ಮಹಿಳೆಯರಿಗೆ ಪ್ರೋತ್ಸಾಹ ಬೇಕು, ಕನಿಕರವಲ್ಲ: ಶೀಲಾ

KannadaprabhaNewsNetwork |  
Published : Mar 09, 2026, 01:45 AM IST
ಪೊಟೋ೮ಸಿಪಿಟಿ೧: ತಾಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉದ್ಯೋಗಿನಿ ಕಾರ್ಯಕ್ರಮವನ್ನು ಶೀಲಾ ಯೋಗೇಶ್ವರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಶ್ರೀ ಕ್ಷೇತ್ರದ ವತಿಯಿಂದ ಉದ್ಯೋಗಿನಿ ಯೋಜನೆ ರೂಪಿಸಿರುವ ಕಾರ್ಯ ಶ್ಲಾಘನೀಯ. ಮಹಿಳೆಯರಿಗೆ ಬೇಕಾಗಿರುವ ಸಮಾಜದ ಕನಿಕರವಲ್ಲ, ಸಹಕಾರ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ಯೋಜನೆಯನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ ಎಂದು ಸಮಾಜ ಸೇವಕಿ ಶೀಲಾ ಯೋಗೇಶ್ವರ್ ಕರೆ ನೀಡಿದರು

ಚನ್ನಪಟ್ಟಣ: ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ ಶ್ರೀ ಕ್ಷೇತ್ರದ ವತಿಯಿಂದ ಉದ್ಯೋಗಿನಿ ಯೋಜನೆ ರೂಪಿಸಿರುವ ಕಾರ್ಯ ಶ್ಲಾಘನೀಯ. ಮಹಿಳೆಯರಿಗೆ ಬೇಕಾಗಿರುವ ಸಮಾಜದ ಕನಿಕರವಲ್ಲ, ಸಹಕಾರ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರದ ಯೋಜನೆಯನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ ಎಂದು ಸಮಾಜ ಸೇವಕಿ ಶೀಲಾ ಯೋಗೇಶ್ವರ್ ಕರೆ ನೀಡಿದರು.

ತಾಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉದ್ಯೋಗಿನಿ(ಸ್ವಯಂ ಉದ್ಯೋಗಗಳ ಉಚಿತ ತರಬೇತಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಡಾ.ಮಲ್ಲೇಶ್ ಗುರೂಜೀಯವರು ಧಾರ್ಮಿಕ ಕ್ಷೇತ್ರದಲ್ಲಿ ತಾಲೂಕಿನ ಹೆಸರನ್ನು ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ತಮ್ಮ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಮಹಿಳೆಯರ ಸಬಲೀಕರಣಕ್ಕಾಗಿ ಅವರು ರೂಪಿಸಿರುವ ಉದ್ಯೋಗಿನಿ ಯೋಜನೆ ಶ್ಲಾಘನೀಯ. ನಮ್ಮ ಮಹಿಳೆಯರಲ್ಲಿ ಹಲವಾರು ಕೌಶಲ್ಯಗಳಿರುತ್ತವೆ. ಆದರೆ, ತರಬೇತಿ ಹಾಗೂ ಮಾರ್ಗದರ್ಶನದ ಕೊರತೆಯಿಂದ ಕೌಶಲ್ಯಗಳು ಹೊರಬರುತ್ತಿಲ್ಲ. ಕ್ಷೇತ್ರದ ವತಿಯಿಂದ ನೀಡುತ್ತಿರುವ ಸ್ವಯಂ ಉದ್ಯೋಗಗಳ ಉಚಿತ ತರಬೇತಿಯನ್ನು ಮಹಿಳೆಯರು ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜೀ ಮಾತನಾಡಿ, ಪುರುಷನಷ್ಟೇ ಸಮಾನತೆಯನ್ನು ಹೊಂದಿರುವ ಮಹಿಳೆಯರು ನಮ್ಮ ದೇಶದ ಬಹುದೊಡ್ಡ ಶಕ್ತಿಯಾಗಿದ್ದಾರೆ. ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರದ ವತಿಯಿಂದ ಉದ್ಯೋಗಿನಿ ಯೋಜನೆಯಡಿ ಸ್ವಯಂ ಉದ್ಯೋಗಗಳ ಉಚಿತ ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳೆಯರಲ್ಲಿ ಹಲವಾರು ಪ್ರತಿಭೆಗಳಿರುತ್ತವೆ. ಅವರಿಗೆ ಸೂಕ್ತ ತರಬೇತಿ ನೀಡಿದರೆ ಅವರ ಪ್ರತಿಭೆ ಅನಾವರಣದ ಜೊತೆಗೆ ಆರ್ಥಿಕ ಅಭಿವೃದ್ಧಿಗೂ ಸಹಕಾರವಾಗಲಿದೆ. ಶ್ರೀ ಕ್ಷೇತ್ರದ ಆವರಣದಲ್ಲಿಯೇ ಊಟ, ವಸತಿಯೊಂದಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆದವರು ತಯಾರಿಸುವ ವಸ್ತುಗಳನ್ನು ಶ್ರೀ ಕ್ಷೇತ್ರವೇ ಖರೀದಿಸುತ್ತದೆ. ಆಸಕ್ತ ಮಹಿಳೆಯರು ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಮಲ್ಲೇಶ್ ಗುರೂಜೀ ಮನವಿ ಮಾಡಿದರು.

ಎಂ.ಕೆ.ದೊಡ್ಡಿ ಪಿಎಸ್‌ಐ ಸಹನಾ ಪಾಟೀಲ್‌, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಚಾಮುಂಡೇಶ್ವರಿ ಬಸವಪ್ಪ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಾಬು, ಸಮಾಜ ಸೇವಕಿ ರಮ್ಯ ಜಗತ್‌, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಜ್ಯೋತಿ ಪ್ರಕಾಶ್ ಇತರರಿದ್ದರು.

ಪೊಟೋ೮ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಉದ್ಯೋಗಿನಿ ಕಾರ್ಯಕ್ರಮವನ್ನು ಶೀಲಾ ಯೋಗೇಶ್ವರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಪಿಎಸ್‌ಸಿ ಪರೀಕ್ಷೆಯಲ್ಲಿ 554ನೇ ರ್‍ಯಾಂಕ್ ಪಡೆದ ಧನಂಜಯಗೆ ಅಭಿನಂದನೆ
ಪರೀಕ್ಷೆಗೆ ಭಯಬೇಡ, ಆರೋಗ್ಯದ ಕಡೆಗೂ ಗಮನ ಹರಿಸಿ: ಪಿ.ಎಂ.ನರೇಂದ್ರಸ್ವಾಮಿ