠಪತಿ ವಂದನಾರ್ಪಣೆ ಮಾಡಿದರು. ನೂತನ ಬ್ಯಾಕೋಡ ನಿರೂಪಣೆ ಮಾಡಿದರು.ಗಂಡ, ಮಕ್ಕಳು, ಮನೆ ಎನ್ನುವ ಸಿಮೀತ ಲೋಕದಲ್ಲಿ ಇರದೇ ವಚನ ಸಾಹಿತ್ಯ, ಲಿಂಗ ಪೂಜೆ ಮಾಡಿಕೊಳ್ಳುವ ಮೂಲಕ ತಮ್ಮನ್ನು ತಾವು ಅಧ್ಯಾತ್ಮದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರು ಕನಸು ಕಾಣಿ, ಸಣ್ಣ ಸಣ್ಣ ಕನಸು ಕಾಣದೇ ದೊಡ್ಡ ಕನಸು ಕಾಣುವ ಮೂಲಕ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.
-ಡಾ.ಬನುದೇವಿ ಸಂಕಣ್ಣವರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷೆ.