ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರಮಿಸಿ: ಡಿಡಿಪಿಐ ಎಸ್‌.ಎನ್‌. ಹುಗ್ಗಿ

KannadaprabhaNewsNetwork |  
Published : Jun 16, 2025, 01:17 AM IST
ಫೋಟೊ ಶೀರ್ಷಿಕೆ:14ಹೆಚ್‌ವಿಆರ್6 ಹಾವೇರಿ: ನಗರದ ಜಿಲ್ಲಾ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಜಿಲ್ಲಾ ಮಟ್ಟದ `ಶೈಕ್ಷಣಿಕ ಚಿಂತನಾ ಸಭೆ' ನಡೆಯಿತು. | Kannada Prabha

ಸಾರಾಂಶ

ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಶಿಕ್ಷಕರಸ್ನೇಹಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ಎಲ್ಲ ಶಿಕ್ಷಕರಿಗೂ ಅನುಕೂಲವಾಗುವ ರೀತಿಯಲ್ಲಿ ನಾವೆಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತೇವೆ ಎಂದು ಎಸ್.ಎನ್. ಹುಗ್ಗಿ ತಿಳಿಸಿದರು.

ಹಾವೇರಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಹಾಗೂ ಗುಣಾತ್ಮಕ ಕಲಿಕೆಗಾಗಿ ಜಿಲ್ಲೆಯ ಶಿಕ್ಷಕರು ಬದ್ಧತೆಯಿಂದ ಶ್ರಮಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್. ಹುಗ್ಗಿ ತಿಳಿಸಿದರು.ನಗರದ ಜಿಲ್ಲಾ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಚಿಂತನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ಶಿಕ್ಷಕರಸ್ನೇಹಿಯಾಗಿ ಕೆಲಸ ಕಾರ್ಯಗಳನ್ನು ಮಾಡುತ್ತೇವೆ. ಎಲ್ಲ ಶಿಕ್ಷಕರಿಗೂ ಅನುಕೂಲವಾಗುವ ರೀತಿಯಲ್ಲಿ ನಾವೆಲ್ಲ ಅನುಕೂಲತೆಗಳನ್ನು ಮಾಡಿಕೊಡುತ್ತೇವೆ ಎಂದರು.ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಶಿಡೇನೂರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು, ಹೆಚ್ಚುವರಿ ಪ್ರಕ್ರಿಯೆ, ವಲಯ ವರ್ಗಾವಣೆ ಕುರಿತು, ವರ್ಗಾವಣೆಯಿಂದ ಆಗುವ ಅನಾನುಕೂಲತೆಗಳು, ಸಿಆರ್‌ಪಿ, ಬಿಆರ್‌ಪಿ, ಇಸಿಒ ಅವರ ಕೌನ್ಸಿಲಿಂಗ್, ಎಸ್‌ಎಟಿಎಸ್, ಒಟಿಪಿಯಿಂದಾಗುವ ತೊಂದರೆಗಳು, ಅತಿವೃಷ್ಟಿಯಾದಾಗ ಶಾಲೆಗಳಿಗೆ ರಜೆ ನೀಡುವ ಕುರಿತು, ಶೈಕ್ಷಣಿಕ ವಿಚಾರಗಳು ಹಾಗೂ ಮುಖ್ಯಶಿಕ್ಷಕರಿಗೆ ದಿನನಿತ್ಯ ಆಗುತ್ತಿರುವ ಕೆಲಸದ ಒತ್ತಡದ ಕುರಿತು ಡಿಡಿಪಿಐ ಹಾಗೂ ಎಲ್ಲಾ ಬಿಇಒ ಅವರಿಗೆ ಮನವಿ ಸಲ್ಲಿಸಿದರು.ಸಭೆಯಲ್ಲಿ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಎಚ್. ಪಾಟೀಲ, ಎಸ್.ಎಸ್. ಅಡಿಗ, ಎಸ್.ಜಿ. ಕೋಟಿ, ಎನ್. ಶ್ರೀಧರ್, ವಿ.ವಿ. ಸಾಲಿಮಠ, ಎಂ.ಬಿ. ಅಂಬಿಗೇರ, ಎಂ.ಎಫ್. ಬಾರ್ಕಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಬಿ. ಅನುರಾಧ, ಎಂ.ಎಸ್. ಬಡಿಗೇರ್, ಎನ್.ಐ. ಶೇತಸನದಿ, ಆರ್.ವೈ. ಗೋಣೆಪ್ಪನವರ, ಇ.ಸಿ. ಅಗಸಿಬಾಗಿಲ, ಅಶೋಕ್ ಹಾಡೋರಿ, ತಾಲೂಕು ಪದಾಧಿಕಾರಿಗಳಾದ ಸಿ.ಜಿ. ಪಾಟೀಲ, ಮಖ್ಬೂಲ್ ಲಿಂಗದಳ್ಳಿ, ಬಿ.ಎಸ್. ಅರಳಿ, ರಮೇಶ ಪೂಜಾರ, ಜಗದೀಶ ಜೋಗಿಹಳ್ಳಿ, ಸರಸ್ವತಿ ಅಜ್ಜಪ್ಪಗೌಡ್ರ, ಸುಧಾ ಎನ್. ಪಾಟೀಲ, ಎನ್.ಎಂ. ಕರಿಗಾರ್, ಚಂದ್ರಣ್ಣ ಸಣ್ಣಗೌಡ್ರ, ಎಸ್.ಟಿ. ಕೋಟಿಹಾಳ, ಎಚ್.ಎಂ. ಸುತಾರ, ಎಫ್.ಸಿ. ಕಾಡಪ್ಪಗೌಡ್ರ, ಶಿವು ಆಲದಕಟ್ಟಿ ಇತರರಿದ್ದರು. ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಶಿಡೇನೂರ ಜಿಲ್ಲೆಯ ಶಿಕ್ಷಕರ ಸಮಸ್ಯೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್. ಚಲ್ಲಾಳ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ