ಕಾರ್ಮಿಕರಿಗೆ ಕಾನೂನು ಅರಿವು ಇರಬೇಕು

KannadaprabhaNewsNetwork |  
Published : May 05, 2024, 02:01 AM IST
ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾಲು ಬಹುದೊಡ್ಡದು.  | Kannada Prabha

ಸಾರಾಂಶ

ಕಾರ್ಮಿಕರ ಶ್ರಮವೇ ಕಾರ್ಖಾನೆ ಲಾಭಾಂಶವಾಗಿದೆ. ಅವರಿಗೆ ಸೇವಾ ಭದ್ರತೆ, ಅರೋಗ್ಯ ವಿಮೆ, ರಜೆ ಸೌಲಭ್ಯಗಳು ನೀಡಬೇಕು. ಸಕಾಲಕ್ಕೆ ವೇತನ ನೀಡಬೇಕು. ಕಾರ್ಮಿಕರಿಗೆ ನ್ಯಾಯಲದಲ್ಲಿ ಉಚಿತವಾಗಿ ಕಾನೂನು ಸೇವೆ ಸೌಲಭ್ಯವಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಹಗಲಿರುಳು ದುಡಿಯುವ ಕಾರ್ಮಿಕರ ಯೋಗಕ್ಷೇಮ ನೋಡಿಕೊಳ್ಳುವುದು ಕಾರ್ಖಾನೆ ಮಾಲೀಕರ ಕರ್ತವ್ಯ ಹಾಗೂ ಅವರ ಹಕ್ಕುಗಳಿಗೆ ಎಂದಿಗೂ ಚ್ಯುತಿ ಆಗಬಾರದು ಎಂದು ಹಿರಿಯ ಶ್ರೇಣಿ ನ್ಯಾಯಧೀಶರಾದ ವಿಜಯದೇವರಾಜ ಅರಸು ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಕುಡುಮಲ ಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಜಾಕಿ ಕಾರ್ಖಾನೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕ ದಿನಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಮಿಕರಿಗೆ ಸೇವಾ ಭದ್ರತೆ

ನಿತ್ಯ ಕಷ್ಟಕರವಾದ ಕೆಲಸದಲ್ಲಿ ಬಾಗಿಯಾಗುವ ಕಾರ್ಮಿಕರು ನಿಜವಾದ ಶ್ರಮಿಕರು. ನಮ್ಮ ದೇಶದಲ್ಲಿ1989ರಲ್ಲಿ ಮೊದಲ ಭಾರಿಗೆ ಮದ್ರಾಸ್‌ನಲ್ಲಿ ಕಾರ್ಮಿಕ ದಿನಚರಣೆ ಅಚರಣೆ ಮಾಡಲಾಯಿತು. ಕಾರ್ಮಿಕರ ಶ್ರಮವೇ ಕಾರ್ಖಾನೆ ಲಾಭಾಂಶವಾಗಿದೆ. ಅವರಿಗೆ ಸೇವಾ ಭದ್ರತೆ, ಅರೋಗ್ಯ ವಿಮೆ, ರಜೆ ಸೌಲಭ್ಯಗಳು ನೀಡಬೇಕು. ಸಕಾಲಕ್ಕೆ ವೇತನ ನೀಡಬೇಕು ಎಂದ ಅವರು, ಕಾರ್ಮಿಕರಿಗೆ ನಮ್ಮ ನ್ಯಾಯಲದಲ್ಲಿ ಉಚಿತವಾಗಿ ಕಾನೂನು ಸೇವೆ ದೊರೆಯಲಿದೆ. ಅಗತ್ಯವುಳ್ಳವರು ಬಳಸಿಕೊಳ್ಳಬಹುದು ಎಂದು ತಿಳಿಸಿದರು. ಪ್ರಧಾನ ನ್ಯಾಯಧೀಶರಾದ ಪಿ.ಎಂ.ಸಚಿನ್ ಮಾತನಾಡಿ ದುಡಿಯುವ ವರ್ಗದವರ ಮೇಲಿನ ದಬ್ಬಾಳಿಕೆ ತಡೆಗಟ್ಟಿ ಅವರಿಗೆ ಅವರ ಶಕ್ತಿಯ ಅರಿವು ಮೂಡಿಸಿ ಅವರ ಏಳಿಗೆಗೆ ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲು ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತದೆ. ಒಂದು ದೇಶದ ಪ್ರಗತಿಯಲ್ಲಿ ಕಾರ್ಮಿಕರ ಪಾಲು ಬಹುದೊಡ್ಡದು. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಕಾರ್ಮಿಕರ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದರು.ಕಾನೂನು ಅರಿವು ಅಗತ್ಯ

ಸಂಪನ್ಮೂಲ ವ್ಯಕ್ತಿ ಹಿರಿಯ ವಕೀಲ ವಿ.ಗೋಪಾಲ್ ಮಾತನಾಡಿ, ಕಾರ್ಮಿಕರು ಶಿಕ್ಷಣ ಪಡೆದರೆ ಮಾತ್ರ ನಿಮ್ಮ ಹಕ್ಕುಗಳು ತಿಳಿಯಲು ಸಾಧ್ಯ. ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣವಂಚಿತರನ್ನಾಗಿಸಬಾರದು. ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಕಾರ್ಮಿಕ ನಿರೀಕ್ಷಕ ಟಿ. ಬಿ. ಸತೀಶ್ ಮಾತನಾಡಿ, 1960ರ ಅಸುಪಾಸಿನಲ್ಲಿ ಕಾರ್ಮಿಕರ ಬದುಕು ದುಸ್ತರವಾಗಿತ್ತು. ಅಂದಿನ ಕಾರ್ಮಿಕ ಸಂಘಟನೆಗಳು ಉಗ್ರ ಹೋರಾಟ ನಡೆಸಿದ ಫಲವಾಗಿ ಇಂದು ಕಾರ್ಮಿಕರು 8 ಗಂಟೆ ಮಾತ್ರ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಸರ್ಕಾರಿ ಅಭಿಯೋಜಕ ಪಯಾಜ್ ಪಟೇಲ್, ವಕೀಲರಾದ ಟಿ.ಕೆ.ವಿಜಯರಾಘವ, ಜಗದೀಶ್ ಜಾಕೀ ಕಾರ್ಖಾನೆ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ