ಹೊಸಕೋಟೆ: ಮಹಿಳೆಯರು ಸಂಸಾರ ನಿರ್ವಹಣೆ ಜೊತೆಜೊತೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಒಂದು ಹೆಜ್ಜೆ ಮುಂದಡಿ ಇಡಬೇಕು ಎಂದು ಟೀಮ್ ಎಸ್‌ಬಿಜಿ ಸಂಚಾಲಕಿ ಪ್ರತಿಭಾ ಶರತ್ ಬಚ್ಚೇಗೌಡ ತಿಳಿಸಿದರು.
ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡರು ಪ್ರತಿಭಾ ಪುರಸ್ಕಾರ ಪ್ರಧಾನ ಮಾಡಲಿದ್ದಾರೆ. ಈ ಮೂಲಕ ಗ್ರಾಮೀಣ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲಾಗುವುದು ಎಂದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ಸುಬ್ರಹ್ಮಣಿ ಮಾತನಾಡಿ, ಗ್ರಾಮೀಣ ಮಹಿಳೆಯರನ್ನು ಸಂಘಟಿಸುವುದು ಹಾಗೂ ಸಮುದಾಯ ಕಾರ್ಯಕ್ರಮಗಳಲ್ಲಿ ಧೈರ್ಯವಾಗಿ ಭಾಗವಹಿಸಲು ಗ್ರಾಪಂ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಆಡಳಿತಾಧಿಕಾರಿ ಡಾ.ಮಂಜುನಾಥ್, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ನಾರಾಯಣಗೌಡ, ಪಿಡಿಒ ಸುಬ್ರಮಣಿ, ಕಾರ್ಯದರ್ಶಿ ಚೌಡರೆಡ್ಡಿ, ಗ್ರಾಪಂ ಮಾಜಿ ಸದಸ್ಯ ಕಣ್ಣೂರಹಳ್ಳಿ ಮುನಿಯಪ್ಪ, ಕೆಪಿಸಿಸಿ ಪರಿಶಿಷ್ಠ ವಿಭಾಗದ ರಾಜ್ಯ ಸಂಚಾಲಕ ಜಿನ್ನಾಗರ ಜಗನ್ನಾಥ್ ಇತರರು ಹಾಜರಿದ್ದರು.
ಹೊಸಕೋಟೆ ತಾಲೂಕಿನ ದೊಡ್ಡಘಟ್ಟಿಗನಬ್ಬೆ ಗ್ರಾಪಂ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟವನ್ನು ಟೀಮ್ ಎಸ್‌ಬಿಜಿ ಸಂಚಾಲಕಿ ಪ್ರತಿಭಾ ಶರತ್ ಉದ್ಘಾಟಿಸಿದರು.