)
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೋಗಿಲು ನಿವಾಸಿ ಕಿರಣ್ (23) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಮಾಲಿಕ ಆನಂದ್ ಬಂಧನವಾಗಿದೆ. 2 ದಿನಗಳಿಂದ ಮನೆಯಲ್ಲಿ ಕೂಡಿ ಹಾಕಿ ಹಲ್ಲೆಯಿಂದ ಅರೆಪ್ರಜ್ಞನಾಗಿದ್ದ ಕಿರಣ್ನನ್ನು ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ಆನಂದ್ ಕರೆತಂದು ದಾಖಲಿಸಿದ್ದಾರೆ. ಆದರೆ ಆತನನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಕೂಡಲೇ ಈ ಘಟನೆ ಬಗ್ಗೆ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ಪೊಲೀಸರು, ಅಲ್ಲೇ ಇದ್ದ ಆನಂದ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯ ಬಯಲಾಗಿದೆ.
ಏಕಾಂತದಲ್ಲಿದ್ದ ಮಗಳ ಕಂಡು ಅಪ್ಪ ಕೆಂಡಆರೋಪಿ ಆನಂದ್ ಮೂಲತಃ ತಮಿಳುನಾಡಿನವನಾಗಿದ್ದು, ಕೋಗಿಲು ಸಮೀಪ ತನ್ನ ಪತ್ನಿ ಹಾಗೂ ಮಕ್ಕಳ ಜತೆ ಆತ ನೆಲೆಸಿದ್ದ. ಅಲ್ಲೇ ರಸ್ತೆ ಬದಿಯಲ್ಲಿ ಸಿಹಿ ಜೋಳ (ಸ್ವಿಟ್ ಪಾಪ್ ಕಾರ್ನ್) ಮಾರಾಟ ಮಾಡುತ್ತ ಆನಂದ್ ಜೀವನ ಸಾಗಿಸುತ್ತಿದ್ದ. ಈತನ ಬಳಿ ಕೇರಳ ಮೂಲದ ಕಿರಣ್ ಕೆಲಸ ಮಾಡುತ್ತಿದ್ದ. ಸಭ್ಯ ನಡವಳಿಕೆಯಿಂದ ಮಾಲೀಕನ ಕುಟುಂಬದ ವಿಶ್ವಾಸವನ್ನು ಕಿರಣ್ ಸಂಪಾದಿಸಿದ್ದ. ಈ ಒಡನಾಟದಲ್ಲೇ ಆನಂದ್ ಪುತ್ರಿ ಜತೆ ಆತನಿಗೆ ಪ್ರೇಮವಾಯಿತು. ಮೈಸೂರಿನಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚಿಗೆ ಈ ಪ್ರೇಮದ ವಿಷಯವು ಆನಂದ್ ಗಮನಕ್ಕೆ ಬಂದಿತು. ಆದರೆ ಬಹಿರಂಗವಾಗಿ ಹೇಳದೆ ಗೌಪ್ಯವಾಗಿ ಮಗಳು ಹಾಗೂ ಕೆಲಸಗಾರ ಮೇಲೆ ಆತ ನಿಗಾವಹಿಸಿದ್ದ.
ತಕ್ಷಣವೇ ಮಗಳನ್ನು ಪತ್ನಿ ಜತೆ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆ ಕಳುಹಿಸಿದ ಆತ, ತನ್ನ ಮನೆಯಲ್ಲೇ ಕೆಲಸಗಾರನ್ನು ಕೂಡಿ ಹಾಕಿ ಮನಬಂದಂತೆ ಥಳಿಸಿದ್ದಾನೆ. ಬ್ಯಾಟ್ ಹಾಗೂ ಪೈಪ್ಗಳಿಂದ ಆತ ಚಚ್ಚಿದ್ದಾನೆ. 2 ದಿನಗಳ ನಿರಂತರ ಹಲ್ಲೆಯಿಂದ ಕಿರಣ್ ನಿತ್ರಾಣನಾಗಿದ್ದಾನೆ. ಆಗ ಮಂಗಳವಾರ ರಾತ್ರಿ ಆತನ ಕಿಬ್ಬೊಟ್ಟೆಗೆ ಆನಂದ್ ಒದ್ದಿದ್ದಾನೆ. ಈ ಹೊಡೆತಕ್ಕೆ ಕಿರಣ್ ಅರೆಪ್ರಜ್ಞನಾಗಿ ಕುಸಿದಿದ್ದಾನೆ.