ಮಹಿಳೆಯರಿಗೆ ಹಿಂಸೆಯಿಂದ ಮುಕ್ತಿ ಸಂವೇದನಾಶೀಲನತೆ ಅಗತ್ಯ

KannadaprabhaNewsNetwork |  
Published : Mar 09, 2025, 01:47 AM IST
ತುಮಕೂರಿನ ಸ್ಲಂ ಜನಾಂದೋಲನದಿಂದ ಮಹಿಳಾ ದಿನ ಆಚರಿಸಲಾಯಿತು. | Kannada Prabha

ಸಾರಾಂಶ

ದುಡಿಯುವ ಮಹಿಳೆಯರಿಗೆ ಕೆಲಸದ ವಲಯಗಳಲ್ಲಿ ಹಿಂಸೆಯಿಂದ ಮುಕ್ತಿ ಮತ್ತು ಸಂವೇದನಾಶೀಲ ಸಮಾಜದ ಅಗತ್ಯವಿದೆ ಎಂದು ಹೈಕೋರ್ಟ್ ವಕೀಲರು ಹಾಗೂ ಬಹುತ್ವ ಕರ್ನಾಟಕ ಸಂಚಾಲಕರಾದ ಪೂರ್ಣ ರವಿಶಂಕರ್ ಅಭಿಪ್ರಾಯಪಟ್ಟರು ಪ್ರತಿಪಾದಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುದುಡಿಯುವ ಮಹಿಳೆಯರಿಗೆ ಕೆಲಸದ ವಲಯಗಳಲ್ಲಿ ಹಿಂಸೆಯಿಂದ ಮುಕ್ತಿ ಮತ್ತು ಸಂವೇದನಾಶೀಲ ಸಮಾಜದ ಅಗತ್ಯವಿದೆ ಎಂದು ಹೈಕೋರ್ಟ್ ವಕೀಲರು ಹಾಗೂ ಬಹುತ್ವ ಕರ್ನಾಟಕ ಸಂಚಾಲಕರಾದ ಪೂರ್ಣ ರವಿಶಂಕರ್ ಅಭಿಪ್ರಾಯಪಟ್ಟರು ಪ್ರತಿಪಾದಿಸಿದರು.ತುಮಕೂರು ಸ್ಲಂ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಂವಿಧಾನದ ನೈತಿಕತೆ ಮತ್ತು ದುಡಿಯುವ ಮಹಿಳೆಯರ ದೃಷ್ಠಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಶೇ 50 ಮಹಿಳೆಯರಿಗೆ ಸಮಾನ ಅವಕಾಶಗಳು ಬೇಕಿದೆ. ಸಂವಿಧಾನದಲ್ಲಿ ಮಹಿಳೆಯರಿಗೆ ವ್ಯಕ್ತಿಗೌರವ, ಸ್ವಾತಂತ್ರ್ಯ , ಸಮಾನತೆ, ಘನತೆಯನ್ನು ಖಾತ್ರಿ ನೀಡಿದೆ ಎಂದರು. ಆಶಯ ಮಾತುಗಳನ್ನಾಡಿದ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘದ ಸಂಚಾಲಕರಾದ ಅನುಪಮ ಕುಟುಂಬದ ಅಸ್ತಿತ್ವ ಸಶಕ್ತಿ ಸಮಾಜದ ಮತ್ತು ಬಲಿಷ್ಠ ರಾಷ್ಟ್ರದ ಆಧಾರವಾಗಿ ಸ್ತ್ರೀಯರನ್ನು ನೋಡಬೇಕು. ಮಹಿಳಾ ಮುನ್ನಡೆಯನ್ನು ದುಡಿಯುವ ಮಹಿಳೆಯರ ದಿನವಾಗಿ ನೋಡಬೇಕು, ಅಂದರೆ ಮಹಿಳೆಯರ ಆರೋಗ್ಯ ಸ್ಥಿತಿ ಜನನ ಸಂಬಂದೀ ಮರಣಗಳು ನಿಲ್ಲಬೇಕು ಎಂದರು.ಅಪೌಷ್ಠಿಕತೆ ಮತ್ತು ಹಸಿವಿನಿಂದ ಸಾಯಿತ್ತಿರುವ ಮಹಿಳೆಯರಿಗೆ ಉತ್ತಮ ಆಹಾರ, ಆರೋಗ್ಯ, ದುಡಿಮೆ, ಕೂಲಿ ದೊರೆಯಬೇಕಿದೆ, ಹೆಣ್ಣಿಗೊಂದು ಕೂಲಿ, ಗಂಡಿಗೊಂದು ಕೂಲಿ, ಈ ದೇಶದಿಂದ ಹೋಗಲಾಡಿಸಬೇಕು. ದುಡಿಯುವ ಮಹಿಳೆಯರಿಗೂ ಘನತೆಯಿಂದ ಬದುಕುಕಟ್ಟಿಕೊಳ್ಳುವ ವಾತಾವರಣವನ್ನು ಈ ದೇಶದಲ್ಲಿ ನಿರ್ಮಾಣವಾಗಬೇಕಿದೆ ಎಂದರು. ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘದ ಗಂಗ, ಗುಲ್ನಾಜ್, ಪೂರ್ಣಿಮಾ, ಮಂಗಳಮ್ಮ, ಹನುಮಕ್ಕ, ಹಾಗೂ ಜೆ.ಪಿ ಪ್ರೌಢಶಾಲೆಯ ಶಿಕ್ಷಕರಾದ ಪಂಕಜ, ಪಲ್ಲವಿ ಮತ್ತು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಶಂಕರ್‌ಗೌಡ, ರಾಮಕೃಷ್ಣ, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಸುನಂದಮ್ಮ, ರತ್ನಮ್ಮ, ಪೂಜ, ಸಲೀಂಖಾನ್ ಮುಂತಾದವರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ