ಕನ್ನಡಪ್ರಭ ವಾರ್ತೆ ಗೋಕಾಕ
ಬುಧವಾರ ನಗರದ ಎನ್‌ಎಸ್‌ಎಫ್ ಕಚೇರಿಯಲ್ಲಿ ಗೋಕಾಕ ಮತ್ತು ಅರಬಾವಿ ಮಂಡಲ ಜಂಟಿಯಾಗಿ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂಬುದು ಇಡೀ ದೇಶದ ಜನರ ಆಶಯವಾಗಿದೆ ಎಂದು ಹೇಳಿದರು.
ಪ್ರಧಾನಿಯಾಗಿ ಮೋದಿ ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ. ಅವರ ನೂರಾರು ಜನೋಪಯೋಗಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ. ವಿಶ್ವದಲ್ಲಿಯೇ ಭಾರತ ಸಶಕ್ತ ಹಾಗೂ ಬಲಿಷ್ಠ ರಾಷ್ಟ್ರವಾಗಲು ಕಾರಣರಾಗಿದ್ದಾರೆ. ಮೋದಿಯವರಿಂದ ಜಗತ್ತಿನ ಬಲಾಢ್ಯ ರಾಷ್ಟ್ರಗಳು ಪ್ರೇರಣೆಗೊಂಡು ಭಾರತದ ಮಾದರಿಯಲ್ಲಿ ಆಡಳಿತ ನಡೆಸುತ್ತಿವೆ. ಜೆಜೆಎಂ, ಆಯುಷ್ಮಾನ್ ಭಾರತ, ಉಜ್ವಲಾ ಯೋಜನೆ, ಕಿಸಾನ್ ಸಮ್ಮಾನ, ಪಿಎಂ ವಿಶ್ವಕರ್ಮ ಯೋಜನೆ, ನಾರಿ ಶಕ್ತಿ ಸೇರಿದಂತೆ ನೂರಾರು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಹೇಳಿದರು.ಅರಬಾವಿ ಮತಕ್ಷೇತ್ರಕ್ಕೆ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಶುದ್ಧ ಕುಡಿಯುವ ನೀರಿನ ಜಲ ಜೀವನ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ₹438 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದ ಪ್ರತಿ ಮನೆ - ಮನೆಗೆ ನಳಗಳನ್ನು ಅಳವಡಿಸಲಾಗುತ್ತಿದೆ. ಅರಬಾವಿ, ಕಲ್ಲೋಳ್ಳಿ, ನಾಗನೂರ ಪಪಂ ಮತ್ತು ಮೂಡಲಗಿ ಪುರಸಭೆಗೆ ಕುಡಿಯುವ ನೀರಿಗಾಗಿ ₹140 ಕೋಟಿ ಅನುದಾನ ಬಂದಿದೆ. ಕೇಂದ್ರದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇವುಗಳನ್ನು ಮತದಾರರಿಗೆ ಮನವರಿಕೆ ಮಾಡಲು ಕಾರ್ಯಕರ್ತರು ಸಿದ್ಧರಾಗುವಂತೆ ಹೇಳಿದರು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ದಿ.ಪಂಡಿತ ಜವಾಹರಲಾಲ ನೆಹರೂ ಅವರು ಮೀಸಲಾತಿ ನೀಡಲಿಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ. ಅಂದಿನ ಪ್ರಧಾನಿಯಾಗಿದ್ದ ಪಂಡಿತ ನೆಹರೂ ಅವರು ಈ ಬಗ್ಗೆ ಪ್ರತಿ ರಾಜ್ಯಗಳಿಗೆ ಪತ್ರಗಳನ್ನು ಬರೆದಿದ್ದರು ಎಂದು ಮೋದಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ ಎಂದು ಹೇಳಿದರು.
ಅರಬಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಅಭಿಯಾನದ ಜಿಲ್ಲಾ ಸಂಚಾಲಕ ವಿಜಯ ಗುಡ್ಡದಾರಿ, ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಎಲ್.ಬಬಲಿ, ಮಹಾಂತೇಶ ಕುಡಚಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.