ಕಾರ್ಮಿಕರು ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡೆಯಿರಿ

KannadaprabhaNewsNetwork |  
Published : Jul 22, 2026, 01:15 AM IST
ಸುರಪುರದ ತಿಮ್ಮಾಪುರ ಸಮೀಪದ ಸವಿತಾ ಭವನದಲ್ಲಿ ಭಾನುವಾರ ನಡೆದ ಎನ್‌ಸಿಎಲ್ ಕಾರ್ಯಕ್ರಮದಲ್ಲಿ ಇಂಡಿಯನ್ ವೆಲ್ಡರ್ ವರ್ಕರ್ಸ್ ಕಮಿಟಿ ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

Workers can get information about the projects and take advantage of them.

-ಉದ್ಘಾಟನೆ

---

-ಎನ್‌ಸಿಎಲ್ ಕಾರ್ಯಕ್ರಮದಲ್ಲಿ ಇಂಡಿಯನ್ ವೆಲ್ಡರ್ ವರ್ಕರ್ಸ್ ಕಮಿಟಿ ಸದಸ್ಯರಿಗೆ ಗುರುತಿನ ಚೀಟಿ

-----

ಕನ್ನಡಪ್ರಭ ವಾರ್ತೆ ಸುರಪುರ

ಸರ್ಕಾರ ಜಾರಿಗೆ ತಂದಿರುವ ವಿವಿಧ ಕಾರ್ಮಿಕ ಕಲ್ಯಾಣ ಯೋಜನೆಗಳ ಕುರಿತು ಸೂಕ್ತ ಮಾಹಿತಿ ಪಡೆದು ಅವುಗಳ ಸದುಪಯೋಗವನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ (ಎನ್‌ಸಿಎಲ್) ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿ ಸಂಗಾವಿ ಹೇಳಿದರು.

ನಗರದ ತಿಮ್ಮಾಪುರ ಸಮೀಪದ ಮರಗಮ್ಮ ದೇವಸ್ಥಾನದ ಬಳಿಯ ಸವಿತಾ ಭವನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ (ಎನ್‌ಸಿಎಲ್) ಜಿಲ್ಲಾ ಹಾಗೂ ತಾಲೂಕು ಸಮಿತಿಯಿಂದ ಇಂಡಿಯನ್ ವೆಲ್ಡರ್ ವರ್ಕರ್ಸ್ ಕಮಿಟಿ, ಸುರಪುರವನ್ನು ಎನ್‌ಸಿಎಲ್‌ಗೆ ಸಂಯೋಜಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ನೋಂದಾಯಿತ ಕಾರ್ಮಿಕರಿಗೆ 60 ವರ್ಷ ನಂತರ ಮಾಸಿಕ ಪಿಂಚಣಿ, ಆರೋಗ್ಯ ಭಾಗ್ಯ ಯೋಜನೆಯಡಿ ವೈದ್ಯಕೀಯ ನೆರವು, ಕಾರ್ಮಿಕರ ಹಾಗೂ ಅವರ ಇಬ್ಬರು ಮಕ್ಕಳ ವಿವಾಹಕ್ಕೆ ಸಹಾಯಧನ, 8ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿವೇತನ, ಪ್ಲಂಬರ್, ಎಲೆಕ್ಟ್ರಿಷಿಯನ್, ಪೇಂಟರ್ ಸೇರಿದಂತೆ ವಿವಿಧ ವೃತ್ತಿಯ ಕಾರ್ಮಿಕರಿಗೆ ಶ್ರಮ ಸಾಮರ್ಥ್ಯ ಯೋಜನೆಯಡಿ ಉಚಿತ ಟೂಲ್ ಕಿಟ್ ಹಾಗೂ ಕೌಶಲ್ಯ ತರಬೇತಿ ಸೇರಿದಂತೆ ಅನೇಕ ಸೌಲಭ್ಯಗಳು ಲಭ್ಯವಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ ದೇವೇಗೌಡ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಇಂಡಿಯನ್ ವೆಲ್ಡರ್ ವರ್ಕರ್ಸ್ ಕಮಿಟಿಯ ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ಜಿಲ್ಲಾಧ್ಯಕ್ಷ ಬಸವರಾಜ ಎಂ. ಪೂಜಾರಿ ದಿವಳಗುಡ್ಡ, ಶಿವಶರಣಪ್ಪ ಹೆಡಗಿನಾಳ, ಶ್ರೀನಿವಾಸ ಯಾದವ ತಿಮ್ಮಾಪುರ, ಇಂಡಿಯನ್ ವೆಲ್ಡರ್ ವರ್ಕರ್ಸ್ ಕಮಿಟಿ ಅಧ್ಯಕ್ಷ ಅಮೂಲ ಧೋತ್ರೆ, ಉಪಾಧ್ಯಕ್ಷ ಪಡೇಸಾಬ್ (ರಫೀಕ್ ಬೊನಾಳ), ಕಾರ್ಯದರ್ಶಿ ಮೊಹಮ್ಮದ್ ಜಮೀರ್, ಉಪ ಕಾರ್ಯದರ್ಶಿ ಸಚಿನ್ ದರ್ಶನಕರ್, ಹಿರಿಯ ಮುಖಂಡರಾದ ರಮೇಶ ಚವ್ಹಾಣ, ಮಲ್ಲಿಕಾರ್ಜುನ ಕುಂಬಾರಪೇಟ, ಖಜಾಂಚಿ ಉದಯಕುಮಾರ ಟೊಣಪೆ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಬಾದ್ಯಾಪುರ, ಕಾರ್ಮಿಕ ಇಲಾಖೆಯ ಡಿ.ಇ.ಒ. ಶರಣಬಸಪ್ಪ ಬೆಲ್ಲದ್ ಹಾಗೂ ಕಲಬುರಗಿ ಜಿಲ್ಲಾಧ್ಯಕ್ಷ ಮೊಸಿನ್ ಪಟೇಲ್ ಉಪಸ್ಥಿತರಿದ್ದರು. ರಾಜು ಕಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸುರಪುರ ತಾಲೂಕಿನ ಪ್ರಧಾನ ಕಾರ್ಯದರ್ಶಿ ಹಣಮಂತ ಟೊಣಪೆ, ಗ್ರಾಮ ಘಟಕದ ಅಧ್ಯಕ್ಷ ಅಯ್ಯಪ್ಪ ಹೊಸಮನಿ, ಐವೂರು ಗ್ರಾಮದ ಪ್ರಧಾನ ಕಾರ್ಯದರ್ಶಿ ಮಹಿಬೂಬ ಜಮದಾರ, ವಡಗೇರಾ ತಾಲೂಕಿನ ಅಧ್ಯಕ್ಷ ಮೌನೇಶ ಬಡಿಗೇರ ಸೇರಿದಂತೆ ಸುರಪುರ, ಹುಣಸಗಿ, ಶಹಾಪುರ, ವಡಗೇರಾ, ಯಾದಗಿರಿ, ಯಡ್ರಾಮಿ, ಜೇವರ್ಗಿ, ಕಲಬುರಗಿ ಹಾಗೂ ಗುರುಮಿಠಕಲ್ ಭಾಗಗಳ ಕಾರ್ಮಿಕ ಮುಖಂಡರು ಮತ್ತು ಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-----

ಫೋಟೋ

ಸುರಪುರದ ತಿಮ್ಮಾಪುರ ಸಮೀಪದ ಸವಿತಾ ಭವನದಲ್ಲಿ ಭಾನುವಾರ ನಡೆದ ಎನ್‌ಸಿಎಲ್ ಕಾರ್ಯಕ್ರಮದಲ್ಲಿ ಇಂಡಿಯನ್ ವೆಲ್ಡರ್ ವರ್ಕರ್ಸ್ ಕಮಿಟಿ ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ಜಿಡಿಪಿಗೆ ಹೈನುಗಾರಿಕೆಯಿಂದ ಶೇ. ೨೫ ರಷ್ಟು ಕೊಡುಗೆ
ನೀರನ್ನು ಮಿತವಾಗಿ ಬಳಸಲು ಮನವಿ