ಕಾರ್ಮಿಕರು ಸುರಕ್ಷತೆಗೆ ಮೊದಲ ಆದ್ಯತೆ ನೀಡಿ

KannadaprabhaNewsNetwork |  
Published : Jun 15, 2026, 02:45 AM IST
ಬೇಲೂರು    ​ಪಟ್ಟಣದ ವಿಷ್ಣು ರಿಜೆನ್ಸಿಯಲ್ಲಿ  ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಆರೋಗ್ಯ ಶಿಬಿರ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದು ಶ್ಲಾಘನೀಯ. ಸಂಘದ ಆದಾಯ, ಖರ್ಚಿನ ವಿವರಗಳನ್ನು ಪಾರದರ್ಶಕವಾಗಿ ಮಂಡಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಂಸ್ಥೆಯು ಮತ್ತಷ್ಟು ಉನ್ನತ ಮಟ್ಟಕ್ಕೆ ತಲುಪಲಿ ಎಂದರು. ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಶಶಿಕಲಾ ಮಾತನಾಡಿ, ವಿದ್ಯುತ್ ಉಪಕರಣಗಳ ರಿಪೇರಿ ಮಾಡುವ ಕಾರ್ಮಿಕರು ಕೆಲಸದ ವೇಳೆ ಮೊಬೈಲ್ ಬಳಸುವುದರಿಂದ ಗಮನ ಬೇರೆಡೆಗೆ ಹರಿದು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಕೆಲಸದ ವೇಳೆಯಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ತಪ್ಪಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೇಲೂರುಸಂಘಟನೆಯಲ್ಲಿ ಒಗ್ಗಟ್ಟು, ಪ್ರಾಮಾಣಿಕ ಸೇವೆ ಹಾಗೂ ಸದಸ್ಯರ ನಿರಂತರ ಸಹಕಾರ ಇದ್ದರೆ ಮಾತ್ರ ಮಾದರಿ ಸಂಘವಾಗಲು ಸಾಧ್ಯ ಎಂದು ರಾಜ್ಯಾಧ್ಯಕ್ಷ ಶಶಿಕುಮಾರ್ ಉಪ್ಪೊರರು ಹೇಳಿದರು.ಪಟ್ಟಣದಲ್ಲಿ ವಿಷ್ಣು ರಿಜೆನ್ಸಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹೊಯ್ಸಳ ವಿದ್ಯುತ್ ಉಪಕರಣಗಳ ರಿಪೇರಿದಾರರ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯೇ ನಮ್ಮ ನಿಜವಾದ ಶಕ್ತಿ. ಸದಸ್ಯರ ಹಿತರಕ್ಷಣೆಗಾಗಿ ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಬೇಕಿದೆ. ಘಟಕವು ಆರೋಗ್ಯ ಶಿಬಿರ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದು ಶ್ಲಾಘನೀಯ. ಸಂಘದ ಆದಾಯ, ಖರ್ಚಿನ ವಿವರಗಳನ್ನು ಪಾರದರ್ಶಕವಾಗಿ ಮಂಡಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಂಸ್ಥೆಯು ಮತ್ತಷ್ಟು ಉನ್ನತ ಮಟ್ಟಕ್ಕೆ ತಲುಪಲಿ ಎಂದರು. ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಶಶಿಕಲಾ ಮಾತನಾಡಿ, ವಿದ್ಯುತ್ ಉಪಕರಣಗಳ ರಿಪೇರಿ ಮಾಡುವ ಕಾರ್ಮಿಕರು ಕೆಲಸದ ವೇಳೆ ಮೊಬೈಲ್ ಬಳಸುವುದರಿಂದ ಗಮನ ಬೇರೆಡೆಗೆ ಹರಿದು ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಕೆಲಸದ ವೇಳೆಯಲ್ಲಿ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ ತಪ್ಪಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಅಧ್ಯಕ್ಷ ಕೇಬಲ್ ವಿಜಯಕುಮಾರ್ ಮಾತನಾಡಿ, ಪದಾಧಿಕಾರಿಗಳ ಒಗ್ಗಟ್ಟಿನಿಂದ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮುಂದೆಯೂ ಇದೇ ಸಹಕಾರ ಮುಂದುವರಿಯಲಿ ಎಂದು ಮನವಿ ಮಾಡಿದರು. ಹೊಯ್ಸಳ ವಿದ್ಯುತ್ ಉಪಕರಣಗಳ ರಾಜ್ಯ ಕಾರ್ಯದರ್ಶಿ ಜಯರಾಮ್ ಹಾಸನದ ಕಾರ್ಮಿಕ ಇಲಾಖೆ ಕಾವ್ಯ ಮಾತನಾಡಿದರು.ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ'''''''' ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ತಾಲೂಕು ಅಧ್ಯಕ್ಷ ಕೇಬಲ್ ವಿಜಯಕುಮಾರ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಿ.ಬಿ. ಶಿವರಾಜು. ಪ್ರಮುಖರಾದ ಮುರಳಿ ಹತ್ವಾರ್‌, ಶ್ರೀಹರಿ, ನಜೀರುದ್ದೀನ್ ಶಹಜಾದ್, ಅಚ್ಚುತರಾವ್, ಮಧುಮಾಲತಿ ರುದ್ರೇಶ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯ-ಸಿಬ್ಬಂದಿ ಕಾಳಜಿಯಿಂದ ರೋಗಿಗಳಿಗೆ ಉತ್ತಮ ಸೇವೆ: ವಿಶಾಲಾಕ್ಷಿ ಪದ್ಮನಾಬ್
ಪ್ರೊ.ಎ.ಎನ್.ಮೂರ್ತಿರಾವ್‌ ಮನುಷ್ಯನಲ್ಲಿರುವ ತಳಮಳ, ನಂಬಿಕೆ ತೆರೆದಿಟ್ಟಿದ್ದಾರೆ: ಎಂ.ಜಿ.ರೇವಣ್ಣ